Monday, 25th June 2018

Recent News

ಚಿತ್ರಕ್ಕೆ ಡಬ್ಬಿಂಗ್ ಮಾಡೋಕೆ ವಾಯ್ಸ್ ಪ್ರಾಬ್ಲಂ ಅಂದ್ರು ಅನುಷ್ಕಾ ಶೆಟ್ಟಿ!

ಹೈದರಾಬಾದ್: ಕನ್ನಡದ ಮಣ್ಣಿನಲ್ಲಿ ಹುಟ್ಟಿ ಬೆಳೆದು ಪರಭಾಷಾ ಚಿತ್ರಗಳಲ್ಲಿ ಮಿಂಚುತ್ತಿರುವ ನಟಿ ಅನುಷ್ಕಾ. ಈಕೆ 12 ವರ್ಷಗಳಿಂದ ತಮಿಳು ಹಾಗೂ ತೆಲುಗಿನಲ್ಲಿ ಸುಮಾರು 47ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಹಾಗೂ ತೆಲುಗನ್ನು ಸರಾಗವಾಗಿ ಮಾತಾಡುವ ಈಕೆ ಇದುವರೆಗೂ ತಾನು ನಟಿಸಿರುವ ಯಾವ ಚಿತ್ರಕ್ಕೂ ಡಬ್ಬಿಂಗ್ ಮಾಡಿಲ್ಲ.

ಅನುಷ್ಕಾಗೆ ತನ್ನ ನಟನೆಯ ಚಿತ್ರಗಳಿಗೆ ತನ್ನದೇ ಕಂಠದಲ್ಲಿ ಡಬ್ಬಿಂಗ್ ಮಾಡುವ ಆಸೆಯಿದೆಯಂತೆ. ಆದರೆ ಅವರ ವಾಯ್ಸ್ ಸಣ್ಣ ಮಗುವಿನ ಹಾಗಿದೆಯಂತೆ. ಮನೆಯವರೂ ಸಹ ಮಗುವಿನ ಹಾಗೆ ಮಾತನಾಡುತ್ತೀಯ ಎಂದೇ ರೇಗಿಸುತ್ತಾರಂತೆ. ‘ನಾನು ನಟಿಸುವ ಪಾತ್ರಗಳಿಗೆ ಗಂಭೀರವಾದ ಕಂಠದ ಅವಶ್ಯಕತೆಯಿದೆ. ನನ್ನ ವಾಯ್ಸ್ ಡಬ್ಬಿಂಗ್ ಮಾಡಿದರೆ ಕಾಮಿಡಿಯಾಗಿರುತ್ತದೆ’ ಎಂದು ಸ್ವತಃ ಅನುಷ್ಕಾ ಹೇಳಿಕೊಂಡಿದ್ದಾರೆ. ಆದ್ದರಿಂದ ಅನುಷ್ಕಾ ತಮ್ಮ ಚಿತ್ರಗಳಲ್ಲಿ ಡಬ್ಬಿಂಗ್ ಮಾಡುವ ಆಸೆಯಿದ್ದರೂ ಇದುವರೆಗೂ ಯಾವುದೇ ನಿರ್ದೇಶಕರ ಬಳಿ ಡಬ್ಬಿಂಗ್ ಬಗ್ಗೆ ಮಾತಾಡಿಲ್ಲವಂತೆ. ಇದನ್ನೂ ಓದಿ: ಅನುಷ್ಕಾ ಫ್ಯಾನ್ಸ್ ಗೆ ಬ್ಯಾಡ್ ನ್ಯೂಸ್: ಮತ್ತೊಬ್ಬ ಕನ್ನಡತಿಯೊಂದಿಗೆ ಪ್ರಭಾಸ್ ರೊಮ್ಯಾನ್ಸ್!

ಕನ್ನಡದಲ್ಲಿ ನಟಿ ರಮ್ಯಾ ಕೂಡಾ ಇದೇ ಸಮಸ್ಯೆಯಿಂದ ಹಲವಾರು ಪ್ರಶಸ್ತಿಗಳಿಂದ ವಂಚಿತರಾಗಿದ್ದರು. ಸಾಮಾನ್ಯವಾಗಿ ಕಲಾವಿದರಿಗೆ ಸಿಗುವ ಪ್ರಶಸ್ತಿಗಳು ಅವರದ್ದೇ ದನಿಯಿದ್ದರೆ ಮಾತ್ರ ಮಾನ್ಯತೆ ಪಡೆಯುತ್ತವೆ. ಎಷ್ಟೊಂದು ಪ್ರಶಸ್ತಿಗಳಿಂದ ವಂಚಿತರಾದ ರಮ್ಯಾ ತಮ್ಮ ಚಿತ್ರಗಳಿಗೆ ತಾವೇ ದನಿ ನೀಡುವ ಪ್ರಯತ್ನ ಮಾಡಿ ಅದರಲ್ಲಿ ವಿಫಲರಾಗಿದ್ದರು. ಆದರೆ ಅನುಷ್ಕಾ ತಮ್ಮ ದನಿಯ ಕುರಿತಾಗಿ ಕ್ಲಿಯರ್ ಆಗಿದ್ದಾರೆ. ಯಾವುದೇ ಕಾರಣಕ್ಕೂ ಪರದೆಗೆ ನನ್ನ ದನಿ ಹೊಂದುವುದಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಂಡಿದ್ದಾರೆ!. ಇದನ್ನೂ ಓದಿ: ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ

Leave a Reply

Your email address will not be published. Required fields are marked *