Friday, 23rd March 2018

ರೈಲಿನ ಎಂಜಿನ್ ತಾಗಿ ಪ್ಲಾಟ್‍ಫಾರ್ಮ್ ಪುಡಿಪುಡಿ

ಕಲಬುರಗಿ: ರೈಲ್ವೇ ಎಂಜಿನ್ ಪ್ಲಾಟ್‍ಫಾರ್ಮ್ ಗೋಡೆಗೆ ತಗುಲಿ ಕೆಲ ಹೊತ್ತು ಆತಂಕ ಸೃಷ್ಟಿಸಿದ ಘಟನೆ ಇಂದು ಮುಂಜಾನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಸೊಲ್ಲಾಪುರದಿಂದ ವಾಡಿ ಮಾರ್ಗವಾಗಿ ಗುಂತಕಲ್ ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲಿನ ಎಂಜಿನ್ ಪ್ಲಾಟ್‍ಫಾರ್ಮ ಗೋಡೆಗೆ ತಗುಲಿದೆ. ಹೀಗಾಗಿ ಗೋಡೆ ಕಲ್ಲುಗಳು ಹಳಿ ಮೇಲೆ ಬಂದು ಬಿದ್ದಿವೆ. ಜೊತೆಗೆ ದೊಡ್ಡ ಸದ್ದು ಕೂಡಾ ಬಂದಿದೆ. ಹೀಗಾಗಿ ಕೆಲ ಪ್ರಯಾಣಿಕರು ಆತಂಕಗೊಂಡು ಬೋಗಿಯಿಂದ ಜಿಗದಿದ್ದಾರೆ.

ಪ್ಲಾಟ್‍ಫಾರ್ಮ್ ಗೋಡೆಯ ಹೊರಚಾಚಿಕೊಂಡ ಕಲ್ಲು ಎಂಜಿನ್ ಗೆ ತಗುಲಿದೆ. ವಾಡಿ ಪ್ಲಾಟ್‍ಫಾರ್ಮ್ ಹಳೆಯದಾಗಿದ್ದು, ಹೊಸ ಮಾದರಿಯ ರೈಲು ಎಂಜಿನ್ ಇಂದು ಬಂದಿದ್ದರಿಂದ ಈ ಘಟನೆ ನಡೆದಿದೆ ಅಂತ ಹೇಳಲಾಗಿದೆ. ಘಟನೆ ನಂತರ ಪ್ಲಾಟ್‍ಫಾರ್ಮ್ ಸರಿಗೊಳಿಸಿ ರೈಲು ಹೋಗಲು ಗ್ಯಾಂಗ್ ಮನ್ ಗಳು ಅವಕಾಶ ಮಾಡಿಕೊಟ್ಟಿದ್ದಾರೆ.

Leave a Reply

Your email address will not be published. Required fields are marked *