ಬೆಂಗಳೂರು: ಕೊರೊನಾ ಮಹಾಮಾರಿಯ ಅಟ್ಟಹಾಸ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲು ಕೆಲವರು ಅಂಬುಲೆನ್ಸ್ ಸಿಗದೆ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಈ ಮಧ್ಯೆ ಅಪಘಾತ ಸಂಭವಿಸಿ ರೋಗಿ ಒದ್ದಾಡುತ್ತಿದ್ದರೂ ಅಂಬುಲೆನ್ಸ್ ಗಳು ಸಿಗುತ್ತಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಸಿಲಿಕಾನ್ ಸಿಟಿಯಲ್ಲೊಂದು ಘಟನೆ ನಡೆದಿದೆ.
ಹೌದು. ಅಪಘಾತ ಸಂಭವಿಸಿ ವ್ಯಕ್ತಿಯೊಬ್ಬರು ಕುಸಿದು ಬಿದ್ದಿದ್ದಾರೆ. ಈ ವೇಳೆ ಅಂಬುಲೆನ್ಸ್ ಗೆ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಘಟನೆಯಿಂದಾಗಿ ವ್ಯಕ್ತಿಯ ಕಾಲಿಗೆ ಏಟು ಬಿದ್ದಿದ್ದು, ಗಂಭೀರ ಗಾಯಗೊಂಡು ಎದ್ದೇಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಒದ್ದಾಡುತ್ತಿದ್ದರು.
Advertisement
Advertisement
ಇದನ್ನು ಅರಿತ ಪಬ್ಲಿಕ್ ಟಿವಿ ಪ್ರತಿನಿಧಿ ಸ್ಥಳದಲ್ಲಿಯೇ ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಈ ವೇಳೆ, ಅಂಬುಲೆನ್ಸ್ ಇಲ್ಲ. ನಾವೇನ್ ಮಾಡೋಣ ಎಂಬ ಉತ್ತರ ಬಂದಿದೆ. ಅಲ್ಲದೆ ಕೋವಿಡ್ ರೋಗಿಗಳಿಗೆ ಅಂಬುಲೆನ್ಸ್ ಹೋಗಿದೆ. ಹೀಗಾಗಿ ಸದ್ಯ ನಮ್ಮಲ್ಲಿ ಅಂಬುಲೆನ್ಸ್ ಇಲ್ಲ. ಬಂದಾಗ ಕಳುಹಿಸುತ್ತೇವೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
Advertisement
ಒಟ್ಟಿನಲ್ಲಿ ಒಂದೆಡೆ ಜನ ಕೊರೊನಾದಿಂದ ಬೆಡ್ ಸಿಗದೆ ಸಾವನ್ನಪ್ಪಿದ್ರೆ, ಇನ್ನೂ ಕೆಲವರು ಅಂಬುಲೆನ್ಸ್ ಸಿಗದೆ ರಸ್ತೆ ಬದಿಯಲ್ಲೇ ನರಳಿ ನರಳಿ ಸಾವನ್ನಪುತ್ತಿದ್ದಾರೆ. ಈ ಮಧ್ಯೆ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡರೇ ಅಂಬುಲೆನಸ್ ಗಳೇ ಸಿಗದರಿರುವುದು ವಿಪರ್ಯಾಸವಾಗಿದೆ.