Tuesday, 23rd January 2018

Recent News

2 months ago

ಮೈಸೂರು ಮೃಗಾಲಯದಲ್ಲಿ ಗಂಡು ಜಿರಾಫೆ ಸಾವು

ಮೈಸೂರು: ಜಿರಾಫೆಯೊಂದು ಮೈಸೂರು ಮೃಗಾಲಯದಲ್ಲಿ ಮೃತಪಟ್ಟ ಘಟನೆ ನಡೆದಿದೆ. 22 ವರ್ಷ ಪ್ರಾಯದ ಗಂಡು ಜಿರಾಫೆ ಕೃಷ್ಣರಾಜ ಇದಾಗಿದ್ದು, ಅನಾರೋಗ್ಯದಿಂದ ಮೃತಪಟ್ಟಿದೆ ಅಂತ ಹೇಳಲಾಗುತ್ತಿದೆ. ಮೈಸೂರು ಮೃಗಾಲಯದಲ್ಲೆ ಜನಿಸಿದ್ದ ಕೃಷ್ಣರಾಜ ಶುಕ್ರವಾರ ತಡರಾತ್ರಿ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆ ವರದಿಯ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿಯಬೇಕಿದೆ. ಈ ಹಿಂದೆಯೂ ಸಹ ಮೃಗಾಲಯದಲ್ಲಿ ಕೆಲ ಪ್ರಾಣಿಗಳು ಅನಾರೋಗ್ಯದಿಂದ ಸಾವನ್ನಪ್ಪಿದ್ದರೆ, ಇನ್ನೂ ಕೆಲ ಪ್ರಾಣಿಗಳು ವಯೋ ಸಹಜ ಕಾಯಿಲೆಗಳಿಂದ ಮೃತಪಟ್ಟಿವೆ. ಇದನ್ನೂ ಓದಿ: ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ: ಯಾವೆಲ್ಲಾ […]

3 months ago

ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಝೂ ನಿರ್ಮಿಸಿದ್ರು

ಬಳ್ಳಾರಿ: ಅದು ಕಾಯ್ದಿಟ್ಟ ಮೀಸಲು ಅರಣ್ಯ ಪ್ರದೇಶ. ಹೀಗಾಗಿ ಅಲ್ಲಿ ಏನೇ ಮಾಡಿದರೂ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯವಾಗಿ ಬೇಕೇ ಬೇಕು. ಆದರೆ ವನ್ಯ ಮೃಗಾಲಯದ ಅಧಿಕಾರಿಗಳು ಅರಣ್ಯ ಇಲಾಖೆಯ ಅನುಮತಿಯೇ ಪಡೆಯದೇ ಝೂ ವೊಂದು ನಿರ್ಮಿಸಿದ್ದಾರೆ. ಅರಣ್ಯ ಇಲಾಖೆಯ ಅನುಮತಿ ಪಡೆಯದೇ ನೂರಾರು ಎಕರೆ ಪ್ರದೇಶದಲ್ಲಿ ನಿರ್ಮಿಸಿದ ಝೂ ವನ್ನು ಸ್ವಂತ ಅರಣ್ಯ ಇಲಾಖೆ...

ಚಾಮುಂಡಿ ಬೆಟ್ಟದಿಂದ ಬಂದು ಮೃಗಾಲಯದ ಮರವೇರಿ ಕುಳಿತ ಚಿರತೆ!

3 months ago

ಮೈಸೂರು: ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಚಾಮುಂಡಿ ಬೆಟ್ಟದಿಂದ ಬಂದ ಚಿರತೆಯೊಂದು ಆವರಣದಲ್ಲಿದ್ದ ಮರವನ್ನು ಏರಿ ಕೆಲಕಾಲ ಆತಂಕವನ್ನು ಸೃಷ್ಟಿ ಮಾಡಿತ್ತು. ಚಿರತೆ ಕಾಣುತ್ತಿದ್ದಂತೆ ಸಾರ್ವಜನಿಕರಿಗೆ ಮೃಗಾಲಯದ ಪ್ರವೇಶವನ್ನು ನಿಷೇಧಿಸಲಾಯಿತು. ಚಿರತೆ ಕಾಣಿಸಿಕೊಂಡ ಸಮಯದಲ್ಲಿ ಮೃಗಾಲಯದಲ್ಲಿ ಪ್ರವಾಸಿಗರು ಇದ್ದಿದರಿಂದ ಭಯದ ವಾತಾವರಣ...

ಚಿರತೆ ದತ್ತು ಪಡೆದು ಪ್ರಾಣಿ ಪ್ರೀತಿ ಮೆರೆದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

5 months ago

ಮೈಸೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಆಲ್‍ರೌಂಡರ್ ಆಟಗಾರ್ತಿ ಕೆ.ವೇದಾ ಕೃಷ್ಣಮೂರ್ತಿ ಅವರು ಮೈಸೂರು ಜಯಚಾಮರಾಜೇಂದ್ರ ಮೃಗಾಲಯದ ಚಿರತೆಯನ್ನು ದತ್ತು ಪಡೆದಿದ್ದಾರೆ. ಇದನ್ನೂ ಓದಿ: ಬಹಿರಂಗವಾಗಿ ಪತ್ನಿ ಮೇಲೆ ಪ್ರೀತಿ ತೋರಿಸಿದ ಸಿಎಂ! ಮೈಸೂರು ಮೃಗಾಲಯದ ಪ್ರಾಣಿಯನ್ನ ದತ್ತು ಯೋಜನೆ ಅಡಿಯಲ್ಲಿ ‘ಭಾವನಾ’...

