Friday, 23rd February 2018

Recent News

ವಾಟ್ಸಪ್ ನಲ್ಲೇ ಯೂ ಟ್ಯೂಬ್ ವಿಡಿಯೋ ಪ್ಲೇ ಮಾಡಿ!

ಕ್ಯಾಲಿಫೋರ್ನಿಯಾ: ಇನ್ನು ಮುಂದೆ ವಾಟ್ಸಪ್ ನಲ್ಲಿ ಯೂ ಟ್ಯೂಬ್ ವಿಡಿಯೋವನ್ನು ನೇರವಾಗಿ ನೋಡಬಹುದು.

ಹೌದು, ಇಲ್ಲಿಯವರೆಗೆ ವಾಟ್ಸಪ್ ನಲ್ಲಿ ಯೂ ಟ್ಯೂಬ್ ಲಿಂಕ್ ಕಳುಹಿಸಿದ್ರೆ ಯೂಟ್ಯೂಬ್ ಆಪ್ ಮೂಲಕ ವಿಡಿಯೋ ಪ್ಲೇ ಆಗುತಿತ್ತು. ಆದರೆ ಈಗ ವಾಟ್ಸಪ್ ನಲ್ಲಿ ಯೂ ಟ್ಯೂಬ್ ಇಂಟಿಗ್ರೇಷನ್ ಆಗಿದ್ದು ಸುಲಭವಾಗಿ ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ.

ಸದ್ಯಕ್ಕೆ ಇದು ಐಓಎಸ್ ಬಳಕೆದಾರರಿಗೆ ಮಾತ್ರ ಲಭ್ಯವಾಗಿದ್ದು, ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಿಲ್ಲ. ಯಾವಾಗ ಆಪ್ ಅಪಡೇಟ್ ಸಿಗಲಿದೆ ಎನ್ನುವುದನ್ನು ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ತಿಳಿಸಿಲ್ಲ.

ಕೆಲ ದಿನಗಳ ಹಿಂದೆಯೇ ವಾಟ್ಸಪ್ ಈ ವಿಶೇಷತೆಯನ್ನು ಸೇರಿಸಲು ಮುಂದಾಗುತ್ತಿದೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ಇದನ್ನೂ ಓದಿ: ವಾಟ್ಸಪ್ ನಲ್ಲಿ ಕಿರಿಕಿರಿ ಉಂಟು ಮಾಡೋ ಅಡ್ಮಿನ್ Dismiss ಮಾಡಿ!

Leave a Reply

Your email address will not be published. Required fields are marked *