Sunday, 24th June 2018

Recent News

1 month ago

ತನ್ನ ನಾಲಗೆಯನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ ಭಕ್ತೆ!

ಭೋಪಾಲ್: 45 ವರ್ಷದ ಮಹಿಳೆಯೊಬ್ಬರು ದೇವಸ್ಥಾನದಲ್ಲಿ ದೇವಿಯ ಮುಂದೆಯೇ ನಾಲಗೆ ಕತ್ತರಿಸಿದ ಅರ್ಪಿಸಿದ ಅಚ್ಚರಿಯ ಘಟನೆಯೊಂದು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ತರ್ಸಮಾ ಗ್ರಾಮದಲ್ಲಿ ನಡೆದಿದೆ. ಬಾಯಿಂದ ರಕ್ತ ಸೋರುತ್ತಿರುವಾಗಲೇ ಪ್ರಕರಣ ಬೆಳಕಿಗೆ ಬಂದಿರುವುದಾಗಿ ಮಹಿಳೆಯ ಸಂಬಂಧಿಕರು ತಿಳಿಸಿದ್ದಾರೆ. ಆದ್ರೆ ಮಹಿಳೆ ಯಾವ ಬೇಡಿಕೆಯಿಟ್ಟು ಈ ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿಲ್ಲ. ಮಹಿಳೆ ಪ್ರತಿನಿತ್ಯ ಸ್ಥಳೀಯ ಬಿಜಾಸನ ಮಾತಾ ದೇವಸ್ಥಾನಕ್ಕೆ ತೆರಳುತ್ತಿದ್ದರು. ಎಂದಿನಂತೆ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆ ಏಕಾಏಕಿ ದೇವಿಯ ಮುಂದೆ ತನ್ನ ನಾಲಗೆಯನ್ನು ಕತ್ತರಿಸಿದ್ದಾರೆ. ಕೂಡಲೇ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. […]

4 months ago

ತನ್ನ ನಾಲಿಗೆಯನ್ನು ಕತ್ತರಿಸಿ ಶಿವನಿಗೆ ಅರ್ಪಿಸಿದ ಭಕ್ತೆ!

ರಾಯ್‍ಪುರ್: ಮಹಿಳೆಯೊಬ್ಬರು ತಮ್ಮ ನಾಲಿಗೆಯನ್ನೇ ಕತ್ತರಿಸಿ ಶಿವನಿಗೆ ಅರ್ಪಿಸಿರುವ ಆಘಾತಕಾರಿ ಘಟನೆ ಛತ್ತೀಸ್‍ಗಢದ ಕೊರ್ಬಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಫರ್ತು ರಾಮ್ ಗೊಂಡ್ ಎಂಬುವರ ