Monday, 25th June 2018

Recent News

ಧೋನಿ ನೃತ್ಯಕ್ಕೆ ಬಿದ್ದು ಬಿದ್ದು ನಕ್ಕ ಸಾಕ್ಷಿ: ವೈರಲ್ ವಿಡಿಯೋ ನೋಡಿ

ನವದೆಹಲಿ: ಕೂಲ್ ಕ್ಯಾಪ್ಟನ್ ಧೋನಿ ತಮ್ಮ ನಡವಳಿಕೆ, ತಾಳ್ಮೆ, ಕೌಶಲ್ಯ ಹಾಗೂ ಕ್ರೀಡಾಂಗಣದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಹಾಗೆಯೇ ಧೋನಿ ತಮ್ಮ ಪತ್ನಿ ಜೊತೆ ಹೇಗೆ ಇರುತ್ತಾರೆ ಎಂಬುದಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದೆ.

ಹೌದು, ಧೋನಿ ತಮ್ಮ ಪತ್ನಿಯ ಮುಂದೇ ಹಾಡೊಂದಕ್ಕೆ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಪತಿ ಧೋನಿ ಅವರು ಡಾನ್ಸ್ ಮಾಡುತ್ತಿರುವುದನ್ನು ಕಂಡ ಪತ್ನಿ ಸಾಕ್ಷಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಿರುವ ದೃಶ್ಯಗಳು ಈ ವಿಡಿಯೋದಲ್ಲಿದೆ.

2012ರಲ್ಲಿ ಬಾಲಿವುಡ್‍ನಲ್ಲಿ ಬಿಡುಗಡೆಯಾದ ದೇಶಿ ಬಾಯ್ಸ್ ಸಿನಿಮಾದ `ಝಕ್ ಮಾರ್ ಕೆ’ ಹಾಡಿಗೆ ಧೋನಿ ಡಾನ್ಸ್ ಮಾಡಿದ್ದಾರೆ. ಆದರೆ ಈ ವಿಡಿಯೋ ಯಾವಾಗ ಚಿತ್ರೀಕರಿಸಲಾಗಿದೆ ಎಂಬುದು ತಿಳಿದು ಬಂದಿಲ್ಲ.

ಇದನ್ನೂ ಓದಿ: ಟಿ20ಗೆ ಧೋನಿ ನಿವೃತ್ತಿ ಹೇಳೋದು ಉತ್ತಮ: ವಿವಿಎಸ್ ಲಕ್ಷ್ಮಣ್

ಕೂಲ್ ವ್ಯಕ್ತಿತ್ವದಿಂದಲೇ ಹೆಸರುವಾಸಿಯಾಗಿರುವ ಧೋನಿ ಈ ಹಿಂದೆ ಶ್ರೀಲಂಕಾ ಸರಣಿಯ ವೇಳೆ ಕ್ಯಾಂಡಿಯಲ್ಲಿ ನಡೆದ ಪಂದ್ಯದಲ್ಲಿ ಲಂಕಾ ಆಟಗಾರರ ವಿರುದ್ಧ ರೊಚ್ಚಿಗೆದ್ದು ಕ್ರೀಡಾಂಗಣಕ್ಕೆ ಬಾಟಲಿಗಳನ್ನು ಎಸೆದು ದಾಂಧಲೆ ನಡೆಸಿದ್ದರು. ಈ ಸಂದರ್ಭದಲ್ಲಿ ಕೆಲಕಾಲ ಸ್ಥಗಿತಗೊಂಡ ಪಂದ್ಯದಲ್ಲಿ ಧೋನಿ ಮಲಗಿ ವಿಶ್ರಾಂತಿ ಪಡೆದಿದ್ದರು. ಅಲ್ಲದೇ ಚೆನ್ನೈನ ವಿಮಾನ ನಿಲ್ದಾಣದಲ್ಲಿ ಟೀಂ ಇಂಡಿಯಾ ಆಟಗಾರರು ಪ್ರಯಾಣಿಸುವ ವಿಮಾನ ಬರುವುದು ತಡವಾದ ಸಮಯದಲ್ಲಿ ನೆಲದ ಮೇಲೆ ಮಲಗಿ ವಿಶ್ರಾಂತಿ ಪಡೆದಿದ್ದರು.

ಇದನ್ನೂ ಓದಿ: ಧೋನಿ ನಿವೃತ್ತಿ ಬಗ್ಗೆ ಮಾತನಾಡಿದವರಿಗೆ ತಿರುಗೇಟು ಕೊಟ್ಟ ಕೊಹ್ಲಿ

ಇದನ್ನೂ ಓದಿ:ವಿರಾಟ್, ಧೋನಿ ನಡುವೆ ಹೊಂದಾಣಿಕೆ ಎಷ್ಟಿದೆ? ಕೊಹ್ಲಿಯ ಮಾತು ಕೇಳಿದ್ರೆ ನಿಮ್ಗೆ ಇಷ್ಟವಾಗುತ್ತೆ

 

Leave a Reply

Your email address will not be published. Required fields are marked *