Monday, 28th May 2018

ತನ್ನ ಮದುವೆಯನ್ನು ಲೈವ್ ಆಗಿ ವರದಿ ಮಾಡಿದ ಪತ್ರಕರ್ತ!- ವಿಡಿಯೋ ಈಗ ವೈರಲ್

ಇಸ್ಲಾಮಾಬಾದ್: ಪತ್ರಕರ್ತನೊಬ್ಬ ತನ್ನ ಮದುವೆಯನ್ನು ಲೈವ್ ಆಗಿ ಟಿವಿ ಚಾನೆಲ್‍ನಲ್ಲಿ ವರದಿ ಮಾಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಹನಾನ್ ಬುಕಾರಿ ತನ್ನ ಮದುವೆಯನ್ನು ಲೈವ್ ವರದಿ ಮಾಡಿದ ಪತ್ರಕರ್ತ. ಬುಕಾರಿ ಟಿವಿ ಚಾನೆಲ್‍ನಲ್ಲಿ ತನ್ನ ಮದುವೆಯ ಬಗ್ಗೆ ಅಲ್ಲಿ ನಡೆಯುತ್ತಿದ್ದ ಪ್ರತಿಯೊಂದು ವಿಷಯದ ಬಗ್ಗೆ ವರದಿ ಮಾಡಿದ್ದಾರೆ. ವರನ ಉಡುಪನ್ನು ಧರಿಸಿ ಕೈಯಲ್ಲಿ ಮೈಕ್ ಹಿಡಿದು, ಕುಟುಂಬದ ಸದಸ್ಯರ ಹತ್ತಿರ ಕಾರ್ಯಕ್ರಮದ ಬಗ್ಗೆ ಅವರ ಅಭಿಪ್ರಾಯವನ್ನು ಪಡೆದಿದ್ದರು.

ನಾನು ನನ್ನ ಮದುವೆಯಲ್ಲಿದ್ದೇನೆ ಹಾಗೂ ತುಂಬಾ ಖುಷಿಯಾಗಿದ್ದೇನೆ ಎಂದು ವೀಕ್ಷಕರಿಗೆ ಹೇಳುತ್ತಾ ಕಾರ್ಯಕ್ರಮವನ್ನು ಶುರು ಮಾಡಿದ್ದರು. ನಂತರ ನಮ್ಮದು ಲವ್ ಮ್ಯಾರೇಜ್ ನನ್ನ ಪತ್ನಿ ಇದ್ದರಿಂದ ತುಂಬಾ ಖುಷಿಯಾಗಿದ್ದಾಳೆ ಎಂದು ತಿಳಿಸಿದ್ದರು.

ಬುಕಾರಿ ವರದಿ ಮಾಡುವಾಗ ಪಕ್ಕದಲ್ಲೇ ನಿಂತಿದ್ದ ತನ್ನ ತಂದೆಯನ್ನು ಪರಿಚಯಿಸಿದ ಬಳಿಕ ತನ್ನ ತಂದೆ ಜೊತೆಗೆ ಸಂದರ್ಶನ ನಡೆಸಿದ್ದಾರೆ. ನಿಮಗೆ ಈ ಕಾರ್ಯಕ್ರಮ ಹೇಗೆ ಅನಿಸುತ್ತಿದೆ ಎಂದು ಕೇಳಿದ್ದಾರೆ. ನನ್ನ ಮಗ ಮದುವೆಯಾಗಲೂ ಅವಕಾಶ ಕೊಟ್ಟ ದೇವರಿಗೆ ನಾನು ಧನ್ಯವಾದ ಹೇಳಲು ಇಷ್ಟಪಡುತ್ತೇನೆ ಎಂದು ಬುಕಾರಿ ತಂದೆ ಹೇಳಿದ್ದಾರೆ.

ತಂದೆಯ ಜೊತೆ ಸಂದರ್ಶನ ನಡೆದ ಬಳಿಕ ಬುಕಾರಿ ತನ್ನ ಪತ್ನಿಯನ್ನು ನಿನಗಾಗಿ ಸ್ಪೋಟ್ರ್ಸ್ ಕಾರ್, ಸೂಪರ್‍ಬೈಕ್ ಖರೀದಿಸಿದ್ದೇನೆ. ಈಗ ನೀನು ನಿನ್ನ ಅಭಿಪ್ರಾಯ ತಿಳಿಸು ಎಂದು ಕೇಳುತ್ತಾನೆ. ನನ್ನ ಆಸೆಗಳನ್ನು ಪೂರೈಸಿದ್ದಕ್ಕೆ ನನಗೆ ತುಂಬಾನೇ ಖುಷಿಯಾಗುತ್ತಿದೆ. ಮುಂದೆ ನನ್ನ ಜೀವನದಲ್ಲೂ ಹೀಗೆ ನನ್ನ ಎಲ್ಲ ಆಸೆಯನ್ನು ಈಡೇರಿಸುತ್ತೀರಿ ಎನ್ನುವ ನನಗೆ ಭರವಸೆ ಇದೆ ಎಂದು ವಧು ಉತ್ತರಿಸುತ್ತಾಳೆ.

ನಂತರ ತನ್ನ ಅತ್ತೆ ಹಾಗೂ ತಾಯಿ ಜೊತೆ ಸಂದರ್ಶನ ನಡೆಸಿ ಕಾರ್ಯಕ್ರಮದ ಬಗ್ಗೆ ಕೇಳಿದ್ದಾರೆ. ಪತ್ರಕರ್ತನ ಮದುವೆಯ ವಿಡಿಯೋ ಈಗ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿದ್ದು, ಕೆಲವರು ಇದನ್ನು ನೋಡಿ ಖುಷಿಪಟ್ಟರೆ. ಇನ್ನೂ ಕೆಲವರು ಆ ವಿಡಿಯೋ ನೋಡಿ ಪತ್ರಕರ್ತನ ಕಾಲು ಎಳೆದಿದ್ದಾರೆ.

Leave a Reply

Your email address will not be published. Required fields are marked *