ಬಾಲಿವುಡ್ ಹಿರಿಯ ನಟಿ ರೀಮಾ ಲಗೂ ನಿಧನ

ಮುಂಬೈ: ಬಾಲಿವುಡ್ ನ ಹಿರಿಯ ನಟಿ ರೀಮಾ ಲಗೂ ನಿಧನ ಹೊಂದಿದ್ದಾರೆ. 59 ವಯಸ್ಸಿನ ರೀಮಾ ಅವರು ಇಂದು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಬುಧವಾರ ರಾತ್ರಿ ಏಕಾಏಕಿಯಾಗಿ ಎದೆನೋವು ಕಾಣಿಸಿಕೊಂಡಿದ್ದು ಕೂಡಲೇ ಅವರನ್ನು ಕೋಕಿಲಾಬೆನ್ ಧೀರೂಬಾಯ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಂತಾ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಮ್ ನಾರಾಯಣ್ ಹೇಳಿದ್ದಾರೆ.

ರೀಮಾ ಅವರ ಅಳಿಯ ರಾಷ್ಟ್ರೀಯ ಪತ್ರಿಯೊಂದರ ಜೊತೆ ಮಾತನಾಡಿ, ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೀಮಾ ಅವರನ್ನು ರಾತ್ರಿ 1 ಗಂಟೆಗೆ ಮುಂಬೈನ ಅಂಧೇರಿಯಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ. ಆದ್ರೆ 3.15ರ ಸುಮಾರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ರೀಮಾ ಅವರು ಆರೋಗ್ಯವಾಗಿಯೇ ಇದ್ರು. ಹೀಗಾಗಿ ಏಕಾಏಕಿ ಅವರ ಮರಣ ಹೊಂದಿರುವುದು ನಮಗೆ ಆಘಾತ ತಂದಿದೆ ಅಂತಾ ಹೇಳಿದ್ದಾರೆ.

1970-80 ರ ದಶಕದಲ್ಲಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿರೋ ರೀಮಾ ಅವರು ಹಿಂದಿ, ಮರಾಠಿ ಚಿತ್ರಗಳಲ್ಲಿ ನಟಿಸಿದ್ದರು. ಪೋಷಕ ಪಾತ್ರದಲ್ಲಿ ಅಭಿನಯಿಸುತ್ತಿದ್ದ ನಟಿ ಮೈನೇ ಪ್ಯಾರ್ ಕಿಯಾ, ಹಮ್ ಆಪ್ ಕೇ ಹೈ ಕೌನ್, ಕುಚ್-ಕುಚ್ ಹೋತಾ ಹೈ, ಹಮ್ ಸಾಥ್ ಸಾಥ್ ಹೇ ಹೀಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದರು.

You might also like More from author

Leave A Reply

Your email address will not be published.

badge