Friday, 20th April 2018

Recent News

1 week ago

ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿ ಹೆಣ್ಣಾನೆ ಸಾವು

ಚಾಮರಾಜನಗರ: ಕೆರೆಗೆ ನೀರು ಕುಡಿಯಲು ಹೋದ ವೇಳೆ ಹೆಣ್ಣಾನೆಯೊಂದು ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ. ಬಂಡಿಪುರದ ಕುಂದಗೆರೆ ವಲಯದ ಸಿದ್ರಾಮಯ್ಯನ ಕಟ್ಟೆಯಲ್ಲಿ ಹೆಣ್ಣಾನೆ ನೀರು ಕುಡಿಯಲು ಹೋದ ವೇಳೆ ಈ ಘಟನೆ ಸಂಭವಿಸಿದೆ. ಬೆಳಗಿನ ಜಾವ 4 ಗಂಟೆಯ ವೇಳೆಯಲ್ಲಿ ಹೆಣ್ಣಾನೆಯೊಂದು ನೀರು ಕುಡಿಯಲು ಕೆರೆಯ ಬಳಿ ಹೋಗಿದೆ. ಬೇಸಿಗೆ ಕಾಲವಾದ್ದರಿಂದ ಕೆರೆಯಲ್ಲಿ ನೀರಿಗಿಂತ ಕೆಸರು ಹೆಚ್ಚಿರುವ ಕಾರಣ ಆನೆ ನೀರಿಗಾಗಿ ಕೆರೆಯ ಮಧ್ಯ ಭಾಗಕ್ಕೆ ಹೋಗಿದೆ. […]

2 weeks ago

ನಿತ್ರಾಣವಾಗಿ ಬಿದ್ದಿದ್ದ ಕಡವೆಗೆ ಚಿಕಿತ್ಸೆ ನೀಡಿದ ಅರಣ್ಯಾಧಿಕಾರಿಗಳು

ಚಿಕ್ಕಮಗಳೂರು: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ನೀರು ಸಿಗದೆ ನಿತ್ರಾಣಗೊಂಡು ಬಿದ್ದಿದ್ದ ಕಡವೆಗೆ ಅರಣ್ಯಾಧಿಕಾರಿಗಳು ಚಿಕಿತ್ಸೆ ನೀಡಿ, ತಮ್ಮ ವಾಹನದಲ್ಲೇ ಕಾಡಿಗೆ ಬಿಟ್ಟಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ನಂದಿಬಂಟ್ಲು ಗ್ರಾಮದಲ್ಲಿ ನಡೆದಿದೆ. ಭದ್ರಾ ಅಭಯಾರಣ್ಯದಿಂದ ಆಹಾರ ಹುಡುಕುತ್ತಾ ಗ್ರಾಮದ ಸಚಿನ್ ಎಂಬವರ ತೋಟಕ್ಕೆ ಬಂದಿದ್ದ ಕಡವೆ ಅಲ್ಲೇ ಸುಸ್ತಾಗಿ ಬಿದ್ದಿತ್ತು. ತೋಟಕ್ಕೆ ಬಂದ...

ನೀರಿಗಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ- ದೊಣ್ಣೆ, ಚಾಕುವಿನಿಂದ ಹಲ್ಲೆ

2 months ago

ಚಿಕ್ಕಬಳ್ಳಾಪುರ: ಮನೆಯ ಮುಂಭಾಗದ ಕುಡಿಯುವ ನೀರಿನ ನಲ್ಲಿಯ ವಿಚಾರಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, ಎರಡು ಕುಟುಂಬಸ್ಥರು ಪರಸ್ಪರ ದೊಣ್ಣೆ ಮತ್ತು ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವೆಂಕಟೇನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ವೆಂಕಟಪತಿ ಮತ್ತು...

ಶಿವನಸಮುದ್ರದಲ್ಲಿ ಪ್ರವಾಸಕ್ಕೆ ಬಂದಿದ್ದ ಡಿಪ್ಲೊಮಾ ವಿದ್ಯಾರ್ಥಿ ದಾರುಣ ಸಾವು

2 months ago

ಚಾಮರಾಜನಗರ: ಕಾವೇರಿ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಬಳಿ ಜರುಗಿದೆ. ಮೂಲತಃ ಮೈಸೂರಿನ ಕೆ.ಜಿ.ಕೊಪ್ಪಲು ನಿವಾಸಿ ಹರ್ಷ ಮೃತ ದುರ್ದೈವಿ. ಹರ್ಷ ವಿದ್ಯಾ ವಿಕಾಸ್ ಕಾಲೇಜಿನಲ್ಲಿ ಡಿಪ್ಲೊಮಾ ಓದುತ್ತಿದ್ದನು. ಬುಧವಾರ ಆರು...

