Thursday, 22nd March 2018

ಕಾಲು ಜಾರಿ ಕೆಂಡದ ರಾಶಿಗೆ ಬಿದ್ರೂ ಸುಟ್ಟ ಗಾಯದ ನಡುವೆಯೂ ದೇವರ ಸೇವೆ ಪೂರ್ಣಗೊಳಿಸಿದ ಅರ್ಚಕ!

ಮಂಡ್ಯ: ಕೆಂಡ ಹಾಯುವ ವೇಳೆ ಆಯತಪ್ಪಿ ಅರ್ಚಕ ಕೊಂಡಕ್ಕೆ ಬಿದ್ದ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿವಸ್ವಾಮಿ (55) ಕೆಂಡದ ರಾಶಿಗೆ ಬಿದ್ದ ಅರ್ಚಕ. ಇಂದು ಗ್ರಾಮದಲ್ಲಿ ಬಸವೇಶ್ವರ ದೇವರ ಕೊಂಡೋತ್ಸವ ನಡೆಯುತ್ತಿತ್ತು. ಮುಂಜಾನೆ 5 ಗಂಟೆಗೆ ವೇಳೆ ಕೈಯಲ್ಲಿ ವೀರಭದ್ರದೇವರ ವಿಗ್ರಹ ಹಿಡಿದು ಕೆಂಡ ಹಾಯುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ಅರ್ಚಕ ಶಿವಸ್ವಾಮಿ ಕೆಂಡದಲ್ಲಿ ಬಿದ್ದರೂ ಮತ್ತೆ ಎದ್ದು ದೇವರ ಸೇವೆ ನೆರವೇರಿಸಿದ್ದಾರೆ. ಘಟನೆ ವೇಳೆ ಕೆಂಡದ ಮೇಲೆ ಬಿದ್ದ ಪರಿಣಾಮ ಅರ್ಚಕರ ಕಾಲು ಮತ್ತು ಎದೆಯ ಭಾಗಕ್ಕೆ ಸುಟ್ಟ ಗಾಯವಾಗಿದೆ. ಪ್ರಸ್ತುತ ಅರ್ಚಕ ಶಿವಸ್ವಾಮಿ ಅವರನ್ನು ಮೈಸುರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *