ವಾಟ್ಸಪ್‍ನಲ್ಲಿ ಹಳೇ ಶೈಲಿಯ text status ಮಿಸ್ ಮಾಡಿಕೊಳ್ತಿದ್ದೀರಾ? ನಿಮಗಾಗಿ ಇಲ್ಲಿದೆ ಸಿಹಿ ಸುದ್ದಿ

ಬೆಂಗಳೂರು: ಇತ್ತೀಚೆಗಷ್ಟೆ ವಾಟ್ಸಪ್‍ನಲ್ಲಿ ಟೆಕ್ಸ್ಟ್ ಸ್ಟೇಟಸ್ ಬದಲಿಗೆ ಸ್ನ್ಯಾಪ್‍ಚ್ಯಾಟ್ ರೀತಿಯ ಫೋಟೋ ಮತ್ತು ವೀಡಿಯೋ ಸ್ಟೇಟಸ್ ಹಾಕುವಂತಹ ಫೀಚರನ್ನು ಪರಿಚಯಿಸಲಾಗಿತ್ತು. ಆದ್ರೆ ಈ ಹೊಸ ಫೀಚರ್ ಬಹಳಷ್ಟು ಜನರಿಗೆ ಇಷ್ಟವಾಗಿರಲಿಲ್ಲ. ಹಾಡಿನ ಸಾಲುಗಳನ್ನ, ತಮಗಿಷ್ಟವಾದ ಸಾಲುಗಳನ್ನ ಸ್ಟೇಟಸ್ ಆಗಿ ಹಾಕುತ್ತಿದ್ದವರಿಗೆ ಹೊಸ ಸ್ಟೇಟಸ್ ಫೀಚರ್ ಇಷ್ಟವಾಗಿರಲಿಲ್ಲ. ನಮಗೆ ಹಳೇ ಟೆಕ್ಸ್ಟ್ ಸ್ಟೇಟಸ್ ವಾಪಸ್ ಬೇಕು ಅಂತ ಬಳಕೆದಾರರು ಒತ್ತಾಯಿಸಿದ್ದರು. ಅಂತಹವರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ. ಇದೀಗ ವಾಟ್ಸಪ್‍ನ ಆಂಡ್ರಾಯ್ಡ್ ಬೀಟಾ ವರ್ಷನ್‍ನಲ್ಲಿ ಹಳೆಯ ಟೆಕ್ಸ್ಟ್ ಸ್ಟೇಟಸ್ ವಾಪಸ್ ಬಂದಿದೆ.

                                      

ಆಂಡ್ರಾಯ್ಡ್ ಬೀಟಾ ವರ್ಷನ್ 2.17.95 ಬಳಕೆದಾರರು ಹಳೆಯ ಸ್ಟೇಟಸ್ ಮೆಸೇಜ್ ಫೀಚರ್ ಬಳಸುತ್ತಿದ್ದಾರೆ. ಈ ಫೀಚರನ್ನು ಪರೀಕ್ಷೆ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಎಲ್ಲಾ ವಾಟ್ಸಪ್ ಬಳಕೆದಾರರಿಗೂ ಸಿಗೋ ನಿರೀಕ್ಷೆ ಇದೆ. ಒಂದು ವೇಳೆ ನೀವು ಹಳೇ ಸ್ಟೇಟಸ್ ಫೀಚರ್ ಬಳಸಬೇಕಾದ್ರೆ ಗೂಗಲ್ ಪ್ಲೇಸ್ಟೋರ್‍ನಿಂದ ವಾಟ್ಸಪ್ ಬೀಟಾ ವರ್ಷನ್ ಡೌನ್‍ಲೋಡ್ ಮಾಡಿಕೊಳ್ಳಬೇಕು.

ಬೀಟಾ ಬಳಕೆದಾರರು ಆ್ಯಪ್‍ನ ಎಡಭಾಗದ ತುದಿಯಲ್ಲಿರುವ ಮೂರು ಚುಕ್ಕಿಗಳ ಐಕಾನ್ ಮೇಲೆ ಕ್ಲಿಕ್ ಮಾಡಿ, ಸೆಟ್ಟಿಂಗ್ಸ್ ಗೆ ಹೋಗಿ ಅಲ್ಲಿ ಅಬೌಟ್, ನಂತರ ಫೋನ್ ನಂಬರ್ ಸೆಕ್ಷನ್‍ಗೆ ಹೋದ್ರೆ ಹಳೇ ಸ್ಟೇಟಸ್ ಆಯ್ಕೆ ಕಾಣುತ್ತದೆ. ಅವೈಲೆಬಲ್, ಬ್ಯುಸಿ, ಅಟ್ ಸ್ಕೂಲ್, ಅಟ್ ಮೂವೀಸ್ ಎಂಬ ಹಳೇ ಡೀಫಾಲ್ಟ್ ಸ್ಟೇಟಸ್ ಆಯ್ಕೆಗಳೂ ಕೂಡ ಕಾಣುತ್ತದೆ. ಅಲ್ಲದೆ ಇದು ಹೊಸದಾಗಿ ಬಂದಿರೋ ಫೋಟೋ ಹಾಗೂ ವೀಡಿಯೋ ಸ್ಟೇಟಸ್‍ನಂತೆ 24 ಗಂಟೆಗಳಲ್ಲಿ ಕಣ್ಮರೆಯಾಗುವುದಿಲ್ಲ. ಆದ್ರೆ ಅಬೌಟ್ ಮತ್ತು ಫೋನ್ ನಂಬರ್ ಸೆಕ್ಷನ್ ಆಯ್ಕೆಗಳು ಕೆಲವು ಫೋನ್‍ಗಳಲ್ಲಿ ಕಾಣಿಸುತ್ತಿಲ್ಲ ಎಂದು ಕೂಡ ವರದಿಯಾಗಿದೆ.

ಇದನ್ನೂ ಓದಿ: ಈ ಫೋನ್‍ಗಳಿಗೆ ಜೂನ್ 30ರ ನಂತ್ರ ವಾಟ್ಸಪ್ ಸಪೋರ್ಟ್ ಮಾಡಲ್ಲ!

ಹಳೇ ಸ್ಟೇಟಸ್ ವಾಪಸ್ ಬಂದರೂ ಹೊಸದಾಗಿ ಪರಿಚಯಿಸಲಾಗಿರೋ ಫೋಟೋ, ವೀಡಿಯೋ ಸ್ಟೇಟಸ್ ಇರಲ್ಲ ಎಂದರ್ಥವಲ್ಲ. ಹೊಸ ಸ್ಟೇಟಸ್ ಫಿಚರ್ ಕೂಡ ಪ್ರತ್ಯೇಕ ಟ್ಯಾಬ್‍ನಲ್ಲಿ ಲಭ್ಯವಿರುತ್ತದೆ.

                  

ಬೀಟಾ ಅವೃತ್ತಿ ಆ್ಯಪ್‍ ಬೇಕಾದರೆ ಈಗ ನೀವು ಬಳಸುತ್ತಿರುವ ಆಂಡ್ರಾಯ್ಡ್ ಆ್ಯಪ್‍ ಅನ್ ಇನ್‍ಸ್ಟಾಲ್ ಮಾಡಿ ಪ್ಲೇ ಸ್ಟೋರ್‍ನಿಂದ ಬೀಟಾ ಆವೃತ್ತಿಯನ್ನು ಇನ್‍ಸ್ಟಾಲ್ ಮಾಡಬೇಕಾಗುತ್ತದೆ. ಹೊಸ ವಿಶೇಷತೆಯನ್ನು ಬಳಕೆದಾರರಿಗೆ ನೀಡುವ ಮುನ್ನ ಬೀಟಾ ಆವೃತ್ತಿಯ ಬಳಕೆದಾರರಿಗೆ ನೀಡಿ ಬಳಿಕ ಎಲ್ಲ ಗ್ರಾಹಕರಿಗೆ ಆ ವಿಶೇಷತೆಯನ್ನು ವಾಟ್ಸಪ್ ನೀಡುತ್ತದೆ.

You might also like More from author

Leave A Reply

Your email address will not be published.

badge