ವಾಟ್ಸಪ್‍ನಲ್ಲಿ ಸ್ಮೈಲೀ ಕಳುಹಿಸಿದ್ರೆ ಬೀಳುತ್ತೆ ಕೇಸ್!

ಚೆನ್ನೈ: ವಾಟ್ಸಪ್‍ನಲ್ಲಿ ನೀವು ಸ್ಮೈಲೀಯಂತಹ ಇಮೋಜಿಗಳನ್ನು ಕಳುಹಿಸುತ್ತಿದ್ದೀರಾ? ಹಾಗಾದ್ರೆ ಇನ್ನು ಮುಂದೆ ಎಚ್ಚರವಾಗಿರಿ. ಯಾವುದೋ ಮೆಸೇಜ್‍ಗೆ ಸ್ಮೈಲಿಗಳನ್ನು ಕಳುಹಿಸಿದರೆ ನಿಮ್ಮ ಮೇಲೆ ಕೇಸ್ ಬೀಳಬಹುದು.

ಹೌದು. ತಮಿಳುನಾಡಿನಲ್ಲೊಂದು ವಿಶೇಷ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ತೂತುಕುಡಿಯಲ್ಲಿರುವ ಬಿಎಸ್‍ಎನ್‍ಎಲ್‍ನ ವಿಭಾಗೀಯ ಎಂಜಿನಿಯರ್ ವಿಜಯಲಕ್ಷ್ಮಿ ಎಂಬವರು ಗ್ರಾಹಕರೊಬ್ಬರ ಸಮಸ್ಯೆಗೆ ಸಂಬಂಧಿಸಿದ ವಿಡಿಯೋ ತುಣುಕನ್ನು ಸಿಬ್ಬಂದಿ ಇರುವ ವಾಟ್ಸಪ್ ಗ್ರೂಪ್‍ಗೆ ಹಾಕಿದ್ದರು. ಈ ವಿಡಿಯೋ ನೋಡಿದ ಬಳಿಕ ಇದಕ್ಕುತ್ತರವಾಗಿ ಕೆಲ ಸಿಬ್ಬಂದಿ ಸ್ಮೈಲಿಗಳನ್ನು ಕಳುಹಿಸಿದ್ದರು.

ಇದನ್ನೂ ಓದಿ:ವಾಟ್ಸಪ್‍ನಲ್ಲಿ ಹಳೇ ಶೈಲಿಯ Text Status ಮಿಸ್ ಮಾಡಿಕೊಳ್ತಿದ್ದೀರಾ? ನಿಮಗಾಗಿ ಇಲ್ಲಿದೆ ಸಿಹಿ ಸುದ್ದಿ

ಸ್ಮೈಲಿ ಕಳುಹಿಸಿದ್ದಕ್ಕೆ ಸಿಟ್ಟಾದ ವಿಜಯಲಕ್ಷ್ಮಿ ಅವರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಕಿರುಕುಳ ಕಾಯ್ದೆ, ಎಸ್‍ಟಿ, ಎಸ್‍ಸಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಬಿಎಸ್‍ಎನ್‍ಎಲ್‍ನ 49 ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಈ ಪ್ರಕರಣವನ್ನು ವಜಾಗೊಳಿಸಬೇಕೆಂದು ಬಿಎಸ್‍ಎನ್‍ಎಲ್ ಸಿಬ್ಬಂದಿ ಮದ್ರಾಸ್ ಹೈಕೋರ್ಟ್ ಮೆಟ್ಟಲೇರಿದ್ದರು. ಗುರುವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪ್ರಕಾಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಯೊಬ್ಬರಿಗೆ ಅಭಿಪ್ರಾಯವನ್ನು ಹೇಳಲು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಈ ರೀತಿಯ ಸಂದೇಶ ಕಳುಹಿಸಿದರೆ ಅದು ವ್ಯಕ್ತಿಗೆ ಕಿರುಕುಳ ನೀಡಿದಂತೆ ಆಗುವುದಿಲ್ಲ. ಅಷ್ಟೇ ಅಲ್ಲದೆ ಈ ಮೂರು ಕಾಯ್ದೆಯ ವ್ಯಾಪ್ತಿಯ ಅಡಿಯಲ್ಲಿ ಪ್ರಕರಣ ಬರುವುದಿಲ್ಲ ಎಂದು ಹೇಳಿ ಎಫ್‍ಐಆರ್‍ಗೆ ತಡೆಯಾಜ್ಞೆ ನೀಡಿದ್ದಾರೆ.

ಇದನ್ನೂ ಓದಿ: ಈ ಫೋನ್‍ಗಳಿಗೆ ಜೂನ್ 30ರ ನಂತ್ರ ವಾಟ್ಸಪ್ ಸಪೋರ್ಟ್ ಮಾಡಲ್ಲ!

You might also like More from author

Leave A Reply

Your email address will not be published.

badge
'); var MainContentW = 1000; var LeftBannerW = 160; var RightBannerW = 160; var LeftAdjust = 20; var RightAdjust = 20; var TopAdjust = 80; ShowAdDiv(); window.onresize=ShowAdDiv; }