ಬನಶಂಕರಿ ದೇವಿಯ ಸೀರೆ ವಿರುದ್ಧ ದೂರು..! ಏನಿದು ವಿಚಿತ್ರ ಘಟನೆ?

ಬೆಂಗಳೂರು: ಇದು ಅಂತಿಂಥ ದೂರು ಅಲ್ಲ, ದೇವರ ವಿರುದ್ಧದ ದೂರು. ಬಹುಶಃ ಇಂಥದೊಂದು ದೂರನ್ನು ಇಲ್ಲಿಯವರೆಗೆ ಯಾರೂ ನೀಡಿಲ್ಲ ಅನಿಸುತ್ತೆ. ಬನಶಂಕರಿ ದೇವಿಯ ಸೀರೆ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. .

ಕಾಣಿಕೆಯ ರೂಪದಲ್ಲಿ ದೇವಿಗೆ ಭಕ್ತರು ಸೀರೆ ಅರ್ಪಣೆ ಮಾಡ್ತಾರೆ. ಆ ಸೀರೆಯನ್ನು ಹರಾಜಿನಲ್ಲಿ ಮಾರಾಟ ಮಾಡಲಾಗುತ್ತೆ. ಆದ್ರೆ ಈ ಸೀರೆಯ ಕ್ವಾಲಿಟಿ ಸರಿಯಿಲ್ಲ, ರೇಟು ದುಪ್ಪಟ್ಟು ಹೇಳಿ ನನ್ನ ಯಾಮಾರಿಸಿದ್ದಾರೆ ಅಂತಾ ದೂರು ದಾಖಲಾಗಿದೆ.

ಬೆಂಗಳೂರಿನ ತ್ಯಾಗರಾಜನಗರದ ಅಂಧ ಮಹಿಳೆಯೊಬ್ಬರು ಮುಜರಾಯಿ ಇಲಾಖೆ ವಿರುದ್ಧವೇ ದೂರು ನೀಡಿದ್ದಾರೆ. ಬನಶಂಕರಿ ದೇವಿಯ ಸೀರೆಯೊಂದರ ಬೆಲೆ 9 ಸಾವಿರ ರೂಪಾಯಿ. ಆದರೆ 4 ಸಾವಿರಕ್ಕೆ ಹರಾಜಿಗೆ ಕೊಡ್ತಿದ್ದೀವಿ, ತೆಗೆದುಕೊಳ್ಳಿ ಅಂತಾ ದೇವಸ್ಥಾನದವರು ಹೇಳಿದ್ದಾರೆ. ಮೊದ್ಲೆ ಕಣ್ಣುಕಾಣದ ಕೌಸಲ್ಯ ಅವ್ರು ಹೇಳಿದ್ದನ್ನು ನಂಬಿ ಸೀರೆ ಹರಾಜಿನಲ್ಲಿ ತೆಗೆದುಕೊಂಡಿದ್ದಾರೆ.

ಆದ್ರೆ ಮನೆಗೆ ತಂದಾಗ ಅದು ರೇಷ್ಮೆ ಅಲ್ಲ. ಅಬ್ಬಾಬ್ಬ ಅಂದ್ರೆ 800 ರೂಪಾಯಿ ಬೆಲೆಯದ್ದು, ತಾನು ಮೋಸಹೋಗಿದ್ದೇನೆ ಅಂತಾ ಗೊತ್ತಾಗಿದೆ. ದೇವಸ್ಥಾನಕ್ಕೆ ತೆರಳಿ ಎಕ್ಸ್‍ಚೇಂಚ್ ಮಾಡಿಸಿಕೊಳ್ಳಿ ಅಂತಾ ಹೇಳಿದ್ರೂ ಕೇಳ್ತಿಲ್ಲ. ಈಗ ಮುಜರಾಯಿ ಇಲಾಖೆಗೆ ದೂರು ನೀಡಿದ್ದಾರೆ.

ಇಂತಹ ದೂರು ಮುಜರಾಯಿ ಇಲಾಖೆಗೆ ಬಹುಶಃ ವಿಚಿತ್ರ ಕೇಸ್ ಆಗಿರಬಹುದು. ಒಟ್ಟಿನಲ್ಲಿ ದೇವರ ಸೀರೆ ದೂರಿಗೆ ಇಲಾಖೆ ಸ್ಪಂದಿಸುತ್ತಾ ಅಂತಾ ನೋಡಬೇಕು.

LEAVE A REPLY