ವಿಮಾನದಲ್ಲಿದ್ದ ಲಗೇಜ್ ನಲ್ಲಿ ಕಾಣಿಸಿಕೊಂಡ ಬೆಂಕಿ ಆರಿಸಲು ನೀರು, ಜ್ಯೂಸ್ ಎರಚಿದ್ರು- ವಿಡಿಯೋ ವೈರಲ್

2 months ago

ಬೀಜಿಂಗ್: ವಿಮಾನದ ಮೇಲಿನ ಕಂಪಾರ್ಟ್‍ಮೆಂಟ್‍ನಲ್ಲಿ ಇಡಲಾಗಿದ್ದ ಲಗೇಜ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವಿಮಾನ ಮೂರು ಗಂಟೆ ತಡವಾಗಿ ಹೊರಟ ಘಟನೆ ಚೀನಾದಲ್ಲಿ ನಡೆದಿದೆ. ಭಾನುವಾರದಂದು ಚೀನಾದ ಗುವಾಂಗ್‍ಝೌ ನಿಂದ ಶಾಂಘೈ ಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಟೇಕ್ ಆಫ್...

ನೀರಿಗಾಗಿ ಕಾಡುಪ್ರಾಣಿಗಳ ನಡುವೆ ಫೈಟ್ – ಹುಲಿಯನ್ನು ಅಟ್ಟಾಡಿಸಿ ಓಡಿಸಿತು ಆನೆ: ವಿಡಿಯೋ

2 months ago

ಚಾಮರಾಜನಗರ: ಬರಗಾಲ ಸಮೀಪಿಸುತ್ತಿದ್ದ ಹಾಗೆ ನಾಡಿನಲ್ಲಿ ಜನರ ನಡುವೆ ಮಾತ್ರವಲ್ಲದೇ ಕಾಡಿನಲ್ಲಿ ನೀರಿಗಾಗಿ ಪ್ರಾಣಿಗಳ ಮಧ್ಯ ಸಂಘರ್ಷ ಏರ್ಪಟ್ಟಿದೆ. ತನ್ನ ಅಳಿವಿಗೆ ಮನುಷ್ಯ ಮೃಗದಂತೆ ವರ್ತನೆ ಮಾಡುತ್ತಾನೆ, ಅದೇ ರೀತಿ ಸಾಧು ಪ್ರಾಣಿಯಂತಿರುವ ಕೆಲ ಪ್ರಾಣಿಗಳು ತಮ್ಮ ಉಳಿವಿಗಾಗಿ ಕ್ರೂರ ಮೃಗಗಳೊಂದಿಗೆ...

ನೀರು ಖಾಲಿಯಾಗಿದ್ದಕ್ಕೆ ವಿಸ್ಕಿ ಜೊತೆ ಮೂತ್ರ ಮಿಕ್ಸ್ ಮಾಡ್ಕೋ ಎಂದು ರೇಗಿಸಿದ ಸ್ನೇಹಿತನನ್ನ ಕೊಂದೇಬಿಟ್ಟ

2 months ago

ಮುಂಬೈ: ನೀರು ಖಾಲಿಯಾಗಿದ್ದಕ್ಕೆ ವಿಸ್ಕಿ ಜೊತೆ ಮೂತ್ರ ಮಿಕ್ಸ್ ಮಾಡಿಕೋ ಎಂದು ಹೇಳಿದ 25 ವರ್ಷದ ವ್ಯಕ್ತಿಯನ್ನ ಆತನ ಸ್ನೇಹಿತ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದ ಭಾಯಂದರ್ ನಲ್ಲಿ ನಡೆದಿದೆ. ಶನಿವಾರ ರಾತ್ರಿ ಸಂದೀಪ್ ಗವಾಸ್(27) ಹಾಗೂ ಅಚ್ಯುತ್ ಚೌಬೆ(25) ಇತರೆ...

ನೀರಿನ ಹೊಂಡದಲ್ಲಿ ಸಿಲುಕಿದ್ದ ಶ್ವಾನವನ್ನು ಕಾಪಾಡಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ

2 months ago

ಮೈಸೂರು: ನಗರದ ಅರಮನೆ ಮೈದಾನದ ಆವರಣದಲ್ಲಿರುವ ನೀರಿನ ಹೊಂಡಕ್ಕೆ ಬಿದ್ದು, ಪರದಾಡುತ್ತಿದ್ದ ಶ್ವಾನವೊಂದನ್ನು ರಕ್ಷಿಸಲಾಗಿದೆ. ಪೊಲೀಸ್ ಇಲಾಖೆಯ ಶ್ವಾನದಳದ ಎಎಸ್‍ಐ ಶಿವಾಜಿ ರಾವ್ ಅವರು ಹೊಂಡದಲ್ಲಿ ಬಿದ್ದು ಸಿಲುಕಿದ್ದ ಶ್ವಾನವನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ನೀರು ಕುಡಿಯಲೆಂದು ಹೊಂಡಕ್ಕೆ ಇಳಿದಿದ್ದ...