ವಿಡಿಯೋ: ಕೋಳಿಯನ್ನು ಮೇಲಕ್ಕೆತ್ತಲು ಬಾಲಕನನ್ನು ಬಾವಿಗಿಳಿಸಿದ ಮಹಿಳೆಯರು!

ಮಂಗಳೂರು: ನೀರಿಲ್ಲದ ಬಾವಿಯೊಳಗೆ ಬಿದ್ದಿದ್ದ ಕೋಳಿಯನ್ನು ಎತ್ತಲು ಬಾಲಕನೋರ್ವನನ್ನು ಹಗ್ಗ ಕಟ್ಟಿ ಬಾವಿಯೊಳಗೆ ಇಳಿಸಿದ ಘಟನೆ ರಾಜ್ಯದ ಕರಾವಳಿಯಲ್ಲಿ ನಡೆದಿದೆ.

ಈ ಭಯಾನಕ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಭಾರೀ ಚರ್ಚೆಗೂ ಗ್ರಾಮಸವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಮಹಿಳೆಯರು ಸೇರಿ ಬಾಲಕನನ್ನು ಬಕೆಟ್‍ನಲ್ಲಿ ನಿಲ್ಲಿಸಿ ಆತನ ಸೊಂಟಕ್ಕೆ ಹಗ್ಗ ಕಟ್ಟಿ ಬಾವಿಯೊಳಗೆ ಇಳಿಸಿದ್ದಾರೆ. ಬಾವಿಯೊಳಗೆ ಇಳಿದ ಬಾಲಕ ಕೋಳಿಯನ್ನು ಹಿಡಿದು ಬಕೆಟ್‍ನೊಳಗೆ ಹಾಕಿ ಮತ್ತೆ ಅದೇ ಬಕೆಟ್ ಮೂಲಕ ಮೇಲಕ್ಕೆ ಬರುತ್ತಾನೆ. ಕೋಳಿ ಸಿಕ್ಕಿದ ಖುಷಿಯಲ್ಲಿ ಮಹಿಳೆಯರು ಬಾಲಕ ಬಕೆಟ್‍ನಲ್ಲಿರೋದನ್ನು ಗಮನಿಸದೇ ವೇಗವಾಗಿ ಮೇಲಕ್ಕೆ ಎಳೆದಿದ್ದಾರೆ.

ಒಂದು ವೇಳೆ ಆಯತಪ್ಪಿ ಬಾಲಕ ಕೆಳಕ್ಕೆ ಬಿದ್ದಿದ್ದರೆ ದೊಡ್ಡ ಅನಾಹುತವಾಗ್ತಿತ್ತು. ಮಾತ್ರವಲ್ಲದೆ ಈ ಹಿಂದೆ ಜಿಲ್ಲೆಯಲ್ಲೇ ಕೆಲವು ಮಂದಿ ಬಾವಿಯೊಳಗೆ ಇಳಿದು ಉಸಿರುಗಟ್ಟಿ ಸಾವನ್ನಪ್ಪಿದ ಪ್ರಕರಣವೂ ನಡೆದಿದೆ. ಈ ದೃಶ್ಯವನ್ನು ಚಿತ್ರೀಕರಿಸಿದ ಯುವಕನೂ ಈ ಕೃತ್ಯಕ್ಕೆ ಸಹಕರಿಸಿದ್ದಾನೆ. ಬಾವಿಯೊಳಗೆ ಆಯತಪ್ಪಿ ಬಿದ್ದಿರುವ, ಉಸಿರುಗಟ್ಟಿ ಸಾವನ್ನಪ್ಪಿದ ಪ್ರಕರಣಗಳು ನಡೆಯುತ್ತಿದ್ದರೂ ಈ ರೀತಿ ಮಾಡಿರೋದು ಇದೀಗ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

You might also like More from author

Leave A Reply

Your email address will not be published.

badge