ಪತ್ನಿ ಕುಟುಂಬಸ್ಥರಿಂದ ವರದಕ್ಷಿಣೆಯ ಹಣಕ್ಕಾಗಿ ಬೇಡಿಕೆ: ಪತಿರಾಯ ಆತ್ಮಹತ್ಯೆ

ಬೀದರ್: ಪತ್ನಿಯ ಸಂಬಂಧಿಕರು ವರದಕ್ಷಿಣೆಯಾಗಿ ನೀಡಿದ ಹಣವನ್ನು ಮರಳಿ ನೀಡುವಂತೆ ಜೀವ ಬೆದರಿಕೆ ಹಾಕಿದ್ದಕ್ಕೆ ಭಯಗೊಂಡ ಪತಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಔರಾದ್ ತಾಲೂಕಿನ ಬೆಡಕುಂದಾ ಗ್ರಾಮದಲ್ಲಿ ನಡೆದಿದೆ.

30 ವರ್ಷ ವಯಸ್ಸಿನ ಅರವಿಂದ್ ಶಂಕರ್ ಆತ್ಮಹತ್ಯೆಗೆ ಶರಣಾದ ಪತಿರಾಯ. ಒಂದು ವರ್ಷದ ಹಿಂದೆ ಭಾಲ್ಕಿ ತಾಲೂಕಿನ ಜಯಶ್ರೀ ಎಂಬವರನ್ನು ಮದುವೆಯಾಗಿದ್ದರು. ಸಂಸಾರದ ಗಲಾಟೆಯಿಂದಾಗಿ ಜಯಶ್ರೀ ಅವರು ತವರು ಮನೆ ಸೇರಿದ್ದರು.

ತವರು ಮನೆಗೆ ಸೇರಿದ ಬಳಿಕ ಜಯಶ್ರೀ ಮತ್ತು ಅವರ ಕುಟುಂಬಸ್ಥರು ಮದುವೆ ವೇಳೆ ನೀಡಿದ್ದ ವರದಕ್ಷಿಣೆ 5 ಲಕ್ಷ ರೂ.ಗಳನ್ನು ಮರಳಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಒಂದು ವೇಳೆ ಈ ಹಣವನ್ನು ನೀಡದೇ ಇದ್ದರೆ ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ. ಹೀಗಾಗಿ ಅರವಿಂದ್ 4.5 ಲಕ್ಷ ರೂ. ಹಣವನ್ನು ಹಿಂದುರುಗಿಸಿದ್ದರು. ಆದರೆ ಪತ್ನಿ ಮತ್ತು ಕುಟುಂಬಸ್ಥರ ಕಿರುಕುಳಕ್ಕೆ ಅರವಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದ ಹೇಳಲಾಗುತ್ತಿದೆ.

ಸ್ಥಳಕ್ಕೆ ಠಾಣಾಕುಶನೂರು ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

 

You might also like More from author

Leave A Reply

Your email address will not be published.

badge