Sunday, 24th June 2018

Recent News

ಯುಪಿ ಬಜೆಟ್ 2018: ಮದರಸಾಗಳ ಆಧುನೀಕರಣಕ್ಕೆ 404 ಕೋಟಿ ರೂ. ಅನುದಾನ

-ಹಿಂದಿನ ಬಜೆಟ್‍ಗಿಂತಲೂ 282 ಕೋಟಿ ರೂ. ಹೆಚ್ಚಳ

ಉತ್ತರಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಮದರಸಾಗಳ ಆಧುನೀಕರಣ (ಇಸ್ಲಾಮಿಕ್ ಶಾಲೆಗಳು) ಕ್ಕೆ ತಮ್ಮ ಬಜೆಟ್ ನಲ್ಲಿ ಹೆಚ್ಚಿನ ಪ್ರಮುಖ್ಯತೆ ನೀಡಿ 404 ಕೋಟಿ ರೂ. ಗಳನ್ನು ಮೀಸಲಿಟ್ಟಿದ್ದಾರೆ. ಕಳೆದ ಬಾರಿ ಬಜೆಟ್ ಅಲ್ಪಸಂಖ್ಯಾತರಿಗೆ ನೀಡಿದ ಅನುದಾನಕ್ಕಿಂತಲೂ ಶೇ.10 ರಷ್ಟು ಮೊತ್ತವನ್ನು ಹೆಚ್ಚಿಸಿದ್ದಾರೆ.

ಈ ಬಾರಿಯ ಯುಪಿ ಸರ್ಕಾರ ಬಜೆಟ್ ನಲ್ಲಿ ಒಟ್ಟಾರೆ 2,757 ಕೋಟಿ ರೂ. ಅಲ್ಪ ಸಂಖ್ಯಾತರ ಅಭಿವೃದ್ಧಿ ಮತ್ತು ಕಲ್ಯಾಣ ಇಲಾಖೆಗೆ ನೀಡಿದೆ.

ರಾಜ್ಯ ಸರ್ಕಾರ ಕ್ರಮ ಸ್ವಾಗತಾರ್ಹ ಕ್ರಮವಾಗಿದೆ. ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಆಧುನಿಕ ಶಿಕ್ಷಣ ಒದಗಿಸಲು ಮತ್ತು ಮೂಲಸೌಕರ್ಯವನ್ನು ನೀಡಲು ಈ ಹಣವನ್ನು ಬಳಸಿಕೊಳ್ಳಲಾಗುವುದು ಎಂದು ಲಕ್ನೋ-ಸಿಟಾಪುರ ಹೆದ್ದಾರಿಯಲ್ಲಿ ಮದರಸಾ ಮುಖ್ಯಸ್ಥ ಮೊಹದ್ ಫಾರೂಕ್ ಹೇಳಿದ್ದಾರೆ.

ಈಗಾಗಲೇ ಸಿಎಂ ಯೋಗಿ ನೇತ್ರತ್ವದ ಸರ್ಕಾರ ಮದರಸಾಗಳಲ್ಲಿ ಎನ್‍ಸಿಇಆರ್ ಟಿ ಪಠ್ಯಕ್ರಮ ಹಾಗೂ ಉನ್ನತ ಮಾಧ್ಯಮಿಕ ಶಿಕ್ಷಣದಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಕಡ್ಡಾಯವಾಗಿ ಭೋದಿಸಲು ಆದೇಶ ನೀಡಿದೆ.

ಮದರಸಾ ನೋಂದಣಿ ಯೋಜನೆಯಡಿ ಯುಪಿ ಸರ್ಕಾರ ಪ್ರತ್ಯೇಕ 215 ಕೋಟಿ ರೂ. ನೀಡಲು ಮುಂದಾಗಿದೆ. ಈವರೆಗೆ ರಾಜ್ಯ ಸರ್ಕಾರ ಈ ಯೋಜನೆ ಅಡಿ ಪ್ರಾಥಮಿಕವಾಗಿ 246 ಆಲಿಯಾ ಮಟ್ಟ ಶಾಲೆಗಳನ್ನು ಗುರುತಿಸಲಾಗಿದೆ.

ಈ ಹಿಂದೆ ಅಧಿಕಾರ ವಹಿಸಿದ್ದ ಅಖಿಲೇಶ್ ಯಾದವ್ ಸರ್ಕಾರಕ್ಕೆ ಹೊಲಿಕೆ ಮಾಡಿದರೆ ಕಳೆದ ವರ್ಷ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಮೊದಲು ಅಲ್ಪಸಂಖ್ಯಾತರಿಗೆ ನೀಡಿದ ಅನುದಾನದಲ್ಲಿ ಕಡಿತಗೊಳಿಸಿತ್ತು. ಆದರೆ ಕಳೆದ ಬಾರಿ ನೀಡಿದ್ದ 2,475.61 ಕೋಟಿ ರೂ. ಮೊತ್ತವನ್ನು ಈ ಬಾರಿ 282 ಕೋಟಿ ರೂ. ಗೆ ಹೆಚ್ಚಿಸುವ ಮೂಲಕ ಒಟ್ಟಾರೆ 2,757 ಕೋಟಿ ರೂ.ಗಳನ್ನು ನೀಡಿದ್ದಾರೆ.

ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿವಿಧ ವಿದ್ಯಾರ್ಥಿ ವೇತನ ಯೋಜನೆಗಳ ಮೂಲಕ 1,500 ಕೋಟಿ ರೂ.ಗಳನ್ನು ನೀಡಲಾಗುತ್ತದೆ. ಅಲ್ಲದೇ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಇನ್ನುಳಿದಂತೆ ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಮದುವೆಗಾಗಿ 74 ಕೋಟಿ. ರೂಗಳನ್ನು ನೀಡಲಾಗಿದೆ.

ಉತ್ತರ ಪ್ರದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.20 ರಷ್ಟು ಅಲ್ಪಸಂಖ್ಯಾತರಿದ್ದಾರೆ. ಈ ಬಜೆಟ್ ನಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ನೀಡಿರುವ 800 ಕೋಟಿ ರೂ. ಮೀಸಲಿಟಿದ್ದು ಉತ್ತಮ ಕ್ರಮ. ಆದರೆ ರಾಜ್ಯಸರ್ಕಾರ ಐಟಿಐ, ಐಐಟಿ, ವೈದ್ಯಕೀಯ ಮತ್ತು ಮ್ಯಾನೇಜ್‍ಮೆಂಟ್ ಸಂಸ್ಥೆಗಳಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಿದರೆ ಹೆಚ್ಚು ಸಂತೋಷ ನೀಡುತ್ತಿತ್ತು ಎಂದು ಯುವ ಉದ್ಯಮಿ ಫೌಜನ್ ಆಲ್ವಿ ಹೇಳಿದ್ದಾರೆ.

 

Leave a Reply

Your email address will not be published. Required fields are marked *