Monday, 18th June 2018

Recent News

ವಿರಾಟ್, ಧೋನಿ ನಡುವೆ ಹೊಂದಾಣಿಕೆ ಎಷ್ಟಿದೆ? ಕೊಹ್ಲಿಯ ಮಾತು ಕೇಳಿದ್ರೆ ನಿಮ್ಗೆ ಇಷ್ಟವಾಗುತ್ತೆ

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಆಯ್ಕೆಯಾದ ನಂತರ ಕೊಹ್ಲಿ ಮತ್ತು ಮಾಜಿ ನಾಯಕ ಧೋನಿ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ಚರ್ಚೆ ಆರಂಭವಾಗಿತ್ತು. ಆದರೆ ಧೋನಿ ಮತ್ತು ನನ್ನ ನಡುವೆ ಸ್ನೇಹ ಎಷ್ಟಿದೆ? ಆಟದ ನಡುವೆ ಧೋನಿ ಜೊತೆ ಎಷ್ಟು ವಿಶ್ವಾಸ ಹೊಂದಿದ್ದೇನೆ ಎನ್ನುವುದನ್ನು ಕೊಹ್ಲಿ ಈಗ ಬಹಿರಂಗ ಪಡಿಸಿದ್ದಾರೆ.

“ನಮ್ಮಿಬ್ಬರ ನಡುವೆ ಎಷ್ಟು ಹೊಂದಾಣಿಕೆ ಇದೆ ಅಂದರೆ, ಆನ್ ಫೀಲ್ಡ್‍ನಲ್ಲಿ ವಿಕೆಟ್ ನಡುವೆ ಓಡುವಾಗ ಧೋನಿ 2 ರನ್ ಎಂದು ಸನ್ನೆ ಮಾಡಿದರೆ ಸಾಕು ನಾನು ಕಣ್ಣು ಮುಚ್ಚಿಕೊಂಡು ಓಡುತ್ತೇನೆ. ಯಾಕೆಂದರೆ ಧೋನಿ ನಿರ್ಧಾರ ತಪ್ಪಾಗಲಾರದು. ನನಗೆ ಅವರ ನಿರ್ಧಾರದ ಬಗ್ಗೆ ಅಷ್ಟೊಂದು ನಂಬಿಕೆ ಇದೆ” ಎಂದು ಖಾಸಗಿ ವಾಹಿನಿಯ ಟಾಕ್ ಶೋನಲ್ಲಿ ಕೊಹ್ಲಿ ಹೇಳಿದ್ದಾರೆ.

ಧೋನಿ ಕೂಲ್ ಕ್ಯಾಪ್ಟನ್ ಎಂದೇ ಪ್ರಸಿದ್ಧಿ ಪಡೆದವರು. ಆನ್ ಫೀಲ್ಡ್‍ನಲ್ಲಿ ಅತ್ಯಂತ ಕಠಿಣ ಸಮಯದಲ್ಲೂ ಉತ್ತಮವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ನಾನು ಹೆಚ್ಚು ಒತ್ತಡದಲ್ಲಿದ್ದಾಗ ಮುಗುಳು ನಗೆಯನ್ನು ಬೀರುತ್ತಾರೆ. ಆಗ ನನ್ನ ಮುಖದ ಮೇಲು ನಗು ಮೂಡುತ್ತದೆ ಎಂದು ತಿಳಿಸಿದರು.

ಪಂದ್ಯದ ನಡೆಯುವ ಕೆಲವು ಸಂದರ್ಭದಲ್ಲಿ ಹಲವು ವೇಳೆ ನಾನೇ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. ಆದರೆ ನಾನು 10 ನಿರ್ಧಾರಗಳನ್ನು ತೆಗೆದುಕೊಂಡರೆ ಅದರಲ್ಲಿ 8 ರಿಂದ 9 ಬಾರಿ ಅವರ ಸಲಹೆ ಪಡೆಯುತ್ತೇನೆ. ನಮ್ಮಿಬ್ಬರ ನಡುವಿನ ವೈಮನಸ್ಸಿನ ಕುರಿತು ಹಲವು ಬಾರಿ ಬರಹಗಳು ಪ್ರಕಟಗೊಂಡಿದ್ದರೂ ಅವುಗಳನ್ನು ನಾವು ಎಂದು ಓದಿಲ್ಲ. ಪಂದ್ಯದ ನಡುವೆ ಜೋಕ್ ಮಾಡುವುದು ಸಾಮಾನ್ಯವಾಗಿರುತ್ತದೆ. ನನ್ನ ನಾಯಕತ್ವದ ಆರಂಭದ ದಿನಗಳಲ್ಲಿ ಧೋನಿ ಅವರಂತಹ ಹಿರಿಯ ಆಟಗಾರರ ಜೊತೆ ಆಡಲು ಹೆಮ್ಮೆಯಾಗುತ್ತದೆ. ಇಂದಿಗೂ ನಾನು ಅವರಿಂದ ಬಹಳ ಕಲಿಯುತ್ತಿದ್ದೇನೆ ಎಂದು ಹೇಳಿದರು.

Leave a Reply

Your email address will not be published. Required fields are marked *