ಬೆಂಗಳೂರು: ಪತಿಗೆ ಕುಡಿಯೋದೊಂದೇ ಚಿಂತೆ, ಕುಡಿದ ಮತ್ತಿನಲ್ಲಿ ಪತ್ನಿ ಮೇಲೆ ಅನುಮಾನಪಡುತ್ತಿದ್ದ. ಈತನ ಕಿರುಕುಳದಿಂದ ಬೇಸತ್ತ ಪತ್ನಿ ಬಿಹಾರದಿಂದ ಬೆಂಗಳೂರಿಗೆ ಬಂದು ಜೀವನ ಕಟ್ಟಿಕೊಂಡಿದ್ದಳು. ಆದರೂ ಬಿಡದ ಪಾಪಿ ಪತಿ ಬೆಂಗಳೂರಿಗೆ ಆಗಮಿಸಿ ಪತ್ನಿ ಕೊಲೆಗೆ ಯತ್ನಿಸಿದ್ದಾನೆ.
Advertisement
ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿ ಅನ್ವರಾ ಬೇಗಂ ಮಕ್ಕಳನ್ನು ಜೊತೆಗೆ ಕರೆದುಕೊಂಡು ಬಿಹಾರದಿಂದ ಬೆಂಗ್ಳೂರಿಗೆ ಬಂದಿದ್ದರು. ಮಾರತ್ಹಳ್ಳಿ ಬಳಿ ಶೆಡ್ನಲ್ಲಿ ವಾಸ ಮಾಡಿಕೊಂಡು, ಹೌಸ್ ಕೀಪಿಂಗ್ ಕೆಲಸ ಮಾಡಿ ಮಕ್ಕಳನ್ನು ಸಾಕಿಕೊಂಡು ಜೀವನ ಮಾಡುತ್ತಿದ್ದರು. ಎರಡು ವರ್ಷದ ಬಳಿಕ ಪತ್ನಿ ಹುಡುಕಿಕೊಂಡು ಬೆಂಗಳೂರಿಗೆ ಆಗಮಿಸಿದ್ದ ಪತಿ ಭುಜ್ರತ್ ಅಲಿ, ಆಕೆಯನ್ನು ಕೊಲೆ ಮಾಡಲೆಂದು ಬಿಹಾರದಲ್ಲೇ ಹರಿತವಾದ ಚಾಕು ಖರೀದಿಸಿ ಜೊತೆಯಲ್ಲೇ ತಂದಿದ್ದ.
Advertisement
ಭುಜ್ರತ್ ಅಲಿ ಗುರುವಾರ ಪತ್ನಿ ಕೊಲೆಗೆ ಯತ್ನಿಸಿದ್ದ, ಈ ವೇಳೆ ಪತ್ನಿ ವಿರೋಧ ವ್ಯಕ್ತಪಡಿಸಿದರೂ ಮುಖವನ್ನೇ ಕತ್ತರಿಸಿದ್ದ. ಬಳಿಕ ಕೊಲೆಯಾಗಿದ್ದಾಳೆಂದು ಭಯಬಿದ್ದು ಸ್ಥಳದಿಂದ ಪರಾರಿಯಾಗಿದ್ದ. ಯಾವುದೇ ಸುಳಿವು ಇಲ್ಲದೆ ಕೇವಲ ಪೋಟೋ ಹಿಡಿದು ಮಾರತ್ ಹಳ್ಳಿ ಪೊಲೀಸರು ಹುಡುಕಾಟ ನಡೆಸಿದ್ದರು. ಬಳಿಕ ಕೇವಲ 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
Advertisement
Advertisement
ಕೆ.ಆರ್.ಪುರಂ ರೈಲ್ವೆ ಸ್ಟೇಷನ್ ಬಳಿ ಸ್ವಲ್ಪ ಯಾಮಾರಿದ್ದರೂ ಆರೋಪಿ ಎಸ್ಕೇಪ್ ಆಗುತ್ತಿದ್ದ. ಸದ್ಯ ಗಾಯಾಳು ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿ, ಪೊಲೀಸರು ಮಾನವೀಯತೆ ಮೆರೆದಿದ್ದಾರೆ.