ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿ ಕಾಲಿನಿಂದ ಒದ್ದು ಹಲ್ಲೆ ಮಾಡಿದ ಘಟನೆ ಬಾಣಸವಾಡಿಯ ಲಿಂಗಾರಾಜಪುರದಲ್ಲಿ ನಡೆದಿದೆ.
ಇಬ್ಬರು ಯುವತಿಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾಮುಕರು ಬೈಕಿನಲ್ಲಿ ಬಂದು ಅಸಭ್ಯವಾಗಿ ವರ್ತಿಸಿದ್ದಾರೆ. ಬೈಕಿನಲ್ಲಿ ಹೋಗುವಾಗ ಯುವತಿಯರಿಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ. ಬೈಕ್ ನಲ್ಲಿ ಬಂದು ಕಿಡಿಗೇಡಿಗಳು ಯುವತಿಗೆ ಒದ್ದ ತಕ್ಷಣ ಪರಾರಿಯಾಗಿದ್ದಾರೆ.
ಪುಂಡರು ಇಬ್ಬರು ಯುವತಿಯರಿಗೆ ಕಾಲಿನಿಂದ ಒದಿದ್ದು, ಓರ್ವ ಯುವತಿಯ ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಕಿಡಿಗೇಡಿಗಳು ಯುವತಿಯರಿಗೆ ಒದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಿಡಿಗೇಡಿಗಳ ಈ ಕೃತ್ಯದಿಂದ ಯುವತಿಯರು ಭಯಭೀತರಾಗಿದ್ದಾರೆ.
ಸದ್ಯ ಯುವತಿಯರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.youtube.com/watch?v=J_vhq6TDW-8