Wednesday, 19th July 2017

7 hours ago

ಸೇತುವೆ ಮೇಲೆ ಟಿ.ಟಿ ಪಲ್ಟಿ- 14 ಪ್ರಯಾಣಿಕರು ಸೇಫ್

ಉಡುಪಿ: ಟೆಂಪೋ ಟ್ರಾವೆಲರ್ ಪಲ್ಟಿಯಾಗಿ ಪವಾಡ ಸದೃಶ ರೀತಿಯಲ್ಲಿ 14 ಜನ ಪಾರಾದ ಘಟನೆ ಉಡುಪಿಯ ಸಂತಕಟ್ಟೆ ನಯಂಪಳ್ಳಿ ಸೇತುವೆ ಮೇಲ್ಭಾಗದಲ್ಲಿ ನಡೆದಿದೆ. ದಕ್ಷಿಣಕನ್ನಡ ಜಿಲ್ಲೆಯ ಪೂತ್ತೂರಿನಿಂದ ಸುಮಾರು 14 ಮಂದಿ ಪ್ರಯಾಣಿಕರಿದ್ದ ಟೆಂಪೋ ಟ್ರಾವೆಲರ್ ಉಡುಪಿಯ ಸಂತೆಕಟ್ಟೆ ಸಮೀಪದ ನಯಂಪಳ್ಳಿ ಸೇತುವೆ ಸಮೀಪಿಸುತ್ತಿದ್ದಂತೆ ಉರುಳಿ ಬಿದ್ದಿದೆ. ಟಿ.ಟಿ ಒಳಗಡೆ ಇದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟೆಂಪೋ ಬೀಳುತ್ತಿದ್ದಂತೆ ಒಳಗಿದ್ದವರು ತಾವೇ ಹೊರಗೆ ಬಂದಿದ್ದಾರೆ. ವಾಹನದ ಮುಂಭಾಗದ ಗಾಜು ಪುಡಿಯಾಗಿದ್ದು ಪ್ರಯಾಣಿಕರಿಗೆ ಗಾಯಗಳಾಗಿದೆ. ಬೆಳ್ಳಗ್ಗಿನಿಂದ […]

9 hours ago

ಮತ್ತೆ ಚುರುಕಾಯ್ತು ಮುಂಗಾರು ಮಳೆ – ಜಲಾಶಯಗಳಿಗೆ ಒಳಹರಿವು ಹೆಚ್ಚಳ

– ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿ – ಕೇರಳದಲ್ಲಿ ಮಳೆ – ಕಬಿನಿ ಒಳ ಹರಿವು ಹೆಚ್ಚಳ ಬೆಂಗಳೂರು: ರಾಜ್ಯದ ಹಲವೆಡೆ ಮಳೆ ಚುರುಕಾಗಿದೆ. ಕಳೆದೆರಡು ದಿನಗಳಿಂದ ಮಲೆನಾಡು ಭಾಗದಲ್ಲಿ ಮಳೆ ಚುರುಕಾಗಿತ್ತು. ಕಳೆದ ಎರಡು ಮೂರು ದಿನಗಳಿಂದ ಮೋಡದ ಮರೆಯಲ್ಲೇ ಮಳೆಯ ನಿರೀಕ್ಷೆಯಲ್ಲಿದ್ದ ಬೆಂಗಳೂರು ಜನರಿಗೆ ಇಂದು ಬೆಳಗ್ಗೆಯಿಂದ ಮಳೆಯ ದರ್ಶನವಾಗಿದೆ. ಪುನರ್ವಸು ಮಳೆಯ...

ಉಡುಪಿ ಸ್ವಾಮೀಜಿ ಇಫ್ತಾರ್ ಕೂಟ ಏರ್ಪಡಿಸಿದ್ದನ್ನು ಬೆಂಬಲಿಸ್ತೀವಿ: ಪರಮೇಶ್ವರ್

2 weeks ago

ಉಡುಪಿ: ಸಮಾಜದಲ್ಲಿ ಸಾಮರಸ್ಯ ಇರಬೇಕು ಎಂದು ಸ್ವಾಮೀಜಿ ಇಫ್ತಾರ್ ಕೂಟ ಏರ್ಪಡಿಸಿದ್ದನ್ನು ನಾವು ಬೆಂಬಲಿಸುತ್ತೇವೆ. ಅವರ ತೀರ್ಮಾನವನ್ನು ಸ್ವಾಗತಿಸುತ್ತೇವೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಪರಮೇಶ್ವರ್ ಹೇಳಿದ್ದಾರೆ. ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸ್ವಾಮೀಜಿ ಭೇಟಿಯಲ್ಲಿ...

ಉಡುಪಿ ಚಲೋ ವೇಳೆ ಗೋಮೂತ್ರ ಸಿಂಪಡಣೆ ಈಗ ಏಕಿಲ್ಲ: ಅಮೀನ್ ಮಟ್ಟು ವಿವಾದಾದ್ಮಕ ಪೋಸ್ಟ್

2 weeks ago

ಬೆಂಗಳೂರು: ಉಡುಪಿ ಮಠದಲ್ಲಿ ನಡೆದ ಇಫ್ತಾರ್ ಕೂಟಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಫೇಸ್‍ಬುಕ್‍ನಲ್ಲಿ ವಿವಾದಾತ್ಮಕವಾಗಿ ಬರಹವನ್ನು ಪೋಸ್ಟ್ ಮಾಡಿದ್ದಾರೆ. ದಲಿತರು ಉಡುಪಿ ಚಲೋ ಮಾಡಿದ್ದ ಸಂದರ್ಭದಲ್ಲಿ ಮಠದ ಶುದ್ಧೀಕರಣಕ್ಕೆ ಅನುಮತಿ ನೀಡಿದ್ದ ಪೇಜಾವರ ಶ್ರೀಗಳು ಇದೀಗ...

