ಚಂಡೀಗಡ: ಎರಡು ವರ್ಷದ ಮಗುವನ್ನು ಅಣ್ಣನೇ ಚಲಿಸುತ್ತಿರುವ ರೈಲಿನಡಿಗೆ ದೂಡಿರುವ ಆಘಾತಕಾರಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಮಗು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದೆ.
Advertisement
ದೆಹಲಿ ಹತ್ತಿರದ ಫರಿದಾಬಾದ್ನ ಬಲ್ಲಾಬ್ಗರ್ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಅಣ್ಣನೇ 2 ವರ್ಷದ ಮಗುವನ್ನು ಚಲಿಸುತ್ತಿದ್ದ ರೈಲಿನ ಮುಂದೆ ದೂಡಿದ್ದು, ಆಶ್ಚರ್ಯಕರ ರೀತಿಯಲ್ಲಿ ಮಗು ಪಾರಾಗಿದೆ ಎಂದು ಹೇಳಲಾಗಿದೆ. ರೈಲ್ವೆ ಟ್ರ್ಯಾಕ್ ಬಳಿ ಆಟವಾಡುತ್ತಿದ್ದು, ಈ ವೇಳೆ ಗೂಡ್ಸ್ ಟ್ರೈನ್ ವೇಗವಾಗಿ ಬಂದಿದೆ. ಮಗುವನ್ನು ಕಂಡ ರೈಲಿನ ಲೊಕೊಪೈಲಟ್ ತುರ್ತು ಬ್ರೇಕ್ ಹಾಕಿದ್ದಾನೆ. ಆದರೆ ರೈಲು ಆಗಲೇ ಮಗುವನ್ನು ದಾಟಿ ಚಲಿಸಿದೆ.
Advertisement
ತಕ್ಷಣವೇ ಎಚ್ಚೆತ್ತ ಲೊಕೊ ಪೈಲಟ್ ಹಾಗೂ ಸಹಾಯಕ ರೈಲಿನಿಂದ ಕೆಳಗಿಳಿದು ಬಂದು ಮಗುವನ್ನು ಹುಡುಕಿದ್ದಾರೆ. ಆದರೆ ಯಾವುದೇ ಒಂದು ಸಣ್ಣ ಗಾಯ ಸಹ ಆಗದೆ ಮಗು ಪಾರಾಗಿದೆ. ಲೊಕೊ ಪೈಲಟ್ ಇತರರ ಸಹಾಯದಿಂದ ಮಗುವನ್ನು ಎಂಜಿನ್ ಕೆಳಗಿನಿಂದ ಹೊರ ತಂದಿದ್ದಾರೆ. ನಂತರ ಮಗುವನ್ನು ತಾಯಿಗೆ ಒಪ್ಪಿಸಲಾಗಿದೆ.
Advertisement
Advertisement
ಈ ಘಟನೆ ಕುರಿತು ಲೊಕೊಪೈಲಟ್ ದಿವಾನ್ ಸಿಂಗ್ ಹಾಗೂ ಸಹಾಯಕ ಅತುಲ್ ಆನಂದ್ ಅವರು ರೈಲ್ವೆ ಇಲಾಖೆ ಪತ್ರದ ಮೂಲಕ ವಿವರ ನೀಡಿದ್ದಾರೆ. ಟ್ರ್ಯಾಕ್ ಮಧ್ಯದಲ್ಲಿ ಮಗು ಸಿಲುಕಿದ್ದನ್ನು ಕಂಡು ನಾವು ತುರ್ತು ಬ್ರೇಕ್ ಹಾಕಿದೆವು. ರೈಲು ನಿಲ್ಲುತ್ತಿದ್ದಂತೆ, ನಾವು ಕೆಳಗಿಳಿದು ಎಂಜಿನ್ ಕೆಳಗೆ ಸಿಲುಕಿದ್ದ ಮಗುವನ್ನು ರಕ್ಷಿಸಿದೆವು. ನಂತರ ತಾಯಿಗೆ ಮಗುವನ್ನು ಒಪ್ಪಿಸಿದೆವು ಎಂದು ಪತ್ರದಲ್ಲಿ ಅವರು ತಿಳಿಸಿದ್ದಾರೆ. ಅಲ್ಲದೆ ಸಮಯ ಪ್ರಜ್ಞೆ ಮೆರೆದಿದ್ದಕ್ಕೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಲೊಕೊಪೈಲಟ್ಗಳಿಗೆ ಬಹುಮಾನವನ್ನು ಸಹ ಘೋಷಿಸಿದ್ದಾರೆ.