Monday, 18th June 2018

Recent News

ಕೆಪಿಎಸ್‍ಸಿ ಪರೀಕ್ಷೆ ಪಾಸಾದ ಶಿಕ್ಷಕ ನೌಕರಿಗಾಗಿ 19 ಕುರಿಗಳನ್ನ ಕದ್ದ!

ಕೊಪ್ಪಳ: ಕೆಪಿಎಸ್‍ಸಿ ಪರೀಕ್ಷೆ ಪಾಸಾಗಿದದ್ದ ಶಿಕ್ಷಕನೊಬ್ಬ ನೌಕರಿ ಪಡೆಯಲು ಹಣ ಅಡಚಣೆಯಾಗಿ ಕುರಿ ಕಳ್ಳತನ ಮಾಡಿ ಜೈಲು ಪಾಲಾಗಿರೋ ಘಟನೆ ಕೊಪ್ಪಳದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕೊಪ್ಪಳ ತಾಲೂಕಿನ ಜಿನ್ನಾಪುರ ತಾಂಡಾದ ಕಿರಣ ಕುಮಾರ ಎಂಬವರಿಗೆ ಸೇರಿದ ಕುರಿಗಳನ್ನ ಶಿಕ್ಷಕ ವೆಂಕಟೇಶ್ ನಾಯಕ ಸೇರಿ ಮೂವರು ಕಳ್ಳತನ ಮಾಡಿದ್ದಾರೆ. ಕಳೆದ ಆಗಸ್ಟ್ 6ರಂದು ಸೀತಮ್ಮನಕಲ್ಲು ಬಳಿಯ ಹಟ್ಟಿಯಲ್ಲಿ 19 ಕುರಿಗಳನ್ನು ಕಳ್ಳತನ ಮಾಡಿದ್ದಾರೆ. ಇದರ ಮೌಲ್ಯ 1 ಲಕ್ಷದ 29 ಸಾವಿರ ಆಗಿದೆ.

ಆಗಸ್ಟ್ 10 ರಂದು ಕುರಿ ಕಳ್ಳತನವಾಗಿರೋ ಕುರಿತು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಕಿರಣ ಕುಮಾರ ಪ್ರಕರಣ ದಾಖಲು ಮಾಡಿದ್ದರು. ಬೊಮ್ಮಸಾಗರ ತಾಂಡಾದ ಶಿಕ್ಷಕ ವೆಂಕಟೇಶ್ ನಾಯಕನಿಗೆ ಕುರಿ ಕಳ್ಳತನ ಮಾಡಲು ಸ್ಥಳೀಯರಾದ ಗೋಪಾಲ, ಅರ್ಜುನ ಹಾಗು ಯಮನೂರ ಸಹಾಯ ಮಾಡಿದ್ದು, ವಿಚಾರಣೆ ನಡೆಸಿದ ಪೊಲೀಸರು ನಾಲ್ವರನ್ನ ಆಗಸ್ಟ್ 12ರಂದು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

Leave a Reply

Your email address will not be published. Required fields are marked *