Monday, 24th February 2020

Recent News

‘ಹುಡುಗಿರನ್ನ ಮೆಚ್ಚಿಸಲು ಬಾಡಿ ಬಿಲ್ಡ್‌ಗೆ ಮುಂದಾಗಿ ಗಾಯಕ್ಕೆ ತುತ್ತಾದೆ’

– ಮೊಣಕಾಲು ನೋವಿನ ಬಗ್ಗೆ ಆಂಡ್ರೆ ರಸ್ಸೆಲ್ ಸ್ಪಷ್ಟನೆ

ಕಿಂಗ್ಸ್‌ಟೌನ್: ಹುಡುಗಿರನ್ನು ಮೆಚ್ಚಿಸಲು ಬಾಡಿ ಬಿಲ್ಡ್‍ಗೆ ಮುಂದಾಗಿ ಗಾಯದ ಸಮಸ್ಯೆಗೆ ತುತ್ತಾದೆ ಎಂದು ವೆಸ್ಟ್ ಇಂಡೀಸ್‍ನ ಆಲ್‍ರೌಂಡರ್ ಆಂಡ್ರೆ ರಸ್ಸೆಲ್ ಹೇಳಿದ್ದಾರೆ.

ಆಂಡ್ರೆ ರಸ್ಸೆಲ್ ಆಧುನಿಕ ಕ್ರಿಕೆಟ್‍ನಲ್ಲಿ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಬಾಲ್ ಅನ್ನು ಸ್ಟೇಡಿಯಂನಿಂದ ಹೊರಗಟ್ಟುವ ರಸ್ಸೆಲ್ ಸಾಮರ್ಥ್ಯದ ಮುಂದೆ ಯಾರೂ ಸರಿಸಾಟಿಯಿಲ್ಲ ಎನ್ನಲಾಗುತ್ತದೆ. ಅದಕ್ಕಾಗಿಯೇ ಅವರನ್ನು ಇದೀಗ ವಿಶ್ವದ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್‌ ಎಂದು ಪರಿಗಣಿಸಲಾಗಿದೆ.

ಇಂಡಿಯನ್ ಪ್ರಿಮಿಯರ್ ಲೀಗ್ 2019ರ ಆವೃತ್ತಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರ ಆಂಡ್ರೆ ರಸ್ಸೆಲ್ ಅವರ ಅದ್ಭುತ ಪ್ರದರ್ಶನ ನೀಡಿದ್ದರು. ಈ ವೇಳೆ ರಸ್ಸೆಲ್ 510 ರನ್ ಹಾಗೂ 11 ವಿಕೆಟ್ ಪಡೆದಿದ್ದರು. ಹೀಗಾಗಿ ಅವರಿಗೆ 2019ರ ಐಪಿಎಲ್ ಟೂರ್ನಿಯ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತ್ತು. ಆದರೆ ಈಗ ರಸ್ಸೆಲ್ ಮೊಣಕಾಲು ನೋವಿಗೆ ಒಳಗಾಗಿದ್ದಾರೆ.

ಈ ವಿಚಾರವಾಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿರುವ ರಸ್ಸೆಲ್, ಹುಡುಗಿಯರಿಗೆ ಆಕರ್ಷಕವಾಗಿ ಕಾಣಬೇಕೆಂದು ಬಯಸಿದ್ದೆ. ಹೀಗಾಗಿ ಮೊಣಕಾಲು ನೋವನ್ನು ನಿರ್ಲಕ್ಷಿಸಿ ಬಾಡಿ ಬಿಲ್ಡ್ ಮಾಡಲು ಯತ್ನಿಸಿದೆ. ಇದರಿಂದಾಗಿ ಗಾಯಕ್ಕೆ ತುತ್ತಾಗಿ ತಂಡದಿಂದ ಹೊರ ಬರಬೇಕಾಯಿತು. ಇದು ನನ್ನ ಫಾರ್ಮ್ ಮೇಲೂ ಕೆಟ್ಟ ಪರಿಣಾಮ ಬೀರಿತು ಎಂದು ತಿಳಿಸಿದ್ದಾರೆ.

ನಾನು 23 ಅಥವಾ 24 ವಯಸ್ಸಿನಲ್ಲಿದ್ದಾಗ ಮೊಣಕಾಲು ನೋವು ಅನುಭವಿಸುತ್ತಿದೆ. ಅದನ್ನು ನಿರ್ಲಕ್ಷಿಸಿ, ನೋವು ನಿವಾರಕಗಳನ್ನು ತೆಗೆದುಕೊಂಡು ಓಡುತ್ತಲೇ ಇದ್ದೆ. ಹೀಗಾಗಿ ಈಗ ನೋವು ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.

ಆಂಡ್ರೆ ರಸ್ಸೆಲ್ ಕೆಕೆಆರ್ ಪರ ಐಪಿಎಲ್ 2020ರ ಆವೃತ್ತಿಯಲ್ಲಿ ಆಡಲಿದ್ದಾರೆ. ಆಲ್‍ರೌಡರ್ ರಸ್ಸೆಲ್ ಐಪಿಎಲ್ 2019ರ ಆವೃತ್ತಿಯಯ ಸಾಧನೆಯನ್ನು ಈ ಬಾರಿಯೂ ತೋರುತ್ತಾರೆ ಎಂಬ ವಿಶ್ವಾಸವಿದೆ ಎಂದು ಕೆಕೆಆರ್ ಫ್ರ್ಯಾಂಚೈಸ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *