Tuesday, 22nd May 2018

Recent News

ವಿಡಿಯೋ ನೋಡಿ ಜನರ ಪ್ರತಿಕ್ರಿಯೆಗೆ ಪ್ರಿಯಾ ಪ್ರಕಾಶ್ ಹೇಳಿದ್ದು ಹೀಗೆ

ಮುಂಬೈ: ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ಒಂದು ಹಾಡಿನ ವಿಡಿಯೋ ಮೂಲಕ ತನ್ನ ಎಕ್ಸ್ ಪ್ರೆಷನ್‍ನಿಂದಲೇ ಇಂಟರ್ ನ್ಯಾಷನಲ್ ಸೆನ್ಸೇಷನ್ ಸೃಷ್ಟಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವಾದ್ಯಂತ ಪ್ರಸಿದ್ಧರಾಗಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇಷ್ಟು ಪ್ರಸಿದ್ಧಿಯಾಗುತ್ತದೆ, ಸನ್ಸೇಷನ್ ಹುಟ್ಟಿಸುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಈ ವಿಡಿಯೋ ಚೆನ್ನಾಗಿದೆ ಎಂದು ಎಲ್ಲರೂ ತಿಳಿಸಿದ್ದರು. ಆದರೆ ಇಷ್ಟು ದೊಡ್ಡಮಟ್ಟದಲ್ಲಿ ಹಿಟ್ ಆಗುತ್ತದೆ ಎಂದು ನನಗೆ ತಿಳಿದಿರಲಿಲ್ಲ ಎಂದು ಪ್ರಿಯಾ ಪ್ರಕಾಶ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ನಾನು ಸದ್ಯ ತುಂಬಾ ಖುಷಿಯಾಗಿದ್ದೀನಿ. ನ್ಯಾಷನಲ್ ಕ್ರಶ್ ಆಗಿದ್ದು ನಾನು ತುಂಬ ಎಕ್ಸೈಟೆಡ್ ಆಗಿದ್ದೀನಿ. ಇದು ನನಗೆ ತುಂಬ ಹೊಸದು. ತುಂಬಾ ಜನ ನನ್ನ ಇಷ್ಟಪಡುತ್ತಿದ್ದಾರೆ. ಇದ್ದರಿಂದ ನನಗೆ ತುಂಬಾನೇ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.

ನನ್ನ ಹಾಗೂ ನನ್ನ ನಾಯಕನ ಮಧ್ಯೆ ಕ್ಯೂಟ್ ಆಗಿರೋ ಸೀನ್ ಬೇಕೆಂದು ನಿರ್ದೇಶಕರು ಹೇಳಿದ್ದರು. ಆಗ ನನಗೆ ಕಣ್ಣು ಸನ್ನೆ ಮಾಡಲು ಹೇಳಿದ್ದರು. ನಾನು ಮಾಡುತ್ತೀನಿ ಎಂದು ಸುಮ್ಮನೆ ಪ್ರಯತ್ನಿಸಿದೆ. ಇದಕ್ಕಾಗಿ ನಾವು ಯಾವ ಅಭ್ಯಾಸವನ್ನು ಮಾಡಲಿಲ್ಲ ಎಂದು ಪ್ರಿಯಾ ತಿಳಿಸಿದ್ದಾರೆ. ಇದನ್ನೂ ಓದಿ: ಇನ್ ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಬರೆದ ಪ್ರಿಯಾ ವಾರಿಯರ್!

ನಾನು ಮಹಿಳೆಯರ ಕಾಲೇಜಿನಲ್ಲಿ ಓದುತ್ತಿದ್ದೇನೆ ಹಾಗಾಗಿ ನನ್ನ ಯಾವುದೇ ಲವ್ ಸ್ಟೋರಿ ಇಲ್ಲ. ನನ್ನ ವಯಸ್ಸಿನ ಮಂದಿ ನನ್ನ ಜೊತೆ ಇದಿದ್ದು ಖುಷಿಯಾಗುತ್ತಿದೆ. ನಾವು ಸೆಟ್‍ಗಳಲ್ಲಿ ಹೆಚ್ಚು ತಮಾಷೆ ಮಾಡಿಕೊಂಡಿದ್ದೆವು. ಶೂಟಿಂಗ್ ಸಮಯದಲ್ಲಿ ನಾನು ನನ್ನ ಶಾಲಾ ದಿನವನ್ನು ಹೆಚ್ಚು ನೆನಪಿಸಿಕೊಳ್ಳುತ್ತಿದೆ. ಹಾಗಾಗಿ ನನಗೆ ಸ್ವಲ್ಪ ಸುಲಭವಾಯಿತ್ತು ಎಂದು ಪ್ರಿಯಾ ಹೇಳಿದ್ದಾರೆ.ಇದನ್ನೂ ಓದಿ: ಜಸ್ಟ್ 1 ವಿಡಿಯೋದಲ್ಲೇ ಇಂಟರ್ ನ್ಯಾಷನಲ್ ಸೆನ್ಸೇಷನ್! – ಕಣ್ಣೋಟದಿಂದಲೇ ಹುಡುಗರ ಮನಗೆದ್ದ ನಟಿ!

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ನಾನು ಖುಷಿಯಾಗಿದ್ದೀನಿ. ಅದರ ಜೊತೆ ಸ್ವಲ್ಪ ಟೆನ್ಸ್ ಕೂಡ ಆಗಿದ್ದೀನಿ. ಈಗ ನನ್ನ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಜನರು ನನ್ನ ಮೇಲೆ ಹೆಚ್ಚು ನಿರೀಕ್ಷೆ ಇಟ್ಟಿದ್ದಾರೆ. ಸಿನಿಮಾ ಬಿಡುಗಡೆ ಆದಾಗ ನಾನು ಅವರ ನಿರೀಕ್ಷೆಯನ್ನು ಕಡಿಮೆ ಮಾಡುವುದ್ದೀಲ್ಲ ಎಂದು ಪ್ರಿಯಾ ಮಾಧ್ಯಮವೊಂದರಲ್ಲಿ ತಿಳಿಸಿದ್ದಾರೆ.

Thank you for all the love and support💙

A post shared by priya prakash varrier (@priya.p.varrier) on

Leave a Reply

Your email address will not be published. Required fields are marked *