Thursday, 21st June 2018

Recent News

ಹುಚ್ಚ ವೆಂಕಟ್ ಲವ್ ಸ್ಟೋರಿಗೆ ಟ್ವಿಸ್ಟ್: ನಿಜಕ್ಕೂ ಫಿನಾಯಿಲ್ ಕುಡಿದಿದ್ರಾ ವೆಂಕಟ್?

ಬೆಂಗಳೂರು: ಭಾನುವಾರ ಸಂಜೆ ನಟ ಹುಚ್ಚ ವೆಂಕಟ್ ಫಿನಾಯಿಲ್ ಕುಡಿದು ಆಸ್ಪತ್ರೆ ಸೇರಿದ್ದರು. ಆದರೆ ನಿಜಕ್ಕೂ ಹುಚ್ಚ ವೆಂಕಟ್ ಫಿನಾಯಿಲ್ ಕುಡಿದಿದ್ರಾ ಎಂಬ ಪ್ರಶ್ನೆ ಹಲವರಲ್ಲಿ ಕಾಡಿತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ವೆಂಕಟ್ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿಲ್ಲ ಎಂದು ಮಲ್ಲಿಗೆ ಆಸ್ಪತ್ರೆ ವೈದ್ಯರು ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

ನಾನು ಅರ್ಧಬಾಟಲ್ ಫಿನಾಯಿಲ್ ಕುಡಿದಿದ್ದೆ, ನಂತರ ವಾಂತಿ ಮಾಡಿಕೊಂಡೆ ಎಂದು ಹುಚ್ಚ ವೆಂಕಟ್ ಹೇಳಿದ್ದರು. ಒಂದು ವೇಳೆ ಅರ್ಧ ಬಾಟಲ್ ಫಿನಾಯಿಲ್ ಕುಡಿದಿದ್ರೆ ಎರಡು ದಿನ ಐಸಿಯುನಲ್ಲಿ ಚಿಕಿತ್ಸೆ ಪಡೆಯಬೇಕಾಗಿತ್ತು. ಆಸ್ಪತ್ರೆಗೆ ಬಂದ ಹುಚ್ಚ ವೆಂಕಟ್ ಕೇವಲ ಹೇಳಿಕೆಯನ್ನಷ್ಟೇ ನೀಡಿದ್ರೂ ವಿನಃ ಅಥವಾ ಯಾವುದೇ ಚಿಕಿತ್ಸೆಗೆ ಸ್ಪಂದಿಸಿರಲಿಲ್ಲ. ಆಸ್ಪತ್ರೆಗೆ ಸೇರಿದ ಮೇಲೆ ವೈದ್ಯಾಧಿಕಾರಿಗಳ ಜೊತೆ ಜಗಳ ಮಾಡಿಕೊಂಡು ಹೊರ ಬರುವ ಪ್ರಯತ್ನ ಮಾಡಿದ್ದರು.

ಹುಚ್ಚ ವೆಂಕಟ್ ದೇಹದಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ. ಸಂಜೆ 5 ಗಂಟೆಗೆ ಆಸ್ಪತ್ರೆಗೆ ಬಂದ ವೆಂಕಟ್, ಹೊರಗೆಯೇ ಒಂದು ಗಂಟೆಯೇ ಹೈಡ್ರಾಮ ಮಾಡಿದ್ದಾರೆ. 6 ಗಂಟೆಯ ವೇಳೆ ಆಸ್ಪತ್ರೆಯ ಒಳಗೆ ಬಂದ ವೆಂಕಟ್ ಯಾವುದೇ ಪರೀಕ್ಷೆಗೆ ಸಹಕರಿಸದೇ ಡಾಕ್ಟರ್ ಜೊತೆ ಜಗಳ ಮಾಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಹುಚ್ಚ ವೆಂಕಟ್ ವಾಂತಿ ಮಾಡಿಕೊಂಡಿಲ್ಲ. 6 ಗಂಟೆಯಿಂದ 8 ಗಂಟೆಯವರೆಗೆ ಕೇವಲ ಗ್ಲೊಕೋಸ್ ಮಾತ್ರ ನೀಡಲಾಗಿತ್ತು. 8 ಗಂಟೆಯ ವೇಳೆ ಆಸ್ಪತ್ರೆಗೆ ಮಾಧ್ಯಮಗಳ ಹೊರಟಾಗ ಹೊರಬಂದ ವೆಂಕಟ್ ಮತ್ತೆ ತಮ್ಮ ಹುಚ್ಚಾಟ ಪ್ರಾರಂಭಿಸಿದರು.

ಇತ್ತ ನಟಿ ರಚನಾ ಅವರು ಮಾಧ್ಯಮಗಳಲ್ಲಿ ಹೇಳಿಕೆಯನ್ನು ನೀಡುತ್ತಿದ್ದಂತೆ ಮಾಧ್ಯಮಗಳ ಸ್ಟುಡಿಯೋದಲ್ಲಿ ಬಂದು ಕುಳಿತುಕೊಳ್ತಾರೆ. ಮೈ ಮೇಲೆಲ್ಲಾ ಫಿನಾಯಿಲ್ ಸುರಿದುಕೊಂಡು ವೆಂಕಟ್ ಹೈ ಡ್ರಾಮ ಮಾಡಿದ್ದಾರೆ ಎಂದು ಹೇಳಲಾಗಿದೆ. ಹುಚ್ಚ ವೆಂಕಟ್ ಕೇವಲ ಜನರನ್ನು ನಂಬಿಸಿಲಿಕ್ಕೆ ಫಿನಾಯಿಲ್‍ನ್ನು ಮೈ ಮೇಲೆ ಸುರಿದುಕೊಂಡು ಡ್ರಾಮ ಮಾಡಿದ್ದಾರೆ.

ಯಾವಗಾಲೂ ನಾನು ಮಹಿಳೆಯರಿಗೆ ಮರ್ಯಾದೆ ಕೊಡ್ತಿನಿ ಅಂತಾ ಹೇಳ್ತನಿ ಎಂದು ಹೇಳ್ತಾಯಿದ್ದ ವೆಂಕಟ್‍ನ ನಟಿ ರಚನಾಳ ಮಾನವನ್ನು ಹರಾಜು ಹಾಕಿದ್ದು ಸರೀನಾ ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ.

Leave a Reply

Your email address will not be published. Required fields are marked *