Thursday, 21st September 2017

Recent News

ಬ್ರೆಸ್‍ಲೆಟ್ ಬೆಲೆ ಕೇಳಿ ಶಾಕ್ ಆಗಿ ಪ್ರಜ್ಞೆತಪ್ಪಿ ಬಿದ್ದ ಮಹಿಳೆ!

ಬೀಜಿಂಗ್: ಜುವೆಲ್ಲರಿ ಅಂಗಡಿಗೆ ಹೋಗಿ ಬ್ರೆಸ್‍ಲೆಟ್ ಬೆಲೆಯನ್ನು ಕೇಳಿ ಮಹಿಳೆಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ ಚೀನಾದಲ್ಲಿ ನಡೆದಿದೆ.

ಯುನ್ನಾನ್ ಪ್ರಾಂತ್ಯದಲ್ಲಿ ಫ್ಯಾನ್ಸಿ ಅಂಗಡಿಗೆ ಹೋಗಿದ್ದ ಮಹಿಳೆಯೊಬ್ಬಳು ಬ್ರೆಸ್‍ಲೆಟ್ ಒಂದನ್ನು ಹಿಡಿದು ನೋಡುತ್ತಿದ್ದಳು. ಹರಳಿನ ಬ್ರೆಸ್‍ಲೆಟ್ ಕೈಗೆತ್ತಿಕೊಂಡು ಪರಿಶೀಲಿಸುತ್ತಿದ್ದಾಗ ಆಕಸ್ಮಿಕವಾಗಿ ಕೈಯಿಂದ ಜಾರಿ ಬಿದ್ದು 2 ತುಂಡಾಗಿದೆ.

ಎರಡು ಭಾಗವಾದ ಹಿನ್ನೆಲೆಯಲ್ಲಿ ತಕ್ಷಣ ಆ ಮಹಿಳೆ ಅಂಗಡಿಯ ಮಾಲೀಕನನ್ನು ಆ ಬ್ರೆಸ್‍ಲೆಟ್ ಬೆಲೆ ಎಷ್ಟು ಎಂದು ಕೇಳಿದ್ದಾಳೆ. ಅದಕ್ಕೆ ಮಾಲೀಕ $44,000 (28 ಲಕ್ಷ ರೂ.) ಎಂದು ಹೇಳಿದ್ದಾನೆ. ಈ ಬೆಲೆಯನ್ನು ಕೇಳಿ ಶಾಕ್‍ಗೆ ಒಳಗಾಗಿ ತಲೆ ತಿರುಗಿ ಅಲ್ಲಿಯೇ ಬಿದ್ದಿದ್ದಾಳೆ.

ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಈ ಮಹಿಳೆಯ ಹಣಕಾಸು ಸ್ಥಿತಿ ನೋಡಿ ಅಂಗಡಿ ಮಾಲೀಕರು ಪರಿಹಾರ ನೀಡುವ ಮೊತ್ತದ ದರವನ್ನು ಇಳಿಸಿದ್ದಾರೆ. ಆ ಮಹಿಳೆಯ ಮನೆಯವರು 70 ಸಾವಿರ ಯುವಾನ್ ಅಂದರೆ 6 ಲಕ್ಷ ರೂ. ಕಟ್ಟಲು ಒಪ್ಪಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *