Tuesday, 22nd May 2018

Recent News

ಗಂಟೆಗೆ 140 ಪ್ಲಸ್ ವೇಗ: ಯುವ ಕ್ರಿಕೆಟಿಗರ ಮೇಲೆ ಕಣ್ಣಿಡಲು ಕೊಹ್ಲಿಗೆ ಗಂಗೂಲಿ ಸಲಹೆ

ನವದೆಹಲಿ: ಟೀಂ ಇಂಡಿಯಾ ಅಂಡರ್ 19ರ ತಂಡದ ಯುವ ವೇಗಿಗಳು ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್‍ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಗಂಟೆಗೆ 140 ಕಿ.ಮೀ ವೇಗದಲ್ಲಿ ಬೌಲ್ ಮಾಡಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಕಿರಿಯ ತಂಡದ ಪ್ರದರ್ಶನ ಕಂಡ ಮಾಜಿ ನಾಯಕ ಸೌರವ್ ಗಂಗೂಲಿ, ಯುವ ಆಟಗಾರರಿಗೆ ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ್ದು, ಯುವ ಆಟಗಾರರ ಬಗ್ಗೆ ಒಂದು ಕಣ್ಣಿಟ್ಟಿರಿ ಎಂದು ಟೀಂ ಇಂಡಿಯಾ ನಾಯಕ ಕೊಹ್ಲಿ, ಮಾಜಿ ಆಟಗಾರ ವಿವಿಎಸ್ ಲಕ್ಷಣ್ ರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

 

ಅಂಡರ್ 19 ತಂಡದ ಪ್ರಮುಖ ವೇಗಿಗಳಾದ ಕಮಲೇಶ್ ನಾಗರಕೋಟಿ (18) ಹಾಗೂ ಶಿವಂ ಮಾವಿ(19) ಅವರು ಆಸ್ಟ್ರೇಲಿಯಾ ವಿರುದ್ಧ ತಮ್ಮ ವೇಗದ ಬೌಲಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಈ ವೇಳೆ ನಾಗರಕೋಟೆ ಗಂಟೆಗೆ 149 ಕಿ.ಮೀ ವೇಗದಲ್ಲಿ ಬೌಲ್ ಮಾಡಿ ಅಚ್ಚರಿ ಮೂಡಿಸಿದ್ದರು.

ಅಲ್ಲದೇ ಈ ಕುರಿತು ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್, ಯುವ ಬೌಲರ್ ಗಳ ವೇಗವನ್ನು ತಿಳಿಸುವ ಚಾರ್ಟ್ ಫೋಟೋವನ್ನು ಟ್ವೀಟ್ ಮಾಡಿ ಅಭಿನಂದನೆ ತಿಳಿಸಿದ್ದಾರೆ.

ಅಂದ ಹಾಗೆ ರಾಜಸ್ಥಾನ ವೇಗಿ ಕಮಲೇಶ್ ಈ ಹಿಂದೆಯೂ ಸುದ್ದಿಯಾಗಿದ್ದು, ಭಾರತದ ಎ ತಂಡದ ಕ್ರಿಕೆಟ್‍ನಲ್ಲಿ ಗುಜರಾತ್ ವಿರುದ್ಧದ ವಿಜಯ್ ಹಜಾರೆ ಟ್ರೋಫಿಯಲ್ಲಿ ರಾಜಸ್ಥಾನ ಪರ ಮೊಟ್ಟ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದರು.

ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಅಂಡರ್ 19 ತಂಡದ ನಾಯಕ ಪೃಥ್ವಿ ಶಾ (94), ಮನ್‍ಜೋತ್ ಕಾಲ್ರಾ (86) ಹಾಗೂ ಶುಬ್‍ಮನ್ ಗಿಲ್ (62) ಅವರು ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿ 328ನ ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು. ಟೀಂ ಇಂಡಿಯಾ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡದ ಬ್ಯಾಟಿಂಗ್ ಪಡೆ ಭಾರತದ ಬೌಲಿಂಗ್ ದಾಳಿ ಎದುರಿಸಲಾಗದೆ 228 ರನ್ ಗೆ ಅಲೌಟ್ ಆಯಿತು. ಇದರೊಂದಿಗೆ ಟೀಮ್ ಇಂಡಿಯಾ 100 ರನ್ ಗಳ ಭರ್ಜರಿ ಜಯ ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

Leave a Reply

Your email address will not be published. Required fields are marked *