Tuesday, 20th March 2018

Recent News

ವಿದ್ಯಾರ್ಥಿನಿಯ ಮೈ,ಕೈ ಮುಟ್ತಾನೆ-ತಾನೇ ದುಡ್ಡು ಕೊಟ್ಟು ಟೂರ್‍ಗೆ ಕರ್ಕೊಂಡು ಹೋಗ್ತಾನೆ

– ಎಸ್‍ಪಿ ಕಚೇರಿಗೆ ಬಂತು ಅನಾಮಧೇಯ ಪತ್ರ

ಚಿಕ್ಕಮಗಳೂರು: ಟ್ಯೂಷನ್ ಕೊಡ್ತೀನಿ ಅಂತ ಮನೆಗೆ ಕರೆದ, ಮನೇಗೆ ಹೋದ್ಮೇಲೆ ಮೈಮೇಲೆ ಕೈ ಹಾಕ್ದ. ಸರ್, ನೀವ್ ನಮ್ಮ ಗುರುಗಳು ಅಂದಿದ್ಕೆ ನಿಮ್ಗೆ ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕ ಬರುವಂತೆ ಮಾಡ್ತೀನಿ ಎಂದ. ಟೂರ್‍ಗೆಂದು ಕೇರಳಕ್ಕೆ ಕರೆದ್ಕೊಂಡ ಹೋಗಿದ್ದ. ಹೆಣ್ಮಕ್ಕಳು ಡ್ರೆಸ್ ಚೇಂಜ್ ಮಾಡುವಾಗ ಕ್ಯಾಮರಾ ಹಿಡಿದು ಒಳಗೇ ಬಂದ. ಇದು ಚಿಕ್ಕಮಗಳೂರಿನ ಪೋಲಿ ಮೇಷ್ಟ್ರ ಸ್ಟೋರಿ.

ಹೌದು. ಚಿಕ್ಕಮಗಳೂರಿನ ವಿಶ್ವವಿದ್ಯಾಲಯ ಪ್ರೌಢಶಾಲೆಯ ಗಣಿತ ಶಿಕ್ಷಕ ಲೋಕೇಶ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿದೆ. ಶತಮಾನದ ಇತಿಹಾಸವಿರುವ ಈ ಶಾಲೆಯ ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿಯರೇ ಬರೆದ್ರೋ ಅಥವಾ ಶಿಕ್ಷಕರೇ ಬರೆದ್ರೋ ಗೊತ್ತಿಲ್ಲ. ಆದರೆ ಎಸ್ಪಿ ಕಚೇರಿಗೆ ಬಂದ ಅನಾಮಧೇಯ ದೂರಿನನ್ವಯ ವಿಚಾರಣೆ ನಡೆಸಿದಾಗ ಈ ಶಿಕ್ಷಕನ ಕಾಮಪುರಾಣ ಬಯಲಾಗಿದೆ.

ಲೋಕೇಶ್ 6 ವಿದ್ಯಾರ್ಥಿನಿಯರನ್ನ ಮನೆಗೆ ಕರೆಸಿಕೊಂಡಿದ್ದನು. ನಿಮಗೆ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕ ಬರುವಂತೆ ಮಾಡ್ತೀನಿ ಎಂದು ಮೈ-ಕೈ ಮುಟ್ಟುತ್ತಿದ್ದನು. ವಿದ್ಯಾರ್ಥಿನಿಯರ ಶಾಲೆ, ಟೂರ್ ಫೀಸ್‍ನ ಇವನೇ ಕಟ್ಟಿ ಕರೆದುಕೊಂಡು ಹೋಗುತ್ತಿದ್ದ. ಅಲ್ಲಿ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದ ಎನ್ನಲಾಗಿದೆ. ಶಿಕ್ಷಕನ ಈ ಪುಂಡಾಟವನ್ನ ವಿದ್ಯಾರ್ಥಿನಿಯರು ಹೆಡ್ ಮಾಸ್ಟರ್ ಗಮನಕ್ಕೆ ತಂದ್ರೂ ಅವ್ರು ನಕ್ಕು ಸುಮ್ಮನಾಗುತ್ತಿದ್ದರು ಎಂದು ಹೆಣ್ಮಕ್ಕಳು ಪೊಲೀಸರ ತನಿಖೆ ವೇಳೆ ಹೇಳಿದ್ದಾರೆ. ಈಗ ಶಾಲೆಯ ಹೆಡ್ ಮಾಸ್ಟರ್ ಶ್ರೀನಿವಾಸ್, ಹೌದು, ಶಿಕ್ಷಕ ಲೋಕೇಶ್ ತಪ್ಪು ಮಾಡಿದ್ದಾರೆ ಎಂದು ಹೇಳುತ್ತಾರೆ.

ವಿದ್ಯಾರ್ಥಿನಿಯರನ್ನ ಟೂರ್‍ಗೆ ಕರೆದುಕೊಂಡು ಹೋಗಿ ಮೈಮೇಲೆ ಕೈ ಹಾಕಿದ್ದಾನೆ. ಅವರು ಬಟ್ಟೆ ಚೇಂಜ್ ಮಾಡುವಾಗ ಕ್ಯಾಮರಾ ಹಿಡಿದು ಹೇಳದೆ-ಕೇಳದೆ ರೂಂಗೆ ನುಗ್ಗಿದ್ದಾನೆ. ವಿಜ್ಞಾನ ವಸ್ತು ಪ್ರದರ್ಶನಕ್ಕೆಂದು ಧಾರವಾಡಕ್ಕೆ ಹೋದಾಗ ಒಬ್ಬಳೇ ವಿದ್ಯಾರ್ಥಿಯನ್ನ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿದ್ದ. ಇಷ್ಟೆಲ್ಲಾ ಮಾಡಿದ ಕಾಮುಕ ಟೀಚರ್ ನಮಗೆ ಬೇಡ. ಇವನು ಇಲ್ಲೇ ಇದ್ರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಸ್ಪಿ ಕಚೇರಿಗೆ ಅನಾಮಧೇಯ ಪತ್ರ ಬಂದಿದೆ.

Leave a Reply

Your email address will not be published. Required fields are marked *