ಈ ಫೋನ್‍ಗಳಿಗೆ ಜೂನ್ 30ರ ನಂತ್ರ ವಾಟ್ಸಪ್ ಸಪೋರ್ಟ್ ಮಾಡಲ್ಲ!

ಲಂಡನ್: ವಿಶ್ವದ ನಂಬರ್ ಒನ್ ಚಾಟಿಂಗ್ ಅಪ್ಲಿಕೇಶನ್ ಈ ವರ್ಷದ ಜೂನ್ 30ರ ನಂತರ ಕೆಲ ಆಂಡ್ರಾಯ್ಡ್, ವಿಂಡೋಸ್ ಫೋನ್ ಮತ್ತು ಐಓಎಸ್  ಆಪರೇಟಿಂಗ್ ಸಿಸ್ಟಂ ಹೊಂದಿರುವ ಸಾಧನಗಳಿಗೆ ಸಪೋರ್ಟ್ ನೀಡದೇ ಇರಲು ನಿರ್ಧರಿಸಿದೆ.

 ಎಕ್ಸ್ ಪ್ರೆಸ್ ಯುಕೆ ವರದಿ ಪ್ರಕಾರ ಆಪಲ್ ಐಫೋನ್ 3ಜಿಎಸ್, ಗೂಗಲ್ ಆಂಡ್ರಾಯ್ಡ್ 2.1 ಅಥವಾ 2.2 ಫೋನ್, ಮೈಕ್ರೋಸಾಫ್ಟ್ ವಿಂಡೋಸ್ ಫೋನ್ 8 ಆಪರೇಟಿಂಗ್ ಸಿಸ್ಟಂ, ಐಓಎಸ್ 6ನಲ್ಲಿ ರನ್ ಆಗುತ್ತಿರುವ ಸಾಧನಗಳಿಗೆ ಸೇವೆ ನೀಡದೇ ಇರಲು ವಾಟ್ಸಪ್ ನಿರ್ಧರಿಸಿದೆ ಎಂದು ತಿಳಿಸಿದೆ.

ಈ ಮೇಲೆ ತಿಳಿಸಿದ ಸಾಧನಗಳನ್ನು ಬಳಸುವ ಗ್ರಾಹಕರು ಬೇರೆ ಸಾಧನಗಳಿಗೆ ಬದಲಾಗಿ ಎಂದು ವಾಟ್ಸಪ್ ಸಲಹೆ ನೀಡಿದೆ.

ಯಾವಾಗ ಬಿಡುಗಡೆಯಾಗಿತ್ತು?
ಐಫೋನ್ 3ಜಿಎಸ್ ಫೋನನ್ನು ಆಪಲ್ 2009ರಲ್ಲಿ ಬಿಡುಗಡೆ ಮಾಡಿದ್ದರೆ, ಐಓಎಸ್ 6 2012ರಲ್ಲಿ ಬಿಡುಗಡೆ ಮಾಡಿತ್ತು. ಆಂಡ್ರಾಯ್ಡ್ 2.1 2010ರಲ್ಲಿ ಬಿಡುಗಡೆಯಾಗಿದ್ದರೆ, ವಿಂಡೋಸ್ ಫೋನ್ 8 ಓಎಸ್ ಅನ್ನು ಮೈಕ್ರೋಸಾಫ್ಟ್ 2012ರಲ್ಲಿ ಬಿಡುಗಡೆ ಮಾಡಿತ್ತು.

2009 ಫೆಬ್ರವರಿ 9ರಂದು ಆರಂಭಗೊಂಡ ವಾಟ್ಸಪ್ ಕಂಪೆನಿಯನ್ನು 19 ಶತಕೋಟಿ ಡಾಲರ್ ನೀಡಿ ಫೇಸ್‍ಬುಕ್ 2014ರಲ್ಲಿ ಖರೀದಿಸಿದೆ. ಯಾವುದೇ ಕಾರಣಕ್ಕೂ ಜಾಹೀರಾತುಗಳನ್ನು ತೋರಿಸುವುದಿಲ್ಲ ಎಂದು ವಾಟ್ಸಪ್ ಹೇಳಿಕೊಂಡಿದೆ. ಪ್ರಸ್ತುತ ವಿಶ್ವದಲ್ಲಿ ಪ್ರತಿ ತಿಂಗಳು 102 ಕೋಟಿ ಸಕ್ರೀಯ ಬಳಕೆದಾರರಿದ್ದು, ಭಾರತದಲ್ಲೇ 20 ಕೋಟಿ ಮಂದಿ ವಾಟ್ಸಪ್ ಬಳಸುತ್ತಿದ್ದಾರೆ.

ವಾಟ್ಸಪ್ 8ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಾರತದ ಮಾಧ್ಯಮದ ಜೊತೆ ವಾಟ್ಸಪ್ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಮಾತನಾಡಿ, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆದಿದೆ. ವಿಚಾರದ ಬಗ್ಗೆ ಪ್ರಾಥಮಿಕ ಹಂತದ ಮಾತುಕತೆ ನಡೆಯುತ್ತಿದೆ, ಭಾರತೀಯ ಬಳಕೆದಾರರಿಗೆ ಕೆಲಸ ಮಾಡುವುದು ಸಂತದ ತಂದಿದೆ ಎಂದು ಅವರು ತಿಳಿಸಿದ್ದರು.

You might also like More from author

Leave A Reply

Your email address will not be published.

badge