ಬಹಿರಂಗವಾಗಿ ಪತ್ನಿ ಮೇಲೆ ಪ್ರೀತಿ ತೋರಿಸಿದ ಸಿಎಂ!

6 months ago

ಮೈಸೂರು: ಸಿಎಂ ಸಿದ್ದರಾಮಯ್ಯ ಯಾವತ್ತಿಗೂ ಬಹಿರಂಗವಾಗಿ ತಮ್ಮ ಪತ್ನಿ ಮೇಲೆ ಪ್ರೀತಿ ತೋರ್ಪಡಿಸಿಲ್ಲ. ಅಷ್ಟೆ ಅಲ್ಲದೇ ಪತ್ನಿ ವಿಚಾರವನ್ನು ಅಷ್ಟಾಗಿ ಮಾತನಾಡಿಲ್ಲ. ಆದರೆ ಗುರುವಾರ ಕಾಕತಾಳೀಯ ಎಂಬಂತೆ ಸಿಎಂ ಮೈಸೂರು ಮೃಗಾಲಯದಲ್ಲಿನ ಹೆಣ್ಣು ಆನೆ ಮರಿಗೆ ‘ಪಾರ್ವತಿ’ ಎಂದು ಹೆಸರಿಟ್ಟಿದ್ದಾರೆ. ಪಾರ್ವತಿ...

ಪ್ರಾಣಿಗಳಲ್ಲಿ ಒಗ್ಗಟ್ಟು ಎಷ್ಟಿದೆ ಅನ್ನೋದಕ್ಕೆ ಈ ವಿಡಿಯೋ ನೋಡಿ

7 months ago

ಸಿಯೋಲ್: ನೀರು ಕುಡಿಯುವ ವೇಳೆ ಮರಿಯಾನೆಯೊಂದು ಕೊಳಕ್ಕೆ ಬಿದ್ದಿದ್ದು, ಈ ಮರಿಯಾನೆಯನ್ನು ಎರಡು ಆನೆಗಳು ರಕ್ಷಿಸಿದ ವಿಡಿಯೋವೊಂದು ಈಗ ವೈರಲ್ ಆಗಿದೆ. ದಕ್ಷಿಣ ಕೊರಿಯಾದ ಸಿಯೋಲ್‍ನ ಗ್ರಾಂಡ್ ಪಾರ್ಕ್ ಮೃಗಾಲಯದ ಪೂಲ್‍ನಲ್ಲಿ ನೀರು ಕುಡಿಯುತ್ತಿದ್ದ ಮರಿಯಾನೆ ಆಯತಪ್ಪಿ ನೀರಿನೊಳಗೆ ಬಿದ್ದಿದೆ. ಇದನ್ನು...

ಮೊಸಳೆ ಬಾಯಿಗೆ ತಲೆ ಕೊಟ್ಟ ವ್ಯಕ್ತಿ- ಮುಂದೇನಾಯ್ತು? ವಿಡಿಯೋ ನೋಡಿ

7 months ago

ಬ್ಯಾಂಕಾಕ್: ಮೃಗಾಲಯದ ನೌಕರರೊಬ್ಬರು ಮೊಸಳೆ ಬಾಯಲ್ಲಿ ತಲೆ ಇಟ್ಟು ಸಾಹಸ ಪ್ರದರ್ಶನ ಮಾಡಲು ಹೋಗಿ ಅವಾಂತರ ಸೃಷ್ಟಿಸಿಕೊಂಡ ಘಟನೆ ಥೈಲ್ಯಾಂಡ್‍ನಲ್ಲಿ ನಡೆದಿದೆ. ಜೂನ್ 16ರಂದು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯು ಮೊಸಳೆಯ ಬಾಯಲ್ಲಿ ಎರಡು ಕಡ್ಡಿಗಳನ್ನ ಇಟ್ಟು ಟ್ರಿಕ್ಸ್...

ಮೃಗಾಲಯದ ಹುಲಿಗಳಿಗೆ ಜೀವಂತ ಕತ್ತೆಯನ್ನೇ ಮೇಲಿನಿಂದ ತಳ್ಳಿದ್ರು: ಶಾಕಿಂಗ್ ವಿಡಿಯೋ ನೋಡಿ

8 months ago

ಬೀಜಿಂಗ್: ಚೀನಾದ ಮೃಗಾಲಯದ ಸಿಬ್ಬಂದಿ ಜೀವಂತ ಕತ್ತೆಯನ್ನು ಹುಲಿಗಳಿಗೆ ಆಹಾರವಾಗಿ ನೀಡಿರುವ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಿಯಾಂಗು ಪ್ರಾಂತ್ಯದಲ್ಲಿರುವ ಮೃಗಾಲಯದ ಸಿಬ್ಬಂದಿ ಕತ್ತೆಯನ್ನು ಆಹಾರವಾಗಿ ನೀಡಿದ್ದಕ್ಕೆ ಈಗ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ವಿಡಿಯೋದಲ್ಲಿ ಏನಿದೆ? ಮೃಗಾಲಯದ...