Sunday, 27th May 2018

Recent News

ಮನೆ ಮುಂದೆ ಅನುಚಿತವಾಗಿ ವರ್ತನೆ ಮಾಡಿದ್ದಲ್ದೇ ಪ್ರಶ್ನೆ ಮಾಡಿದ ಯುವತಿಯ ತಂದೆಯ ಮೇಲೆ ಹಲ್ಲೆ

ಹುಬ್ಬಳ್ಳಿ: ಯುವತಿಯ ಮನೆ ಮುಂದೆ ಅನುಚಿತವಾಗಿ ವರ್ತನೆ ಮಾಡಿದ್ದಲ್ಲದೇ ಪ್ರಶ್ನೆ ಮಾಡಿದ ಯುವತಿಯ ತಂದೆಯನ್ನು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ತಡರಾತ್ರಿ ಹುಬ್ಬಳ್ಳಿಯಲ್ಲಿ ನಡೆದಿದೆ.

ನಗರದ 60ನೇ ವಾರ್ಡ್‍ನ ಮಸ್ತನ್ ಸೂಪಾದ ನಿವಾಸಿ ಮುಷ್ತಾಕ್ ಮಹಮ್ಮದ್ ಬಿಜಾಪುರ ಹಲ್ಲೆಗೊಳಗಾದ ವ್ಯಕ್ತಿ. ಸ್ಥಳೀಯ ಯುವಕರಾದ ಸಾಧಿಕ್ ಗಿರಣಿ, ಮುಷ್ತಾಕ್ ಗಿರಣಿ, ಯೂಸುಫ್ ಎಂಬವರು ಹಲ್ಲೆ ಮಾಡಿದ್ದಾರೆ.

ಈ ಹಿಂದೆ ಸಾಧಿಕ್ ಮುಷ್ತಾಕ್ ರ ಮಗಳು ಮುಸ್ಕಾನ್(16)ಳ ಜೊತೆ ಓಡಿ ಹೋಗಿದ್ದ. ಈ ಕುರಿತಂತೆ ಹುಡುಗಿಗೆ 17 ವರ್ಷ ತುಂಬಿರದ ಕಾರಣ ಕಸಬಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಆದರೆ ಪೊಲೀಸರು ಎರಡು ಮನೆಯವರನ್ನು ಕರೆಯಿಸಿ ರಾಜಿ ಸಂಧಾನ ಮಾಡಿದ್ದರು. ಆದರೆ ಸಾಧಿಕ್ ಇಲ್ಲ ಸಲ್ಲದ ನೆಪ ಮಾಡಿಕೊಂಡು ಮುಷ್ತಾಕ್ ಮನೆಯ ಮುಂದೆ ಓಡಾಡುತ್ತಿದ್ದ.

ಇದನ್ನು ಪ್ರಶ್ನಿಸಿದಕ್ಕೆ ಮುಷ್ತಾಕ್ ರ ಮೇಲೆ ಸಾಧಿಕ್ ಮತ್ತು ಆತನ ಸ್ನೇಹಿತರು ತಲ್ವಾರ್, ಕಬ್ಬಿಣದ ರಾಡ್ ಗಳಿಂದ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತ ಮುಷ್ತಾಕ್ ದೂರಿದ್ದಾನೆ.

ಸದ್ಯ ಗಾಯಾಳು ಮುಷ್ತಾಕ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *