Tuesday, 17th October 2017

Recent News

ಸೇತುವೆಯಿಂದ ಮದುವೆ ದಿಬ್ಬಣದ ವ್ಯಾನ್ ಪಲ್ಟಿ- 10 ಜನರಿಗೆ ಗಾಯ

ಹಾವೇರಿ: ಮದುವೆ ದಿಬ್ಬಣಕ್ಕೆ ಹೋಗ್ತಿದ್ದ ವ್ಯಾನ್ ಪಲ್ಟಿಯಾಗಿ 10 ಜನರು ಗಾಯಗೊಂಡ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಕಳಸೂರು ಗ್ರಾಮದಲ್ಲಿ ನಡೆದಿದೆ.

ಕಳಸೂರ ಗ್ರಾಮದ ಬಳಿ ಇರೋ ವರದಾನದಿ ಸೇತುವೆ ಬಳಿ ವ್ಯಾನ್ ರಸ್ತೆಯಿಂದ ಕೆಳಗುರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಣ್ಣಪುಟ್ಟ ಗಾಯಗೊಂಡ 10 ಜನರ ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಗಾಯಾಳುಗಳೆಲ್ಲ ಸವಣೂರು ಪಟ್ಟಣದ ನಿವಾಸಿಗಳು ಎನ್ನಲಾಗಿದೆ.

ವ್ಯಾನ್ ನಲ್ಲಿ ಇದ್ದವರು ಹಾವೇರಿ ತಾಲೂಕಿನ ಕೋಳೂರು ಗ್ರಾಮದಲ್ಲಿರುವ ಚೇಗನ್ ಎಂಬುವರ ಮದುವೆ ಹೊಗುತ್ತಿದ್ದರು. ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *