Monday, 21st May 2018

Recent News

ಕತ್ರೀನಾ ಜೊತೆ ರೊಮ್ಯಾನ್ಸ್: ಪಾಕಿಸ್ತಾನಿ ನಟ ಫವೇದ್ ಖಾನ್ ಔಟ್- ಈ ನಟ ಇನ್

ಮುಂಬೈ: ಬಾಲಿವುಡ್ ಕ್ರಿಯೇಟಿವ್ ಡೈರಕ್ಟರ್ ಕರಣ್ ಜೋಹರ್ ತಮ್ಮ ಸಿನಿಮಾದಲ್ಲಿಯ ನಟಿ ಕತ್ರೀನಾ ಕೈಫ್ ಜೊತೆಗಿನ ರೊಮ್ಯಾನ್ಸ್ ದೃಶ್ಯಗಳಲ್ಲಿ ನಟಿಸಿದ್ದ ನಟ ಫವೇದ್ ಖಾನ್‍ನ್ನು ಕೈ ಬಿಟ್ಟಿದ್ದಾರೆ.

`ರಾತ್ ಬಾಕಿ’ ಎಂಬ ಸಿನಿಮಾ ಕರಣ್ ಜೋಹರ್ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ನಟಿ ಕತ್ರೀನಾ ಕೈಫ್ ಚಿತ್ರದಲ್ಲಿ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಪ್ರೀ-ಪ್ರೊಡೆಕ್ಷನ್ ಹಂತ ತಲುಪಿರುವ ಸಿನಿಮಾದಲ್ಲಿ ಫವೇದ್ ಖಾನ್ ನಟಿಸಿದ್ದರು.

ಫವೇದ್ ಖಾನ್ ನಟಿಸಿದ್ದ ಸೀನ್‍ಗಳನ್ನು ಮತ್ತೊಮ್ಮೆ ಚಿತ್ರೀಕರಣ ಮಾಡುತ್ತಿದ್ದು, ಫವೇದ್ ಖಾನ್ ಬದಲಾಗಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿದ್ದಾರಂತೆ. ಮಾಜಿ ಪ್ರಣಯ ಹಕ್ಕಿಗಳಾದ ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ರೊಮ್ಯಾನ್ಸ್ ದೃಶ್ಯಗಳಲ್ಲಿ ನಟಿಸುವುದರಿಂದ ಸಿನಿಮಾ ಹಿಟ್ ಆಗ್ಬಹುದು ಎಂದು ಕರಣ್ ಜೋಹರ್ ಲೆಕ್ಕಾಚಾರವಾಗಿದೆ. ಬ್ರೇಕ್ ಆಫ್ ಆದ್ಮೇಲೆ ಸಲ್ಮಾನ್ ಮತ್ತು ಕತ್ರೀನಾ `ಏಕ್ ಥಾ ಟೈಗರ್’ ಸಿನಿಮಾದಲ್ಲಿ ಒಂದಾಗಿದ್ದರು. ಈಗ ಅದೇ ಸಿನಿಮಾದ ಮುಂದುವರೆದ `ಟೈಗರ್ ಜಿಂದಾ ಹೈ’ದಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಕಳೆದ ವರ್ಷ ಕರಣ್ ಜೋಹರ್ ನಿರ್ದೇಶನದ `ಏ ದಿಲ್ ಹೈ ಮುಷ್ಕಿಲ್’ ಸಿನಿಮಾದಲ್ಲಿ ಫವೇದ್ ಖಾನ್ ನಟಿಸಿದ್ದು, ಚಿತ್ರ ಬಿಡುಗಡೆ ವೇಳೆ ಸಾಕಷ್ಟು ತೊಂದರೆಯನ್ನು ಅನುಭವಿಸಿತ್ತು. ಹೀಗಾಗಿ ಕರಣ್ ಮುಂಜಾಗ್ರತೆಯಾಗಿ ಫವೇಧ್ ಖಾನ್‍ನ್ನು `ರಾತ್ ಬಾಕಿ’ ಸಿನಿಮಾದಿಂದ ಕೈ ಬಿಟ್ಟಿದ್ದಾರೆ.

 

Geared up for the opening match today! #ISLU #PSL #islamabadunited

A post shared by Fawad A Khan (@fawadkhan81) on

Leave a Reply

Your email address will not be published. Required fields are marked *