Sunday, 24th June 2018

ಹೋರಿ ಬೆದರಿಸುವ ಸ್ಪರ್ಧೆ – ಎತ್ತು ತಿವಿದು ಯುವಕ ಸಾವು

ಹಾವೇರಿ: ಜಾನಪದ ಕ್ರೀಡೆ ಹೋರಿ ಬೆದರಿಸೋ ಸ್ಪರ್ಧೆ ವೇಳೆ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ನಡೆದಿದೆ.

ಹಾವೇರಿ ನಗರದ ನಾಗೇಂದ್ರನಮಟ್ಟಿ ನಿವಾಸಿ ಯಲ್ಲಪ್ಪ ದೊಡ್ಡತಳವಾರ(20) ಮೃತ ಯುವಕ. ಸ್ಪರ್ಧೆ ವೀಕ್ಷಿಸುತ್ತಿದ್ದಾಗ ಹೋರಿ ತಿವಿದು ಗಂಭೀರವಾಗಿ ಗಾಯಗೊಂಡಿದ್ದ ಯಲ್ಲಪ್ಪ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಸೋಮವಾರ ಹಾನಗಲ್  ಪಟ್ಟಣದಲ್ಲಿ ನಡೆದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ನಡೆಯುತ್ತಿತ್ತು. ಈ ಸ್ಪರ್ಧೆಯನ್ನು ವೀಕ್ಷಿಸುತ್ತಿದ್ದ ವೇಳೆ ಯಲ್ಲಪ್ಪನ ತೊಡೆಯ ಭಾಗಕ್ಕೆ ಹೋರಿ ಕೊಂಬಿನಿಂದ ತಿವಿದಿತ್ತು. ನಂತರ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದನು. ತಕ್ಷಣ ಯಲ್ಲಪ್ಪ ನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಮೃತಪಟ್ಟಿದ್ದಾನೆ.

ಈ ಘಟನೆ ಸಮಬಂಧ ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಹಾನಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನು ಓದಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ದುರಂತ – ಹೋರಿ ತಿವಿದು ಓರ್ವ ಸಾವು

Leave a Reply

Your email address will not be published. Required fields are marked *