Thursday, 22nd March 2018

Recent News

5 days ago

ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕ ಪ್ರಾಣಬಿಟ್ಟ ಮಹಿಳೆ- ವೈದ್ಯರ ವಿರುದ್ಧ ಆಕ್ರೋಶ

ಚಿಕ್ಕಬಳ್ಳಾಪುರ: ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಗೋಪಸಂದ್ರ ಗ್ರಾಮದ 30 ವರ್ಷದ ವೀಣಾ ಮೃತ ಮಹಿಳೆ. ಮಹಿಳೆಯ ಸಾವಿನ ವಿಷಯ ತಿಳಿದ ಸಂಬಂಧಿಕರು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ನರಸಿಂಹಮೂರ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಆಸ್ಪತ್ರೆಯಲ್ಲಿ ದಾಂಧಲೆಗೆ ಮುಂದಾಗಿದ್ದರು. ಆದ್ರೆ ಮಹಿಳೆಗೆ ಲೋ ಬಿಪಿಯಾದ ಕಾರಣ ಹೃದಯಾಘಾತವಾಗಿದೆ ಅಂತ ವೈದ್ಯರು ಹೇಳಿದ್ದಾರೆ. ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ವೈದ್ಯ ನರಸಿಂಹಮೂರ್ತಿ ವಿರುದ್ಧ ಪ್ರಕರಣ […]

2 weeks ago

ವುಮೆನ್ಸ್ ಡೇ ಗೆ ಮಹಿಳೆಯರಿಗೆ ಗುಡ್‍ನ್ಯೂಸ್- ಇಂದಿನಿಂದ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತೆ ಸ್ಯಾನಿಟರಿ ಪ್ಯಾಡ್

ನವದೆಹಲಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಮಹಿಳೆಯರಿಗೆ ಗುಡ್‍ನ್ಯೂಸ್ ಸಿಕ್ಕಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಮಹಿಳೆಯರಿಗೆ ಗಿಫ್ಟ್ ನೀಡಿದೆ. ಅತ್ಯಂತ ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್‍ಗಳನ್ನ ಇಂದು ಸರ್ಕಾರ ಬಿಡುಗಡೆ ಮಾಡಿದೆ. ಸುವಿಧ ಹೆಸರಿನ, ಮಣ್ಣಿನಲ್ಲಿ ಕರಗುವ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್‍ಗಳು ಇದಾಗಿದೆ. ಸಾಮಾನ್ಯವಾಗಿ ಒಂದು ನ್ಯಾಪ್‍ಕಿನ್‍ಗೆ 8 ರೂ. ಬೆಲೆ ಇದ್ದು,...

ಮಾಟಮಂತ್ರಕ್ಕೆ ಹೆದರಿ, 33 ತೊಲ ಚಿನ್ನ ಕದ್ದ ಕಳ್ಳಿಯರನ್ನ ಬಂಧಿಸಲು ಹಿಂದೇಟು ಹಾಕ್ತಿರೋ ಪೊಲೀಸರು!

1 month ago

ಹೈದರಾಬಾದ್: ಇಬ್ಬರು ಕಳ್ಳಿಯರನ್ನು ಬಂಧಿಸುವ ಬಗ್ಗೆ ಪೊಲೀಸರು ಹಿಂದೇಟು ಹಾಕುತ್ತಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ. ಮಲ್ಕಾಜಿಗಿರಿಯಲ್ಲಿ ನಿವೃತ್ತ ರೈಲ್ವೆ ಉದ್ಯೋಗಿ ಜಿ. ರಾಘವಲು ಅವರ ಮನೆಯಲ್ಲಿ ಬಾಡಿಗೆಗಿದ್ದ ಹರಿಯಾಣ ಮೂಲದ ಇಬ್ಬರು ಮಹಿಳೆಯರು ಕಳ್ಳತನ ಮಾಡಿದ್ದರು. ಕುಟುಂಬದ ಸದಸ್ಯರಿಗೆ ಡ್ರಗ್ಸ್ ನೀಡಿ...

ಶಾಸಕ ಇಕ್ಬಾಲ್ ಅನ್ಸಾರಿಗೆ ಮಹಿಳೆಯರಿಂದ ತಂಬಿಗೆ, ಚಪ್ಪಲಿ ಎಸೆತ

2 months ago

ಕೊಪ್ಪಳ: ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿಗೆ ಮಹಿಳೆಯರು ತಂಬಿಗೆ ಮತ್ತು ಚಪ್ಪಲಿ ಎಸೆದ ಘಟನೆ ಭಾನುವಾರ ರಾತ್ರಿ ನಡೆದಿದೆ. ಗಂಗಾವತಿ ನಗರದ 28 ನೇ ವಾರ್ಡಿನಲ್ಲಿ ಈ ಘಟನೆ ನಡೆದಿದೆ. ವಾರ್ಡ್ ವಿಸಿಟ್ ಗೆ ಬಂದ ವೇಳೆ ಶಾಸಕ ಅನ್ಸಾರಿ ಗೆ...

ಪಿಂಕ್ ಹೊಯ್ಸಳ ಆಯ್ತು, ಈಗ ಪಿಂಕ್ ಟಾಯ್ಲೆಟ್ಸ್- ಮಹಿಳೆಯರ ರಕ್ಷಣೆಗಾಗಿ ಬೆಂಗ್ಳೂರಲ್ಲಿ ಹೊಸ ಶೌಚಾಲಯ

2 months ago

ಬೆಂಗಳೂರು: ಪಿಂಕ್ ಹೊಯ್ಸಳ ಕೇಳಿದ್ರಿ, ಈಗ ಪಿಂಕ್ ಟಾಯ್ಲೆಟ್ ಬೆಂಗಳೂರಿಗೆ ಬರುತ್ತಿವೆ. ಯುವತಿಯರು, ಹೆಣ್ಣು ಮಕ್ಕಳು, ಮಹಿಳೆಯರ ರಕ್ಷಣೆಗೆ ಅಂತ ಮೂಡಿಬಂದಿರುವ ಹೊಸ ಪರಿಕಲ್ಪನೆ ಇದು. ದೆಹಲಿಯಲ್ಲಿರೋ ಮಾದರಿ ಪಿಂಕ್ ಟಾಯ್ಲೆಟ್‍ಗಳನ್ನು ಬೆಂಗಳೂರಿಗೆ ತರೋಕೆ ಯೋಜನೆ ಸಿದ್ದವಾಗಿದೆ. ರಾಷ್ಟ್ರೀಯ ಮಕ್ಕಳು ಹಕ್ಕುಗಳ...

ನೀನು ನನಗೆ ಬೇಡ ಎಂದಿದ್ದಕ್ಕೆ 20 ಕಡೆ ಇರಿದು ಪ್ರಿಯತಮೆಯನ್ನು ಬರ್ಬರವಾಗಿ ಕೊಂದೇ ಬಿಟ್ಟ!

2 months ago

ಬೆಂಗಳೂರು: ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೊಹಮದ್ ಮುಬೀನ್ (30) ಬಂಧಿತ ಆರೋಪಿ. ಡಿಸೆಂಬರ್ 26ರಂದು ಸುಂಕದಕಟ್ಟೆಯಲ್ಲಿರುವ ತಸ್ಲಿಮಾ ಬಾನು ಮನೆಯಲ್ಲಿಯೇ ಆಕೆಯ ಕೊಲೆ ನಡೆದಿತ್ತು. ಮುಬೀನ್ ಹಾಗು ಮಹಿಳೆ...

ಗಂಡಸರು ಇಲ್ಲದೆ ಮಕ್ಕಳು ಹೇಗಾಯ್ತು ಅದಾದ್ರೂ ಗೊತ್ತಾ – ಮಹಿಳೆಯರೊಂದಿಗೆ ತಹಶೀಲ್ದಾರ್ ಅಸಭ್ಯ ವರ್ತನೆ

2 months ago

ತುಮಕೂರು: ಜಿಲ್ಲೆಯ ತಿಪಟೂರು ತಹಶೀಲ್ದಾರ್ ಮಂಜುನಾಥ್ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತಾಲೂಕಿನ ಗುರುಗದಹಳ್ಳಿ ಗ್ರಾಮದಲ್ಲಿ ಯೋಗೇಶ್ ಎಂಬವರ ಮನೆಗೆ ದಾರಿ ಇಲ್ಲದ ಕಾರಣ ರಸ್ತೆ ಬಿಡಿಸಿಕೊಡಲು ತಹಶಿಲ್ದಾರ್ ಹೋಗಿದ್ದಾರೆ. ದಾರಿ ನಿರ್ಮಿಸಬೇಕಿದ್ದರೆ ಶಂಕುತಲಾ ಎಂಬುವವರ ನಿವೇಶನದಿಂದ ಜಾಗ...

150 ಕಿ.ಮೀ ಕ್ರಮಿಸಿ, ಕಾಮುಕನಿಂದ ಕ್ಷಮೆ ಹೇಳಿಸಿ 5 ಲಕ್ಷ ಪಡೆದ ಸಂತ್ರಸ್ತೆ!

3 months ago

ಮುಂಬೈ: ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣ ಮತ್ತು ವಾಟ್ಸಪ್ ನಲ್ಲಿ ಹಂಚಿ ಕಾಟ ಕೊಡುತ್ತಿದ್ದ ವ್ಯಕ್ತಿಯನ್ನು ಸಂತ್ರಸ್ತ ಮಹಿಳೆಯೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿಸಿ ಪಾಠ ಕಲಿಸಿಕೊಟ್ಟಿದ್ದಾರೆ. ಮುಲೂಂದ್ ಮೂಲದ ಮಹೇಂದ್ರ ಸಾಲ್ವಿ ಎಂಬಾತ ಪುಣೆಯ ಚಕ್ಕನ್ ಗ್ರಾಮದ ಮಹಿಳೆಯ ಜೊತೆಗೆ...