Saturday, 23rd June 2018

Recent News

ಅಧಿಕಾರಕ್ಕೆ ಬಂದ ಕೂಡಲೇ ಸಿದ್ದರಾಮಯ್ಯ ಸರ್ಕಾರದ ಹಗರಣ ಬಯಲಿಗೆ: ಯಡಿಯೂರಪ್ಪ ಶಪಥ

ಕೋಲಾರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸಿದ್ದರಾಮಯ್ಯ ವಿರುದ್ಧದ ಹಗರಣಗಳನ್ನು ಬಯಲಿಗೆಳೆಯದಿದ್ದರೆ ನನ್ನ ಹೆಸರು ಯಡಿಯೂರಪ್ಪನೆ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.

ಜಿಲ್ಲೆಯ ಬಂಗಾರಪೇಟೆ ಕ್ಷೇತ್ರದಲ್ಲಿ ಆಯೋಜನೆ ಮಾಡಲಾಗಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಬಿಎಸ್‍ವೈ, ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಚಾರ್ಜ್ ಶೀಟ್ ಸಿದ್ಧಮಾಡುತ್ತಿದ್ದೇವೆ, ನಾವು ಅಧಿಕಾರಕ್ಕೆ ಬಂದ ತಕ್ಷಣ ಅವರ ಹಗರಣಗಳನ್ನ ಬಯಲಿಗೆಳೆಯುತ್ತೇವೆ ಎಂದು ಶಪಥ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಹೋದ ಕಡೆಯೆಲ್ಲಾ ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು ಎಂದು ಹೇಳಿಕೆ ನೀಡುತ್ತಿದ್ದಾರೆ, ದೇಶದಲ್ಲಿ ಈಗಾಗಲೆ ಅಚ್ಚೇದಿನ್ ಬಂದಿದೆ, ಕರ್ನಾಟಕದಲ್ಲೂ ಅಚ್ಚೇದಿನ್ ಬರಬೇಕಾದರೆ ಸಿದ್ದರಾಮಯ್ಯ ಮನೆಗೆ ಹೋಗಬೇಕು ಎಂದು ಹೇಳಿದರು.

ಇನ್ನೂ ಬಂಗಾರಪೇಟೆ ಭಾಷಣದ ವೇಳೆ ಬಿಜೆಪಿ ನಾಯಕರು ದಿವಂಗತ ಡಿ.ಕೆ.ರವಿ ಯವರ ಹೆಸರು ಪ್ರಸ್ತಾಪ ಮಾಡಿ, ದಕ್ಷ ಅಧಿಕಾರಿ ಸಾವಿಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *