Wednesday, 23rd May 2018

Recent News

ಕಾಂಗ್ರೆಸ್‍ನಲ್ಲಿ ಅಲ್ಲಾ, ರಾಮ ಇಬ್ಬರೂ ಇದ್ದಾರೆ: ಸಚಿವ ಹೆಚ್.ಆಂಜನೇಯ

ಚಿತ್ರದುರ್ಗ: ಕಾಂಗ್ರೆಸ್ ನಲ್ಲಿ ಅಲ್ಲಾ ಮತ್ತು ರಾಮ ಇಬ್ಬರೂ ಇದ್ದಾರೆ ಎಂದು ಹೇಳುವ ಮೂಲಕ ಸಮಾಜಕಲ್ಯಾಣ ಸಚಿವ ಹೆಚ್. ಆಂಜನೇಯ ಅಚರು ಕಾರ್ಕಳದ ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.

ಇಂದು ಬೆಳಗ್ಗೆ ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜು ಕಟ್ಟಡ ಕಾಮಗಾರಿ ವೀಕ್ಷಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆಂಜನೇಯ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಬಂಟ್ವಾಳದಲ್ಲಿ ರಮಾನಾಥ್ ರೈ-ರಾಜೇಶ್ ನಡುವೆ ಸ್ಪರ್ಧೆ ಅಲ್ಲ, ಅಲ್ಲಾ-ರಾಮನ ನಡುವೆ ಸಮರ: ಶಾಸಕ ಸುನಿಲ್ ಕುಮಾರ್

ಆರೋಪ ಮಾಡೋದಕ್ಕೆ ಬಿಜೆಪಿಯವರು ಹುಟ್ಟಿದ್ದು. ಮಹದಾಯಿ ವಿಚಾರವಾಗಿ ನಡೆಯುತ್ತಿರೋ ಬಂದ್ ಶಾಂತಿಯುತವಾಗಿ ನಡೆಯಬೇಕಿದೆ. ಮಹದಾಯಿ ವಿಚಾರವಾಗಿ ಬಿಜೆಪಿ ಮಾಡುವ ಆರೋಪಗಳಲ್ಲಿ ಹುರುಳಿಲ್ಲ. ಅವರವರ ರಾಜ್ಯಕ್ಕೆ ಅವರೇನು ಮಾಡ್ಕೋತಾರೋ, ಅವರಂತೆ ನಾವು ನಮ್ ರಾಜ್ಯಕ್ಕೆ ಮಾಡಿಕೊಳ್ಳಬೇಕು. ಅವರವರ ರಾಜ್ಯದ ಹಿತ ಕಾಯಲು ಎಲ್ಲರಿಗೂ ಸ್ವತಂತ್ರವಿದೆ. ಇದೇನು ಪಾಕಿಸ್ತಾನವೇ ಎಂದು ಬಿಜೆಪಿ ನಾಯಕರನ್ನು ಸಚಿವರು ಪ್ರಶ್ನಿಸಿದರು.

ಕರ್ನಾಟಕ ರಾಜ್ಯ ಭಾರತ ದೇಶದಲ್ಲಿದೆ. ನಮ್ಮ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ದೇಶದ ಪ್ರಧಾನಮಂತ್ರಿಗಳು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಹದಾಯಿ ವಿವಾದ ಇತ್ಯರ್ಥಪಡಿಸಲಿ ಅಂದ್ರು. ಇದನ್ನೂ ಓದಿ: ರಾಜಕೀಯದಿಂದ ದೂರ ಉಳಿದು ಉತ್ತಮ ಆಡಳಿತ ನೀಡುವುದಷ್ಟೇ ನನ್ನ ಗುರಿ: ಹಾಸನ ಡಿಸಿ ರೋಹಿಣಿ ಸಿಂಧೂರಿ

ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ನಾವು ಬೇಡ ಅಂದ್ರೆ ಬಿಜೆಪಿಯವರು ಬೇಕು ಅಂತಾರೆ. ವರ್ಗಾವಣೆ ವಿಚಾರದಲ್ಲಿ ರಾಜಕೀಯವಿದೆ ಅಂತಾ ಹೇಳೋದು ತಪ್ಪಾಗುತ್ತದೆ. ಆಡಳಿತದಲ್ಲಿ ವೇಗದ ದೃಷ್ಟಿಯಿಂದ ವರ್ಗಾವಣೆ ಮಾಡೋದು ಸಹಜ ಮತ್ತು ವರ್ಗಾವಣೆ ನಿರಂತರ ಪ್ರಕ್ರಿಯೆಯಾಗಿದೆ. ದಲಿತರಿಗೆ ಸ್ಮಶಾನ ನೀಡೋ ವಿಚಾರದಲ್ಲಿ ನಿರ್ಲಕ್ಷ್ಯ ತೋರಿರೊ ಜಿಲ್ಲಾಧಿಕಾರಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಹೀಗಾಗಿ ಸ್ಥಳೀಯರ ವಿರೋಧದಿಂದ ಇದೆಲ್ಲ ಆಗಿದೆ ಅಂತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಯನ್ನು ಸಚಿವರು ಸಮರ್ಥಿಸಿಕೊಂಡರು. ಇದನ್ನೂ ಓದಿ: ರೋಹಿಣಿ ಸಿಂಧೂರಿ ವರ್ಗಾವಣೆಗೆ ಚುನಾವಣಾ ಆಯೋಗ ಬ್ರೇಕ್

ವರ್ಗಾವಣೆಯ ವಿಚಾರವಾಗಿ ಈ ದೇಶದ ಮಾಜಿ ಪ್ರಧಾನಿ ದೇವೇಗೌಡರು ಮಹಾಮಸ್ತಕಾಭಿಷೇಕವನ್ನು ಬಹಿಷ್ಕರಿಸುವುದು ಸರಿಯಲ್ಲ. 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕದಲ್ಲಿ ದೇವೆಗೌಡರು ಪಾಲ್ಗೊಳ್ಳಬೇಕು ಅಂತಾ ಹೆಚ್. ಆಂಜನೇಯ ಮನವಿ ಮಾಡಿಕೊಂಡರು. ಇದನ್ನೂ ಓದಿ: ರೋಹಿಣಿ ಸಿಂಧೂರಿ ಎತ್ತಂಗಡಿ ಕೇಸ್‍ನಲ್ಲಿ ಟ್ವಿಸ್ಟ್- ಡಿಸಿ ವರ್ಗಾವಣೆಗೆ ನಾನೇ ಕಾರಣ ಎಂದ `ಕೈ’ ನಾಯಕ!

Leave a Reply

Your email address will not be published. Required fields are marked *