ಉಡುಪಿಯಲ್ಲಿ ಶ್ರೀರಾಮಸೇನೆ ಪ್ರತಿಭಟನೆ: ಪರಧರ್ಮ ದ್ವೇಷದ ಪರಮಾವಧಿ ಎಂದ ಪೇಜಾವರ ಶ್ರೀ

2 weeks ago

ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ನಡೆದ ಇಫ್ತಾರ್ ಕೂಟ ಮತ್ತು ನಮಾಜ್ ಕಾರ್ಯಕ್ರಮವನ್ನು ಖಂಡಿಸಿ ಉಡುಪಿಯಲ್ಲಿ ಶ್ರೀರಾಮಸೇನೆ ಭಜನೆ- ಪೂಜೆ ಮಾಡಿ ಪ್ರತಿಭಟನೆ ನಡೆಸಿದೆ. ನಗರದ ಸರ್ವೀಸ್ ಬಸ್ ನಿಲ್ದಾಣ ಸಮೀಪದ ಕ್ಲಾಕ್ ಟವರ್ ಮುಂಭಾಗ ಈ ಪ್ರತಿಭಟನೆ ನಡೆಯಿತು. ಶ್ರೀರಾಮಸೇನೆ...

ಮುತಾಲಿಕ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲ್ಲ: ಪೇಜಾವರ ಶ್ರೀ

3 weeks ago

ಉಡುಪಿ: ವಿಶ್ವಹಿಂದೂ ಪರಿಷತ್ ಮತ್ತು ನನ್ನ ಸಂಬಂಧಕ್ಕೆ ಭಂಗವಿಲ್ಲ. ಸಂಘ ಪರಿವಾರದವರು ಸಂಪರ್ಕ ಮಾಡಿದ್ದಾರೆ. ಅವರಿಗೆ ಸಮಾಧಾನವೂ ಇಲ್ಲ, ವಿರೋಧವೂ ಇಲ್ಲ ಎಂದಿದ್ದಾರೆ. ಹಿಂದೂಗಳಲ್ಲೂ ಕೆಲವರು ಗೋಮಾಂಸ ಭಕ್ಷಣೆ ಮಾಡ್ತಾರೆ. ಈ ಬಗ್ಗೆ ಅರಿವಿದ್ದೇ ಹೇಳಿದ್ದೇನೆ. ಯಾರು ಮಾಡ್ತಾರೆ ಅಂತ ಹೇಳಲಾರೆ...

ಉಡುಪಿ ನಗರಸಭೆಯಲ್ಲಿ ಫೈಟಿಂಗ್: ಕಾಂಗ್ರೆಸ್ ಸದಸ್ಯರಿಂದಲೇ ಸಾರ್ವಜನಿಕನ ಮೇಲೆ ಹಲ್ಲೆ

3 weeks ago

ಉಡುಪಿ: ನಗರಸಭೆ ಸಾಮಾನ್ಯ ಸಭೆಯಲ್ಲಿ ತನ್ನ ವಾರ್ಡ್ ಸದಸ್ಯೆಯ ಪರ ಹೇಳಿಕೆ ನೀಡಲು ಬಂದಿದ್ದ ವ್ಯಕ್ತಿಯೊಬ್ಬರ ಮೇಲೆ ಆಡಳಿತ ಕಾಂಗ್ರೆಸ್ ಪಕ್ಷದ ಸದಸ್ಯರು ಹಲ್ಲೆ ನಡೆಸಿದ್ದಾರೆ. ಕಾರ್ಯಕ್ರಮ ನಡೆಯುವ ವೇಳೆ ಬ್ಯಾನರ್‍ನಲ್ಲಿ ನನ್ನ ಭಾವಚಿತ್ರ ಹಾಕುತ್ತಿಲ್ಲ. ಶಾಸಕರಿಗೆ ಮಾಹಿತಿ ನೀಡದೆ ರಸ್ತೆಯೊಂದನ್ನು...

ಪೂಜೆ ವೇಳೆ ಜಾರಿ ಬಿದ್ದ ಪೇಜಾವರ ಶ್ರೀ – ಗಾಯವಾದ್ರೂ ಲಕ್ಷ ತುಳಸಿ ಅರ್ಚನೆ

3 weeks ago

ಉಡುಪಿ: ಸದಾ ಚಟುವಟಿಕೆಯಿಂದಿರುವ ಪೇಜಾವರ ಸ್ವಾಮೀಜಿ ಕಾಲು ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇಂದು ಮಧ್ಯಾಹ್ನದ ಪೂಜೆಯ ವೇಳೆಗೆ ಕಾಲುಜಾರಿ ಬಿದ್ದಿದ್ದಾರೆ ಎಂಬ ಮಾಹಿತಿ ಕೃಷ್ಣಮಠದಿಂದ ಸದ್ಯಕ್ಕೆ ಲಭ್ಯವಾಗಿದೆ. ಶ್ರೀಗಳು ಜಾರಿ ಬಿದ್ದಾಗ ಅವರ ಭುಜಕ್ಕೆ ಸಣ್ಣ ಗಾಯವಾಗಿದೆ. ತಕ್ಷಣ ಸ್ವಾಮೀಜಿಯ...