Monday, 18th June 2018

Recent News

12 ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ: ಪೊಲೀಸರಿಂದ ಟೆಕ್ಕಿ ಸಾವಿನ ರಹಸ್ಯ ಬಯಲು!

ಬೆಂಗಳೂರು: 12 ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿಯ ಸಾವಿನ ಹಿಂದಿರುವ ರಹಸ್ಯವನ್ನ ಪೊಲೀಸರು ರಿವೀಲ್ ಮಾಡಿದ್ದಾರೆ.

ಎರಡು ದಿನಗಳ ಹಿಂದೆ ಐಟಿಪಿಎಲ್‍ನ ಬಹುಮಹಡಿ ಕಟ್ಟಡದ 12 ಅಂತಸ್ತಿನಿಂದ ಜಿಗಿದು ಭವೇಶ್ ಆತ್ಮಹತ್ಯೆ ಮಾಡಿಕೊಂಡಿದ್ದನು. ಬಳಿಕ ಭವೇಶ್ ಸಾವಿನ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು.

ಟೆಕ್ಕಿಯ ಆತ್ಮಹತ್ಯೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ವೈಟ್‍ಫೀಲ್ಡ್ ಪೊಲೀಸರು ತನಿಖೆ ಮಾಡಿದಾಗ ಟೆಕ್ಕಿ ಆತ್ಮಹತ್ಯೆ ಅಸಲಿಯತ್ತು ಹೊರ ಬಿದ್ದಿದೆ. ಭವೇಶ್ ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಸಹದ್ಯೋಗಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ತಾನು ಪ್ರೀತಿಸುತ್ತಿದ್ದ ಯುವತಿ ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಕಂಪೆನಿಯಲ್ಲಿ ತನ್ನ ಮಗನಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದರು. ಕಳೆದ ಕೆಲವು ದಿನಗಳ ಹಿಂದೆ ಕಂಪೆನಿಯ ಕೆಲಸದ ಒತ್ತಡದ ಬಗ್ಗೆ ಭವೇಶ್ ನನ್ನ ಬಳಿ ಹೇಳಿಕೊಂಡಿದ್ದನು. ಕಂಪೆನಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಭವೇಶ್ ತಂದೆ ದೂರು ನೀಡಿದ್ದರು.

Leave a Reply

Your email address will not be published. Required fields are marked *