Tuesday, 22nd May 2018

Recent News

ರಕ್ತದ ಪರಿಚಯವಿಲ್ಲದವರಿಗೆ ರಕ್ತದ ಪರಿಚಯವಾಗಲು ಶುರುವಾಗಿದೆ: ಅನಂತ್ ಕುಮಾರ್ ಹೆಗ್ಡೆ

ಕಾರವಾರ: ರಕ್ತದ ಪರಿಚಯ ಇಲ್ಲದವರಿಗೆ ರಕ್ತದ ಪರಿಚಯವಾಗಲು ಶುರುವಾಗಿದೆ. ಖೋಟಾ ಹಿಂದುತ್ವವಾದಿಗಳು ಹುಟ್ಟಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.

ಶಿರಸಿಯ ಜಲಜಾಗೃತಿ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ರಾಷ್ಟ್ರೀಯತೆ ಮರತುಹೋಗುವ ಸಂದರ್ಭದಲ್ಲಿ ಖೋಟಾ ಹಿಂದುತ್ವದ ಮೂಲಕ ಸಿದ್ದರಾಮಯ್ಯನವರಿಗೆ ಮತ್ತು ರಾಹುಲ್ ಗಾಂಧಿಗೆ ಹಿಂದುತ್ವದ ನೆನಪಾಗಿದೆ. ಇದಕ್ಕೆ ನಾನು ಕಾರ್ಯಕರ್ತರಿಗೆ ಹಾಗೂ ಅವರಿಗೆ ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ಕೇವಲ ಬಾಯಲ್ಲಿ ಹಿಂದುತ್ವ ಹೇಳಿದರೆ ಸಾಲದು ಆಚರಣೆಗೂ ತನ್ನಿ. ಆಗ ಆ ರಕ್ತಕ್ಕೆ ಬೆಲೆಕಟ್ಟಿದ ಹಾಗೆ ಆಗುತ್ತದೆ. ರಾಹುಲ್ ಗಾಂಧಿ ಯಾರು ಎಂಬುದನ್ನು ಸಿದ್ದರಾಮಯ್ಯ ಅವರ ರಕ್ತವನ್ನ ಪರೀಕ್ಷೆ ಮಾಡಿ ಹೇಳಬೇಕು ಎಂದು ಟಾಂಗ್ ಕೊಟ್ಟರು.

ರಾಹುಲ್ ಗಾಂಧಿ ಕರ್ನಾಟಕದಲ್ಲಿ ಓಡಾಡಿದಷ್ಟೂ ಒಳ್ಳೆಯದು. ಜನರಿಗೆ ಉತ್ತಮ ಮನೋರಂಜನೆ ಸಿಗಲಿದೆ. ಜನರು ಕೂಡ ಮನೋರಂಜನೆ ಇಷ್ಟಪಡುತ್ತಾರೆ. ಕರ್ನಾಟಕದಲ್ಲಿ ರಾಹುಲ್ ಗಾಂಧಿ ಓಡಾಡುವುದರಿಂದ ಬಿಜೆಪಿ ಇನ್ನಷ್ಟು ಬಲಿಷ್ಟವಾಗಲಿದೆ ಎಂದು ಹೇಳಿದರು.

 

 

Leave a Reply

Your email address will not be published. Required fields are marked *