Connect with us

Bengaluru City

ಅಭಿಮಾನಿ ಕಣ್ಣೀರಿಗೆ ಕರಗಿ ವಿಡಿಯೋ ಕಾಲ್ ಮಾಡಿ ಮಾತಾಡಿದ ಕಿಚ್ಚ

Published

on

ಬೆಂಗಳೂರು: ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟ-ನಟಿಯರನ್ನು ನೋಡಬೇಕು, ಮಾತನಾಡಿಸಬೇಕು ಎಂದು ಬಯಸುತ್ತಾರೆ. ಅದೇ ರೀತಿ ನಟ ಕಿಚ್ಚ ಸುದೀಪ್ ಅವರ ಅಭಿಮಾನಿಯೊಬ್ಬ ಅವರನ್ನು ನೋಡಲೇಬೇಕು ಎಂದು ಕಣ್ಣೀರು ಹಾಕಿದ್ದ. ಈ ಬಗ್ಗೆ ತಿಳಿದ ಸುದೀಪ್ ವಿಡಿಯೋ ಕಾಲ್ ಮೂಲಕ ಅಭಿಮಾನಿಯ ಜೊತೆ ಮಾತನಾಡಿದ್ದಾರೆ.

ಸುದೀಪ್ ಅಪ್ಪಟ ಅಭಿಮಾನಿಯೊಬ್ಬ ಅಪೆಂಡಿಕ್ಸ್ ಕಾಯಿಲೆಯಿಂದ ಬಳಲುತ್ತಿದ್ದಾನೆ. ಅಭಿಮಾನಿ ಅಪೆಂಡಿಕ್ಸ್ ಆಪರೇಷನ್ ಆಗಬೇಕು ಅದರೊಳಗೆ ಸುದೀಪ್ ಅವರನ್ನು ನೋಡಬೇಕು, ಆಪರೇಷನ್ ಆದಮೇಲೆ ಏನ್ ಆಗುತ್ತೊ ಗೊತ್ತಿಲ್ಲ ಎಂದು ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದ. ಅಭಿಮಾನಿಯ ಈ ವಿಡಿಯೋ ವೈರಲ್ ಆಗಿದ್ದು, ಇದು ಸುದೀಪ್ ಗಮನಕ್ಕೆ ಬಂದಿದೆ.

ನಟ ಸುದೀಪ್ ಆ ಅಭಿಮಾನಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಸುದೀಪ್ ವಿಡಿಯೋ ಕಾಲ್ ಮಾಡುತ್ತಿದ್ದಂತೆ ಅಭಿಮಾನಿ ಅವರನ್ನು ನೋಡಿ ಕಣ್ಣೀರು ಹಾಕಿದ್ದಾನೆ. “ನಿಮ್ಮ ದೊಡ್ಡ ಅಭಿಮಾನಿ ನಾನು, ನನಗೆ ಆರೋಗ್ಯ ಸರಿ ಇಲ್ಲ. ಅಪೆಂಡಿಕ್ಸ್ ಆಗಿದೆ. ನನಗೆ ಯಾವಾಗ ಏನ್ ಆಗುತ್ತೊ ಗೊತ್ತಿಲ್ಲ ಆದರೊಳಗೆ ನಿಮ್ಮನ್ನು ಒಮ್ಮೆ ನೋಡಬೇಕು. ನಿಮ್ಮ ಕಾಲಿಗೆ ಬೀಳುತ್ತೇನೆ ಅವಕಾಶ ಮಾಡಿಕೊಡಿ” ಎಂದು ವಿಡಿಯೋ ಮೂಲಕ ಕೇಳಿಕೊಂಡಿದ್ದಾನೆ.

ಕೊರೊನಾದಿಂದ ಎಲ್ಲರೂ ಮನೆಯಲ್ಲಿ ಲಾಕ್ ಆಗಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ಭೇಟಿಯಾಗಲು ಸಾಧ್ಯವಿಲ್ಲ. ಆದರೆ ಖಂಡಿತವಾಗಿಯೂ ನನ್ನ ಭೇಟಿಗೆ ವ್ಯವಸ್ಥೆ ಮಾಡಿಸುತ್ತೇನೆ” ಎಂದು ಸುದೀಪ್ ಅಭಿಮಾನಿಗೆ ಸಮಾಧಾನ ಮಾಡಿದ್ದಾರೆ.

ಅಲ್ಲದೇ ಅಭಿಮಾನಿಯ ಆರೋಗ್ಯ ಕೂಡ ವಿಚಾರಿಸಿದ್ದಾರೆ. ಸುದೀಪ್ ಅಭಿಮಾನಿಗೆ ಜೊತೆ ವಿಡಿಯೋ ಕಾಲ್‍ನಲ್ಲಿ ಮಾತನಾಡುತ್ತಿರುವ ವಿಡಿಯೋವನ್ನು ಅವರ ಫ್ಯಾನ್ಸ್ ಟ್ವಿಟ್ಟರಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *