– ಸ್ವಾತಂತ್ರ್ಯ ಬರೋದಕ್ಕೂ 12 ದಿನ ಮುಂಚೆ ಹುಟ್ಟಿದ್ದೇನೆ
– ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಜೆಡಿಎಸ್ ಇದೆ
ಬೆಂಗಳೂರು: ಅಧಿಕಾರಕ್ಕೆ ಬಂದಾಗ ಸ್ಥಾನಮಾನ ಹಂಚಿಕೊಳ್ಳೋಣ. ಈಗ ಎಲ್ಲರೂ ಒಟ್ಟಾಗಿ ಪಕ್ಷಕ್ಕೆ ಕೆಲಸ ಮಾಡಿ. ಕೆಲಸ ಮಾಡಿದರೆ ನಾವೇ ಅಧಿಕಾರಕ್ಕೆ ಬರೋದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು ಸಿಂದಗಿ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ ಮನಗೊಳಿ ಪುತ್ರ ಅಶೋಕ್ ಮನಗೊಳಿ ಅಧಿಕೃತವಾಗಿ ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡಿದ್ದು, ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಅಶೋಕ್ ಮನಗೂಳಿ ಷರತ್ತಿಲ್ಲದೆ ಕಾಂಗ್ರೆಸ್ ಸೇರಿದ್ದಾರೆ. ಕೆಲವು ದಿನಗಳ ಹಿಂದೆ ನನ್ನನ್ನು ಭೇಟಿ ಮಾಡಿದ್ದರು. ಅವರ ತಂದೆಯೂ ನನ್ನನ್ನ ಭೇಟಿ ಮಾಡಿದ್ದರು. ನಾನು ಜೆಡಿಎಸ್ ನಲ್ಲಿ ಶಾಸಕನಾಗಿದ್ದೇನೆ. ನಾನು ಕಾಂಗ್ರೆಸ್ಸಿಗೆ ಬರೋದಕ್ಕೆ ಆಗಲ್ಲ. ನನ್ನ ಮಗನನ್ನ ಸೇರಿಸಿಕೊಳ್ಳಿ ಎಂದಿದ್ದರು. ಸ್ಥಳೀಯರ ಜೊತೆ ಚರ್ಚಿಸಿ ಸೇರಿಕೊಳ್ಳಿ ಎಂದಿದ್ದೆ. ಇಂದು ಅಶೋಕ್ ಪಕ್ಷಕ್ಕೆ ಸೇರಿದ್ದಾರೆ ಎಂದರು.
Advertisement
Advertisement
ಇಲ್ಲಿಯವರೆಗೆ ಅವರು ಹಾಗೂ ಅವರ ತಂದೆ ಜೆಡಿಎಸ್ ನಲ್ಲಿದ್ದರು. ನನ್ನ ಜೊತೆಯಲ್ಲೂ ಮಿನಿಸ್ಟರ್ ಆಗಿದ್ದರು. ಮನಗೂಳಿ ನಮಗೆ ತುಂಬಾ ಚಿರಪರಿಚಿತರು. ಈಗ ಅವರ ಸೇರ್ಪಡೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
Advertisement
ನಾಳೆಯೇ ಚುನಾವಣೆಗೆ ಹೋದ್ರೂ ನಾವು ಗೆಲ್ತೇವೆ. ನೂರಕ್ಕೆ ಶೇ.200ರಷ್ಟು ಅಧಿಕಾರಕ್ಕೆ ಬರುತ್ತೇವೆ. ಅಧಿಕಾರಕ್ಕೆ ಬಂದಾಗ ಸ್ಥಾನಮಾನ ಹಂಚಿಕೊಳ್ಳೋಣ. ಈಗ ಎಲ್ಲರೂ ಒಟ್ಟಾಗಿ ಪಕ್ಷಕ್ಕೆ ಕೆಲಸ ಮಾಡೋಣ ಎಂದು ಮಾಜಿ ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
Advertisement
ಸ್ವಾತಂತ್ರ್ಯಕ್ಕಾಗಿ ಬಿಜೆಪಿಯವರು ಯಾರಾದರೂ ಪ್ರಾಣ ತ್ಯಾಗ ಮಾಡಿದ್ದೀರಾ…? ನರೇಂದ್ರ ಮೋದಿ ಸಹ ಹುಟ್ಟಿದ್ದು ಸ್ವಾತಂತ್ರ್ಯ ಬಂದ ಮೇಲೆ. ನಾನು ಸ್ವಾತಂತ್ರ್ಯ ಬರುವುದಕ್ಕೂ 12 ದಿನದ ಮುಂಚೆ ಹುಟ್ಟಿದ್ದೇನೆ. ಅಂತವರಿಂದ ದೇಶಭಕ್ತಿ ಕಲಿಬೇಕಾ..? ಗೋಡ್ಸೆ ಕೊಂದವರಿಂದ ಪಾಠ ಕಲಿಬೇಕಾ..? ನರೇಂದ್ರ ಮೋದಿ ಬರೀ ಸುಳ್ಳು ಹೇಳ್ತಾರೆ. ದಲಿತ, ಅಲ್ಪಸಂಖ್ಯಾತ, ಹಿಂದುಳಿದವರಿಗೆ ಅನ್ಯಾಯ ಮಾಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಯಾವುದೇ ಸಿದ್ಧಾಂತವಿಲ್ಲ ಎಂದು ಜರಿದರು.
ಜೆಡಿಎಸ್ ರೀಜನಲ್ ಪಾರ್ಟಿ ನಾಲ್ಕು ಜಿಲ್ಲೆಗಳಲ್ಲಿ ಮಾತ್ರವಿದೆ. ಪ್ರಾದೇಶಿಕ ಪಕ್ಷ ಅಷ್ಟೇ ಪಾಪಾ ಮನಗೂಳಿ ಅಲ್ಲೆ ಇದ್ರು ನಾನು ಹೇಳಿದ್ದೆ, ನಮ್ಮ ಪಕ್ಷಕ್ಕೆ ಬಾ ಎಂದು ಹೇಳಿದ್ದೆ. ಅವರ ಕ್ಷೇತ್ರಕ್ಕೆ ನಾನೇನೇ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೆ. ಬಿಜೆಪಿಯವರು ಏನು ಕೇಳಿದ್ರು ಕೊರೊನಾ ಅಂತಾರೆ. ಕೋವಿಡ್ ಗೆ ಖರ್ಚು ಮಾಡಿದ್ದು, 5 ಸಾವಿರ ಕೋಟಿ. ಅದರಲ್ಲಿ 3 ಸಾವಿರ ಕೋಟಿ ನುಂಗಿದ್ದಾರೆ ಎಂದು ಆರೋಪಿಸಿದರು.
ಯಡಿಯೂರಪ್ಪ ಬಜೆಟ್ ಮಂಡನೆ ಮಾಡುವಾಗ ಹಸಿರು ಶಾಲು ಹಾಕಿಕೊಂಡಿರುತ್ತಾರೆ. ಪ್ರಮಾಣ ವಚನ ಸ್ವೀಕರಿಸುವಾಗ ಹಸಿರು ಶಾಲು ಹಾಕಿರುತ್ತಾರೆ. ಅದನ್ನು ಬಿಟ್ಟು ಉಳಿದ ಸಮಯದಲ್ಲಿ ಹಸಿರು ಶಾಲು ಇರಲ್ಲ. ಬಿ.ಎಸ್ ಯಡಿಯೂರಪ್ಪ ರೈತ ನಾಯಕ ಅಲ್ಲ ಎಂದರು.
ಬೈ ಎಲೆಕ್ಷನ್ ಘೋಷಣೆ ಆಗುತ್ತದೆ. ಇನ್ನೂ ಅಭ್ಯರ್ಥಿ ಘೋಷಣೆ ಆಗಿಲ್ಲಸಿಂದಗಿ ಕ್ಷೇತ್ರದಲ್ಲಿ ಗೆಲ್ಲಬೇಕು. ಅದಕ್ಕೆ ಸಹಕರಿಸಬೇಕು. ಯಾರಿಗಾದರೂ ಟಿಕೆಟ್ ಸಿಗಲಿ. ಗೆಲ್ಲಬೇಕು, ಅಧಿಕಾರ ಮುಂದೆ ಹಂಚಿಕೊಳ್ಳೋಣ. ಯಾಕೆಂದರೆ ಮುಂದೆ ನಮ್ಮ ಪಕ್ಷ ಅಧಿಕಾರ ಬರುತ್ತೆ. ಅಧಿಕಾರಕ್ಕ ಬಂದ ಮೇಲೆ ಅಧಿಕಾರ ಹಂಚಿಕೆ ಮಾಡಿಕೊಳ್ಳೋಣ ಎಂದು ಮಾಜಿ ಸಿಎಂ ತಿಳಿಸಿದರು.