ಧಾರವಾಡ: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹೊರವಲಯದ ತಪೋವನ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಸಾವನ್ನಪ್ಪಿದ ಇಬ್ಬರನ್ನು ಧಾರವಾಡ ತಾಲೂಕಿನ ಬೆನಕನಕಟ್ಟಿ ಗ್ರಾಮದ ಎಂದು ತಿಮ್ಮಣ್ಣ ಮುರಕಟ್ಟಿ (31) ಹಾಗೂ ಗುರುಸಿದ್ದ ದಾಸನಕೊಪ್ಪ ಎಂದು ಗುರುತಿಸಲಾಗಿದೆ. ಇಬ್ಬರು ಸೇರಿ ಮಾವಿನಕಾಯಿ ಮಾರಾಟದ ಹಣ ತರಲು ಕೆಲಗೇರಿಗೆ ಹೋಗಿದ್ದರು. ಈ ವೇಳೆ ಘಟನೆ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಒರ್ವನ ದೇಹ ಛಿದ್ರವಾಗಿದೆ. ಬೆಳಗಿನ ಜಾವವೇ ಈ ಘಟನೆ ನಡೆದಿದ್ದು, ಸದ್ಯ ಪರಾರಿಯಾದ ವಾಹನ ಹಿಡಿಯಲು ಪೊಲೀಸರು ಮಾಹಿತಿ ಕಲೆ ಹಾಕುತಿದ್ದು, ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.