Thursday, 20th July 2017

8 hours ago

ಹಾಡಹಗಲೇ 11 ಮಂದಿ ದಾಳಿ ನಡೆಸಿ, 27 ಬಾರಿ ಕೊಚ್ಚಿ ಕೊಂದೇ ಬಿಟ್ರು! ಶಾಕಿಂಗ್ ವಿಡಿಯೋ

ಮುಂಬೈ: 11 ಜನರ ಗುಂಪೊಂದು ಹಾಡಹಗಲೇ ವ್ಯಕ್ತಿಯನ್ನು ರಸ್ತೆ ಬದಿಯಲ್ಲೇ 27 ಬಾರಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ಮಂಗಳವಾರ ನಡೆದಿದೆ. ಮುಂಬೈಯಿಂದ 280 ಕಿಮೀ ದೂರದಲ್ಲಿರುವ ಧುಲೆ ಎಂಬಲ್ಲಿ ಈ ಘಟನೆ ನಡೆದಿದ್ದು, ಹತ್ಯೆಯ ಭೀಕರ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರೌಡಿ ಶೀಟರ್ ರಫೀಕುದ್ದೀನ್ ಕೊಲೆಯಾದ ವ್ಯಕ್ತಿ. ಮಂಗಳವಾರ ಬೆಳಗ್ಗೆ ರಸ್ತೆಯ ಬದಿಯಲ್ಲಿನ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ ವೇಳೆ 11 ಮಂದಿಯ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ನಡೆಸಿದೆ. ಹತ್ಯೆ ಎಸಗಿದ […]

14 hours ago

ನೈತಿಕ ಪೊಲೀಸ್‍ಗಿರಿ ಹೆಸ್ರಲ್ಲಿ ಯುವಕ ಯುವತಿಯನ್ನ ಮನಬಂದಂತೆ ಥಳಿಸಿ ವಿಡಿಯೋ ಹಂಚಿಕೊಂಡ್ರು

ಲಕ್ನೋ: ನೈತಿಕ ಪೋಲಿಸ್‍ಗಿರಿ ಹೆಸರಲ್ಲಿ ಮೂವರು ಯುವಕರ ತಂಡ ಯುವಕ ಯುವತಿಯನ್ನು ಮನಬಂದಂತೆ ಥಳಿಸಿ ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ಮಹಾರಾಜ್‍ಗಂಜ್‍ನಲ್ಲಿ ನಡೆದಿದೆ. ಯುವಕ ಯುವತಿ ಸೌದೆ ತರಲು ಹೋಗಿದ್ದು, ಕಾಡಿನಲ್ಲಿ ಅಲೆದಡುತ್ತಿದ್ದ ವೇಳೆ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ವರದಿಗಳ ಪ್ರಕಾರ ಯುವಕ ಯುವತಿಯನ್ನು ಬಲವಂತವಾಗಿ ವಿವಸ್ತ್ರಗೊಳಿಸಿ, ಅಸಭ್ಯ ರೀತಿಯಲ್ಲಿ...

ಎಸ್ಪಿ ಮೇಡಂ.. ರಕ್ಷಣೆ ಕೊಡಿ: ಕೈ ಕಳೆದುಕೊಂಡ ಮಂಡ್ಯದ ರೌಡಿಶೀಟರ್ ನಿಂದ ವಿಡಿಯೋ ರೆಕಾರ್ಡ್

2 days ago

ಮಂಡ್ಯ: ಎಸ್ಪಿ ಮೇಡಂ ನೀವು ತುಂಬಾ ನಿಷ್ಟಾವಂತರು ಅಂತಾರೆ. ನಿಮ್ಮ ಮೇಲೆ ತುಂಬಾ ನಂಬಿಕೆಯಿಟ್ಟಿದ್ದೇನೆ ರಕ್ಷಣೆ ಕೊಡಿ ಅಂತಾ ರೌಡಿಶೀಟರೊಬ್ಬ ವಿಡಿಯೋ ರೆಕಾರ್ಡ್ ಮಾಡಿ ಎಸ್ಪಿಗೆ ಕಳುಹಿಸಿ ಮೊರೆಯಿಟ್ಟಿದ್ದಾನೆ. ಇತ್ತೀಚೆಗೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ 21 ವರ್ಷದ ರೌಡಿ ಶೀಟರ್...

ಟ್ರ್ಯಾಕ್ ದಾಟಲು ವೃದ್ಧ ಗೂಡ್ಸ್ ರೈಲಿನ ಕೆಳಗೆ ನುಗ್ಗಿದ ತಕ್ಷಣ ಚಲಿಸಲು ಶುರುವಾಯ್ತು ರೈಲು – ಮುಂದೇನಾಯ್ತು? ವಿಡಿಯೋ ನೋಡಿ

4 days ago

ಭೋಪಾಲ್: ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದು, ರೈಲು ಡಿಕ್ಕಿಯಾಗಿ ಅಥವಾ ಇನ್ನೂ ಹಲವಾರು ಸಂದರ್ಭಗಳಲ್ಲಿ ವ್ಯಕ್ತಿ ಪವಾಡಸದೃಶವಾಗಿ ಬದುಕುಳಿರುವ ಬಗ್ಗೆ ಅನೇಕ ಬಾರಿ ಕೇಳಿದ್ದಿವಿ. ಹೀಗೆ ಮಧ್ಯಪ್ರದೇಶದಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ. ಭಾನುವಾರದಂದು ಇಲ್ಲಿನ ಸತ್ನಾ ರೈಲ್ವೆ ನಿಲ್ದಾಣದಲ್ಲಿ ವೃದ್ಧರೊಬ್ಬರ...

