Sunday, 27th May 2018

Recent News

ಪ್ರಧಾನಿ ಟೀಕಿಸೋ ಭರದಲ್ಲಿ ಎಡವಟ್ಟು- ಐಪಿಎಸ್ ಅಂದ್ರೆ ಇಂಡಿಯನ್ ಪಕೋಡಾ ಸರ್ವೀಸ್ ಎಂದ ರಾಹುಲ್ ಗಾಂಧಿ

ಯಾದಗಿರಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವ ಭರದಲ್ಲಿ ಎಡವಟ್ಟು ಮಾಡಿದ್ದಾರೆ.

ಕರ್ನಾಟಕದಲ್ಲಿ ಟೆಂಪಲ್ ರನ್ ಮಾಡುತ್ತಿರುವ ರಾಹುಲ್ ಗಾಂಧಿ ಯಾದಗಿರಿಯ ಶಹಾಪೂರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಈ ಎಡವಟ್ಟು ಮಾಡಿದ್ದಾರೆ.

ತಮ್ಮ ಭಾಷಣದಲ್ಲಿ ಪ್ರಧಾನಿ ಪಕೋಡಾ ಹೇಳಿಕೆ ಟೀಕಿಸಲು ಹೋಗಿ ಐಪಿಎಸ್‍ಗೆ ಹೊಸ ವ್ಯಾಖ್ಯಾನ ನೀಡಿದ್ದಾರೆ. ಐಪಿಎಸ್ ಅಂದ್ರೆ ಇಂಡಿಯನ್ ಪಕೋಡಾ ಸರ್ವೀಸ್ ಎಂಬುದಾಗಿ ರಾಗಾ ಹೇಳಿಕೆಯೊಂದನ್ನು ನೀಡಿದ್ದಾರೆ. ರಾಹುಲ್ ಹೇಳಿಕೆಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಪ್ರಧಾನಿ ಟೀಕಿಸೋ ಭರದಲ್ಲಿ ಐಪಿಎಸ್‍ಗಳಿಗೆ ರಾಗಾ ಅವಮಾನ ಮಾಡಿದ್ರಾ ಎಂಬ ಪ್ರಶ್ನೆ ಉದ್ಭವವಾಗಿದೆ.

ಮೋದಿ ಜನರಿಗೆ ಉದ್ಯೋಗ ನೀಡಬೇಕು. ರೈತರ ಸಾಲ ಮನ್ನಾ ಮಾಡಬೇಕೆಂದು ಬಯಸುತ್ತಾರೆ. ಆದ್ರೆ ಮೋದಿ ಅವರು ಬ್ಯಾಟಿಂಗ್ ಮಾಡುವಾಗ ವಿಕೆಟ್ ನೋಡುತ್ತಾರೆ, ಮುಂದೆ ನೋಡುವುದಿಲ್ಲ. ನೋಟು ಅಮಾನ್ಯಕರಣ ಹಾಗೂ ಗಬ್ಬರ್ ಸಿಂಗ್ ಟ್ಯಾಕ್ಸ್ ಜಾರಿಗೆ ತಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಯಾವುದೇ ಹಗರಣ ನಡೆಸಿಲ್ಲ. ಅಭಿವೃದ್ಧಿ ಮಾಡಿದೆ. ಇಂದಿರಾ ಕ್ಯಾಂಟಿನ್ ತೆರೆಯುವ ಮೂಲಕ ಜನರ ಹಸಿವು ನಿಗಿಸಿದೆ ಅಂತ ರಾಹುಲ್ ಹೇಳಿದ್ರು.

ಇದೇ ವೇಳೆ ರಾಜ್ಯದಲ್ಲಿ ಟೆಂಪಲ್ ರನ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನನಗೆ ಯಾವ ದೇವಾಲಯ ಇಷ್ಟ ಅಲ್ಲಿಗೆ ನಾನು ಹೋಗುತ್ತೇನೆ. ದೇವಾಲಯಕ್ಕೂ ಹೋಗುತ್ತೇನೆ, ಮಸೀದಿಗೂ ಹೋಗುತ್ತೇನೆ. ಹೀಗಾಗಿ ದೇವಸ್ಥಾನಗಳಿಗೆ ನಾನು ಭೇಟಿ ನೀಡಿದ್ದೇನೆ. ಇದರಲ್ಲಿ ತಪ್ಪೇನಿದೆ ಅಂತ ಪ್ರಶ್ನಿಸಿದ್ರು.

Leave a Reply

Your email address will not be published. Required fields are marked *