ಧಾರವಾಡದಲ್ಲಿದೆ ಡಾ. ರಾಜ್‍ಕುಮಾರ್ ಅವರ ಅಂಬಾಸಿಡರ್ ಕಾರ್!

ಧಾರವಾಡ: ವರನಟ ಡಾ ರಾಜ್‍ಕುಮಾರ್ ಅವರ ಕಾರೊಂದು ಧಾರವಾಡದಲ್ಲಿದೆ. ನಗರದ ಹಾವೇರಿಪೇಟೆಯ ನಿವಾಸಿಯಾದ ಸಾದಿಕ್ ಧನುನವರ್ ಎಂಬವರು ಕಾರನ್ನ ಜೋಪಾನಾಗಿ ಇಟ್ಟುಕೊಂಡಿದ್ದಾರೆ.

ಸಾದಿಕ್ ನಾಲ್ಕು ವರ್ಷಗಳ ಹಿಂದೆ ಡಾ.ರಾಜ್ ಅವರ ಕಾರ್ ಖರೀದಿ ಮಾಡಿದ್ದಾರೆ. ರಾಜ್‍ಕುಮಾರ್ ಅವರ ಪ್ರತಿ ಹುಟ್ಟುಹಬ್ಬದಂದು ಅತ್ಯಂತ ಸಡಗರದಿಂದ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡುತ್ತಾರೆ. 1960ರ ಮಾಡೆಲಿನ ಎಂವೈಬಿ 4634 ನಂಬರಿನ ಕಂದು ಬಣ್ಣದ ಈ ಅಂಬಾಸಿಡರ್ ಕಾರು ಡಾ. ರಾಜ್ ಅವರ ಹಲವು ಚನಲಚಿತ್ರಗಳಲ್ಲಿ ಕೂಡಾ ಇದೆ. ಸಾದಿಕ್ ಅವರು ಕಾರಿನ ಹಿಂದೆ ಡಾ ರಾಜ್‍ಕುಮಾರ್ ಅವರ ಭಾವಚಿತ್ರ ಹಾಕಿದ್ದಾರೆ. ಪೋಸ್ಟರ್ ಜೊತೆ ಸವಿನೆನಪು ಎಂಬ ಬರಹವನ್ನು ಹಾಕಿಸಿದ್ದಾರೆ.

ಈ ಮೊದಲು ಕಾರು ಧಾರವಾಡದ ಪ್ರಸಿದ್ಧ ಪೇಡ ವ್ಯಾಪಾರಿ ಮಿಶ್ರಾ ಅವರ ಬಳಿ ಇತ್ತು. ನಾಲ್ಕು ವರ್ಷಗಳ ಹಿಂದೆ ಕಾರನ್ನ ಖರೀದಿಸಿದ ಅಭಿಮಾನಿ ಸಾದಿಕ್, ಇದೇ ಕಾರಿನಲ್ಲೇ ತಮ್ಮ ಪ್ರಯಾಣವನ್ನ ಮಾಡ್ತಾರೆ. ಇದನ್ನು ಯಾರಿಗೂ ಬಾಡಿಗೆ ನೀಡಲ್ಲ. ಬದಲಾಗಿ ಗೆಳೆಯರಿಗೆ ಮಾತ್ರ ಹೋಗಲು ಕಾರನ್ನ ಕೊಡ್ತಾರೆ. ಅಂಬಾಸಿಡರ್ ಕಾರನ್ನು ಎಷ್ಟು ಬೆಲೆಗೆ ಖರೀದಿ ಮಾಡಿದ್ದೀರಿ ಎಂದು ಕೇಳಿದ್ರೆ, ಈ ಕಾರಿಗೆ ಬೆಲೆ ಕಟ್ಟೋಕೆ ಆಗಲ್ಲ ಎಂದು ಹೇಳುತ್ತಾರೆ.

 

You might also like More from author

Leave A Reply

Your email address will not be published.

badge