ಶಾಕಿಂಗ್ ವಿಡಿಯೋ: ಬುಲೆಟ್ ಗುದ್ದಿದ ರಭಸಕ್ಕೆ ನೂರು ಅಡಿ ದೂರಕ್ಕೆ ಹೋದ ಬಾಲಕ

4 days ago

ಹೈದರಾಬಾದ್: ತೆಲಂಗಾಣ ರಾಜ್ಯದ ಕರೀಂನಗರ ಜಿಲ್ಲೆಯಲ್ಲಿ ಭಾನುವಾರ ಭಾರೀ ಅಪಘಾತವೊಂದು ನಡೆದಿದ್ದು ಬೈಕ್ ಗುದ್ದಿದ ರಭಸಕ್ಕೆ ಬಾಲಕನೊಬ್ಬ ಮೃತಪಟ್ಟಿದ್ದಾನೆ. ತನ್ನ ಇಬ್ಬರು ಮಕ್ಕಳ ಜೊತೆ ಬಸ್ ನಿಲ್ದಾಣದಲ್ಲಿ ತಾಯಿಯೊಬ್ಬರು ನಿಂತಿದ್ದರು. ಈ ವೇಳೆ ಬಸ್ ಬಂದು ನಿಲ್ಲುತ್ತಿದ್ದಂತೆ 7 ವರ್ಷದ ಬಾಲಕ...

ವಿಡಿಯೋ: ಹುಡುಗನ ಕಿವಿಯಿಂದ ಜೀವಂತ ಹುಳುಗಳನ್ನ ಹೊರತೆಗೆದ ವೈದ್ಯರು!

6 days ago

ಅಸ್ತಾನಾ: ವೈದ್ಯರು ಹುಡುಗನೊಬ್ಬನ ಕಿವಿಯಲ್ಲಿದ್ದ ಹುಳುಗಳನ್ನ ಜೀವಂತವಾಗಿ ಹೊರತೆಗೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿರೋದು ಕಜಕಿಸ್ತಾನದಲ್ಲಿ. ಹುಡುಗನೊಬ್ಬ ಕಿವಿ ನೋವೆಂದು ವೈದ್ಯರ ಬಳಿ ಹೋಗಿದ್ದ. ಆದ್ರೆ ನಂತರ ವೈದ್ಯರು ಆತನ ಕಿವಿಯಿಂದ ಸುಮಾರು 15-20ಕ್ಕೂ...

ವಿಡಿಯೋ: ಹೆಣ್ಣುಮಗು ಹೆತ್ತಿದಕ್ಕೆ ಪತಿ ಮನೆಯವರಿಂದ ಮಹಿಳೆ ಮೇಲೆ ಹಾಕಿಸ್ಟಿಕ್‍ನಿಂದ ಹಲ್ಲೆ

6 days ago

ಪಂಜಾಬ್: ಹೆಣ್ಣು ಮಗುವನ್ನು ಹೆತ್ತಿದ್ದಕ್ಕೆ ಮಹಿಳೆಯೊಬ್ಬರನ್ನು ಆಕೆಯ ಪತಿ ಮನೆಯವರು ಮನಸೋ ಇಚ್ಛೆ ಥಳಿಸಿರುವ ಘಟನೆ ಪಂಜಾಬ್‍ನ ಪಾಟಿಯಾಲದಲ್ಲಿ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಪಾಟಿಯಾಲ ನಿವಾಸಿ ಮೀನಾ ಕಶ್ಯಪ್ ಎಂಬವರು ಹಲ್ಲೆಗೊಳಗಾದ ಮಹಿಳೆ. ಮೀನಾ ದಲ್ಜೀತ್ ಸಿಂಗ್ ಎಂಬವರನ್ನು...

ನಾಗರಹಾವು ಮತ್ತೊಂದು ನಾಗರಹಾವನ್ನು ನುಂಗಿತ್ತು: ಅಪರೂಪದ ವಿಡಿಯೋ ನೋಡಿ

7 days ago

ತುಮಕೂರು: ನಾಗರಹಾವು ಪ್ರಾಣಿಗಳನ್ನು ತಿನ್ನುವುದನ್ನು ನೀವು ಕೇಳಿರಬಹುದು. ಆದರೆ ಜಿಲ್ಲೆಯ ಗುಬ್ಬಿ ತಾಲೂಕಿನ ಅಡಗೂರು ಗ್ರಾಮದಲ್ಲಿ ನಾಗರಹಾವೊಂದು ಮತ್ತೊಂದು ನಾಗರಹಾವನ್ನು ನುಂಗುವ ಮೂಲಕ ಸುದ್ದಿಯಾಗಿದೆ. ಗುರುವಾರ ರಾತ್ರಿ ಗ್ರಾಮದ ಕಾಂತರಾಜು ಅವರ ದನದ ಕೊಟ್ಟಿಗೆಗೆ ನಾಗರಹಾವೊಂದು ಬಂದಿದೆ. ಇದೇ ವೇಳೆ ಇನ್ನೊಂದು...