Saturday, 23rd June 2018

Recent News

2 months ago

ಕಟಪಾಡಿ ಕಟ್ಟಪ್ಪೆ ತುಳು ಚಿತ್ರದ ಆಡಿಯೋ ರಿಲೀಸ್ ಮಾಡಿದ ಕಿಚ್ಚ ಸುದೀಪ್

ಮಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ಸ್ಯಾಂಡಲ್‍ವುಡ್‍ನಿಂದ ಕೋಸ್ಟಲ್‍ವುಡ್ ಕಡೆಗೆ ಬಂದಿದ್ದು ಮಂಗಳೂರಿನಲ್ಲಿ ತುಳು ಚಿತ್ರವೊಂದರ ಆಡಿಯೋ ರಿಲೀಸ್ ಮಾಡಿದರು. ತುಳು ಚಿತ್ರ ‘ಕಟಪಾಡಿ ಕಟ್ಟಪ್ಪೆ’ ಅನ್ನುವ ತುಳು ಚಿತ್ರದ ಆಡಿಯೋ ರಿಲೀಸ್‍ನ್ನು ಮಂಗಳೂರಿನ ಪುರಭವನದಲ್ಲಿ ನೆರೆವೇರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್ ತುಳು ಭಾಷೆಯನ್ನು ಮುಂದಿನ ದಿನಗಳಲ್ಲಿ ಮಾತನಾಡಲು ಪ್ರಯತ್ನಿಸುತ್ತೇನೆ ಅಂತಾ ಹೇಳಿದ್ರು. ಅದ್ಧೂರಿ ಆಡಿಯೋ ರಿಲೀಸ್ ಬಳಿಕ ಮಾತನಾಡಿದ ಕಿಚ್ಚ ಸುದೀಪ್, ತುಳು ಚಿತ್ರರಂಗ ಹಾಗೂ ತುಳು ಭಾಷೆಯನ್ನು ಹಾಡಿ ಹೊಗಳಿದರು. ತನ್ನ ತಾಯಿಯೂ […]

8 months ago

ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಪ್ರಧಾನಿಗೆ ಧರ್ಮಾಧಿಕಾರಿ ಮನವಿ

ಮಂಗಳೂರು: ತುಳುವನ್ನು 8 ನೇ ಪರಿಚ್ಚೇದಕ್ಕೆ ಸೇರ್ಪಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ. ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದು, ಈ ವೇಳೆ ತುಳು ಭಾಷೆಯಲ್ಲಿಯೇ ಪ್ರಧಾನಿಯವರನ್ನು ಸ್ವಾಗತಿಸಿದ ವೀರೇಂದ್ರ ಹೆಗ್ಗಡೆಯವರು ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಬಳಿಕ...