Wednesday, 28th June 2017

Recent News

1 day ago

ವಿಜಯಪುರ: ಮಲಗಿದ್ದಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕಗ್ಗೊಲೆ

ವಿಜಯಪುರ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೋರ್ವರನ್ನು ಕೊಚ್ಚಿ ಕೊಲೆಗೈದ ಭೀಕರ ಕೃತ್ಯವೊಂದು ಬಿಜಾಪುರ ಜಿಲ್ಲೆಯಲ್ಲಿ ಇಂದು ನಡೆದಿದೆ. ಜಿಲ್ಲೆಯ ಇಂಡಿ ತಾಲೂಕಿನ ಬರಡೋಲ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಲ್ಲಪ್ಪ ಅಗಸರ(35) ಕೊಲೆಯಾದ ದುರ್ದೈವಿ. ಮಲ್ಲಪ್ಪ ರಾತ್ರಿ ತೋಟದ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಮಾರಕಾಸ್ತಗಳಿಂದ ಕೊಲೆಗೈದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಕೊಲೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಘಟನೆ ಸಂಬಂಧ ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

4 days ago

ಆಸ್ತಿ ವಿವಾದ- ಗುದ್ದಲಿಯಿಂದ ಹೊಡೆದು ತಂದೆ, ಇಬ್ಬರು ಮಕ್ಕಳ ಬರ್ಬರ ಹತ್ಯೆ

ವಿಜಯಪುರ: ಆಸ್ತಿ ವಿವಾದ ಹಿನ್ನೆಲೆಯಲ್ಲಿ ದಾಯಾದಿಗಳಿಂದ ತಂದೆ ಹಾಗೂ ಆತನ ಇಬ್ಬರು ಮಕ್ಕಳ ಬರ್ಬರ ಕೊಲೆ ನಡೆದಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹೊಸತಾವರಖೇಡ ಗ್ರಾಮದಲ್ಲಿ ಈ ಕೊಲೆ ನಡೆದಿದೆ. ಸಲಕಿ, ಗುದ್ದಲಿ, ಹಾರಿಯಿಂದ ಹೊಡೆದು 55 ವರ್ಷದ ಸಂಗಪ್ಪ ಹರಿಂದ್ರಾಳ, 25 ವರ್ಷದ ಶರಣಬಸಪ್ಪ ಸಂಗಪ್ಪ ಹರಿಂದ್ರಾಳ ಹಾಗೂ 23...

ಆಹಾರ ಅರಸಿ ಗ್ರಾಮಕ್ಕೆ ಬಂತು 15 ಅಡಿಯ ಮೊಸಳೆ

4 weeks ago

ವಿಜಯಪುರ: ಮೊಸಳೆಯೊಂದು ಆಹಾರ ಅರಸುತ್ತಾ ವಿಜಯಪುರ ತಾಲೂಕಿನ ಹೊಳೆಹಂಗರಗಿ ಗ್ರಾಮಕ್ಕೆ ಬಂದು ಗ್ರಾಮಸ್ಥರನ್ನು ಭಯಗೊಳಿಸಿದ ಘಟನೆ ನಡೆದಿದೆ. ಒಂದೇ ವಾರದಲ್ಲಿ ಗ್ರಾಮಕ್ಕೆ ಬಂದ ಎರಡನೇ ಮೊಸಳೆ ಇದಾಗಿದೆ. ಭೀಕರ ಬರಗಾಲ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯ ಖಾಲಿಯಾದ ಪರಿಣಾಮ ಮೊಸಳೆಗಳು ಆಹಾರಕ್ಕಾಗಿ ನದಿಪಾತ್ರದ...

ಕಸಾಯಿಖಾನೆಗಳಿಗೆ ಗೋವುಗಳ ಮಾರಾಟ ನಿಷೇಧಿಸಿರುವುದಕ್ಕೆ ಸಂತಸ, ರೈತರಿಗೆ ಹೊರೆ: ಹೆಚ್‍ಡಿಕೆ

1 month ago

ವಿಜಯಪುರ: ಕಸಾಯಿಖಾನೆಗಳಿಗೆ ಗೋವುಗಳ ಮಾರಾಟವನ್ನು ಕೆಂದ್ರ ಸರ್ಕಾರ ನಿಷೇಧ ಮಾಡಿದ್ದು, ಇದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿಜಯಪುರದಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ. ಆದ್ರೆ ಇದರಿಂದ ರೈತರಿಗೆ ಹೊರೆಯಾಗಲಿದೆ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ನಿಜವಾಗ್ಲೂ ಗೋ...

ಕೇಂದ್ರದ ಫಸಲ್ ಭೀಮಾ ರೈತರ ಹಗಲು ದರೋಡೆಯ ಯೋಜನೆ: ಎಚ್‍ಡಿಕೆ

1 month ago

– ಯೋಜನೆಯಿಂದ ರೈತರಿಗೆ ಅನುಕೂಲ ವಿಜಯಪುರ: ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆಯಿಂದ ರೈತರಿಗೆ ಅನುಕೂಲವಾಗಿದ್ದು, ಇದು ಹಗಲು ದರೋಡೆ ಮಾಡುವ ಯೋಜನೆಯಾಗಿದೆ ಅಂತಾ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ವೇಳೆ ಪ್ರಧಾನಮಂತ್ರಿ ಮೋದಿ...

ವಿಜಯಪುರ: ನೀರು ಕುಡಿಯಲು ಹೋದ ಯುವಕ ಮೊಸಳೆಗೆ ಬಲಿ

1 month ago

ವಿಜಯಪುರ: ನೀರು ಕುಡಿಯಲು ಹೋದ ಯುವಕನನ್ನು ಮೊಸಳೆ ಎಳೆದೊಯ್ದು ಯುವಕ ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಂಗಾರ ಗುಂಡ ಗ್ರಾಮದ ಬಳಿ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಸವರಾಜ ಮಾದರ್ ಎಂಬಾತ ಕುರಿ ಮೇಯಿಸಲು ಹೊಗಿದ್ದ...

ಹಿರಿಯ ನಟ ದೊಡ್ಡಣ್ಣ ಅಸ್ವಸ್ಥ: ಆಸ್ಪತ್ರೆಗೆ ದಾಖಲು

1 month ago

ವಿಜಯಪುರ: ಶೂಟಿಂಗ್ ವೇಳೆ ಹಿರಿಯ ಪೋಷಕ ನಟ ದೊಡ್ಡಣ್ಣ ಅಸ್ವಸ್ಥಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೆಲುಗು ಚಿತ್ರದ ಶೂಟಿಂಗ್ ನಡೆಸಲು ಬುಧವಾರ ದೊಡ್ಡಣ್ಣ ಬೆಂಗಳೂರಿನಿಂದ ನಗರಕ್ಕೆ ಆಗಮಿಸಿದ್ದರು. ನಗರದಿಂದ 40 ಕಿಲೋ ದೂರದ ಸೋಲ್ಹಾಪುರ ರಸ್ತೆಯಲ್ಲಿ ಚಿತ್ರೀಕರಣ ನಡೆಸುತ್ತಿದ್ದಾಗ ಅಸ್ವಸ್ಥಗೊಂಡಿದ್ದು...

ವಿಜಯಪುರ: ನೀರಿಲ್ಲದ ಕಾರಣ ಮಹಿಳಾ ವಿವಿಗೆ 3 ದಿನ ರಜೆ ಘೋಷಣೆ

2 months ago

ವಿಜಯಪುರ: ಬರದನಾಡು ಎಂದೇ ಕರೆಯಲ್ಪಡುವ ಐತಿಹಾಸಿಕ ನಗರಿಯ ಕುಡಿಯುವ ನೀರಿನ ಅಭಾವದ ಬಿಸಿ ಈಗ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೂ ತಟ್ಟಿದೆ. ವಿವಿಯ ಆವರಣದ ಬೋರ್‍ವೆಲ್ ಸೇರಿದಂತೆ ನೀರಿನ ಎಲ್ಲಾ ಮೂಲಗಳು ಬಂದ್ ಆಗಿದ್ದು, ವಿದ್ಯಾರ್ಥಿಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಆದ್ದರಿಂದ ವಿವಿಗೆ...