Wednesday, 20th September 2017

ಹಿರಿಯ ನಟ ಗುರುಮೂರ್ತಿ ಇನ್ನಿಲ್ಲ

ಬೆಂಗಳೂರು: ತೀವ್ರ ಹೃದಯಾಘಾತದಿಂದ ಹಿರಿಯ ನಟ ಗುರುಮೂರ್ತಿ(70) ಕಳೆದ ರಾತ್ರಿ ನಗರದ ಕನಕಪುರ ರಸ್ತೆ ನಿವಾಸದಲ್ಲಿ ನಿಧನರಾಗಿದ್ದಾರೆ.

ಶುಕ್ರವಾರ ಸಂಜೆ ಮನೆಯಲ್ಲಿ ಯಾರು ಇಲ್ಲದ ವೇಳೆ ತೀವ್ರ ಹೃದಯಾಘಾತವಾಗಿದೆ. ಕೊಡಲೇ ಅವರನ್ನು ರಾಜಶೇಖರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಗುರುಮೂರ್ತಿಯವರು ಪತ್ನಿ ಪೂರ್ಣಿಮಾ, ಮಕ್ಕಳಾದ ಜಯಂತ್, ನಿಶಾಂತ್ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕಿರಿಯ ಪುತ್ರ ಯೂರೋಪ್ ಪ್ರವಾಸದಲ್ಲಿರುವುದರಿಂದ ವಾಪಸ್ ಬಂದ ನಂತರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಗುರುಮೂರ್ತಿ ಭಾಜನರಾಗಿದ್ದರು.

ಮೂಲತಃ ತುಮಕೂರಿನ ತಿಪಟೂರಿನವರಾದ ಗುರುಮೂರ್ತಿ, ಗುರುಮಾಮ ಎಂದೇ ಸಿನಿಮಾ, ಚಿತ್ರರಂಗ ಹಾಗೂ ಧಾರಾವಾಹಿಗಳಲ್ಲಿ ಫೇಮಸ್ ಆಗಿದ್ದರು. ದೂರದರ್ಶನದಲ್ಲಿ ಬರುತ್ತಿದ್ದ ‘ಅಡಚಣೆಗಾಗಿ ಕ್ಷಮಿಸಿ’ ಸಿರಿಯಲ್ ನಿಂದ ಸಾಕಷ್ಟು ಖ್ಯಾತಿಗಳಿಸಿದ್ರು.

ದಿವಂಗತ ಗುರುಮೂರ್ತಿ ಹೆಚ್ಚಿನದಾಗಿ ಪೋಷಕ ಪಾತ್ರ ಹಾಗೂ ಕಾಮಿಡಿ ಪತ್ರಗಳಲ್ಲಿ ಅಭಿನಯಿಸಿ ಎಲ್ಲರ ಪ್ರಶಂಸೆಗಳಿಸಿದ್ರು. ‘ಮುಕ್ತ ಮುಕ್ತ’ ಧಾರಾವಾಹಿ, ಕನ್ನಡದ ‘ಕಂಟಿ’ ಸೇರಿದಂತೆ ಹಲವು ಸಿರಿಯಲ್ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿದ್ದರು.

 

 

 

 

Leave a Reply

Your email address will not be published. Required fields are marked *