Sunday, 19th November 2017

Recent News

`ಅನ್ನಾಬೆಲ್ಲೆ’ ಸಿನಿಮಾ ನೋಡಿ ಕಿರುಚಿ ಥಿಯೇಟರ್ ನಿಂದ ಓಡಿ ಬಂದ ಮಹಿಳೆ-ವಿಡಿಯೋ ನೋಡಿ

ರಿಯೋ ಡಿ ಜನೈರೋ: ಹಾಲಿವುಡ್‍ನ ಹಾರರ್ ಮೋವಿ ಅನ್ನಾಬೆಲ್ಲೆ: ಕ್ರಿಯೇಷನ್ ಸಿನಿಮಾ ನೋಡುತ್ತಿದ್ದ ಮಹಿಳೆಯೊಬ್ಬರು ಜೋರಾಗಿ ಕಿರುಚಿಕೊಂಡು ಹೊರ ಬಂದು ತಮಗೆ ತಾವೇ ಹಲ್ಲೆ ಮಾಡಿಕೊಂಡಿದ್ದಾರೆ.

ಬ್ರೆಜಿಲ್‍ನ ತೆರೆಸಿನಾ ಮಾಲ್‍ನಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯ ಕಿರುಚಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಥಿಯೇಟರ್‍ನಲ್ಲಿ ಸಿನಿಮಾ ನೋಡುವಾಗ ಮಹಿಳೆ ವಿಚಿತ್ರವಾಗಿ ನಡೆದುಕೊಳ್ಳಲು ಆರಂಭಿಸಿದ್ದಾರೆ. ಸಿನಿಮಾ ಎರಡನೇ ಭಾಗದಲ್ಲಿ ಗೊಂಬೆಯಲ್ಲಿರುವ ಭೂತದ ದೃಶ್ಯಗಳು ಬರುತ್ತಿದ್ದಂತೆ ಮಹಿಳೆ ಕಿರುಚಲು ಆರಂಭಿಸಿದರು ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಾಲ್ ಸಿಬ್ಬಂದಿ, ಮಹಿಳೆಗೆ ಏನಾಯ್ತು ಎಂದು ನಮಗೆ ಗೊತ್ತಾಗಲಿಲ್ಲ. ಆದರೆ ಮಹಿಳೆ ಮಾತ್ರ ಥಿಯೇಟರ್‍ನಿಂದ ಹೊರಬಂದು ತಮ್ಮ ಮುಖಕ್ಕೆ ತಾವು ಗುದ್ದಿಕೊಳ್ಳತೊಡಗಿದರು. ಮಹಿಳೆ ಮಾತ್ರ ತುಂಬಾ ಅಶಕ್ತರಾಗಿದ್ದು, ಅವರ ನಡವಳಿಕೆಯಲ್ಲಿ ವಿಚಿತ್ರ ಬದಲಾವಣೆಗಳನ್ನು ನಾವು ಗಮನಿಸಿದ್ದೇವೆ ಎಂದು ಹೇಳಿದ್ದಾರೆ.

ಅನ್ನಾಬೆಲ್ಲೆ ಸಿನಿಮಾ ಮೊದಲ ಬಾರಿಗೆ 2014ರಲ್ಲಿ ತೆರೆಕಂಡು ಭಾರೀ ಯಶಸ್ಸು ಕಂಡಿತ್ತು. ಸಿನಿಮಾದ ಮುಂದುವರೆದ ಭಾಗವೇ `ಅನ್ನಾಬೆಲ್ಲೆ: ಕ್ರಿಯೇಷನ್’. ಈ ಸಿನಿಮಾದಲ್ಲಿ ಗೊಂಬೆಯಲ್ಲಿ ಭೂತವೊಂದು ಕಾಣಿಸಿಕೊಳ್ಳುತ್ತದೆ.

ಗೊಂಬೆ ತಯಾರಿಸುವ ವ್ಯಕ್ತಿಯ ಮಗಳು ಅಪಘಾತದಲ್ಲಿ ಸಾವನ್ನಪ್ಪುತ್ತಾಳೆ. ಮಗಳ ಸಾವಿನ ಬಳಿಕ ಗೊಂಬೆ ತಯಾರಿಕ ವ್ಯಕ್ತಿ ಕೆಲವು ಅನಾಥ ಮಕ್ಕಳಿಗೆ ತನ್ನ ಮನೆಯಲ್ಲಿ ಆಶ್ರಯ ನೀಡುತ್ತಾನೆ. ಈ ವೇಳೆ ಸತ್ತು ಹೋಗಿದ್ದ ಬಾಲಕಿಯ ಆತ್ಮ ತನ್ನ ಪ್ರೀತಿಯ ಗೊಂಬೆಯಲ್ಲಿ ಸೇರಿಕೊಂಡು ಅನಾಥ ಮಕ್ಕಳನ್ನು ಕೊಲ್ಲಲು ಮುಂದಾಗುತ್ತದೆ. ಅನಾಥ ಮಕ್ಕಳು ಯಾವೆಲ್ಲ ಕಷ್ಟ ಅನುಭವಿಸ್ತಾರೆ ಮತ್ತು ಗೊಂಬೆಯಿಂದ ಹೇಗೆ ತಪ್ಪಿಸಿಕೊಳ್ಳುತ್ತಾರೆ ಎಂಬ ರೋಚಕ ಕಥೆಯನ್ನು ಸಿನಿಮಾ ಹೊಂದಿದೆ.

ಇದನ್ನೂ ಓದಿ: ಜಬ್ ಹ್ಯಾರಿ ಮೆಟ್ ಸೀಜಲ್ ಸಿನಿಮಾ ನೋಡುವಾಗ `ನನ್ನನ್ನು ಕಾಪಾಡಿ’ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ರು!

Leave a Reply

Your email address will not be published. Required fields are marked *