Tuesday, 20th March 2018

Recent News

ಯಡಿಯೂರಪ್ಪ ನಂಬರ್ 1 ಸುಳ್ಳುಗಾರ: ಸಿದ್ದರಾಮಯ್ಯ

ಗದಗ: ಬಿಎಸ್ ಯಡಿಯೂರಪ್ಪ ನಂಬರ್-1 ಸುಳ್ಳುಗಾರ. ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಒಮ್ಮೆಯೂ ಸತ್ಯ ನುಡಿದಿಲ್ಲ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಗದಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾವುದೂ ಕ್ಷೇತ್ರವಿಲ್ಲದ ಕಾರಣ ಬಿಎಸ್‍ವೈ ಅವರು ಉತ್ತರ ಕರ್ನಾಟಕದತ್ತ ಮುಖ ಮಾಡಿದ್ದಾರೆ. ಶಿಕಾರಿಪುರ ಕ್ಷೇತ್ರವನ್ನು ತಮ್ಮ ಮಗನಿಗೆ ಉಳಿಸುವುದಕ್ಕಾಗಿ ಬಿಎಸ್‍ವೈ ಉತ್ತರದತ್ತ ಸ್ಪರ್ಧಿಸಲಿದ್ದಾರೆ ಅಂದ್ರು.

ಉತ್ತರ ಕರ್ನಾಟದಲ್ಲಿ ಸ್ಪರ್ಧಿಸುವಂತೆ ಅಭಿಮಾನದಿಂದ ಜಿಲ್ಲೆಯ ಸಾಕಷ್ಟು ಜನ ನನಗೂ ಒತ್ತಾಯಿಸುತ್ತಿದ್ದಾರೆ. ಆದರೆ ನನಗೆ ನನ್ನದೇ ಆದ ಕ್ಷೇತ್ರವಿದೆ. ಸದ್ಯ ಯಡಿಯೂರಪ್ಪ ಅವರಿಗೆ ಸ್ಪರ್ಧೆಗೆ ಯಾವ ಕ್ಷೇತ್ರವಿದೆ? ಹಾಗಾಗಿ ಅವರು ಕ್ಷೇತ್ರವಿಲ್ಲದ ಕಾರಣ ಉತ್ತರ ಕರ್ನಾಟಕದತ್ತ ಮುಖಮಾಡಿದ್ದಾರೆ ಎಂದರು.

ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣ ಯಶಸ್ವಿಯಾಗಿಲ್ಲ. ಕಪ್ಪು ಹಣ ಬರಲಿಲ್ಲ, ಭಯೋತ್ಪಾದನೆ ನಿಂತಿಲ್ಲ. ಮೋದಿ ಸರ್ಕಾರ ಏನು ಮಾಡಿದೆ? ಅಂತ ಹೇಳಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *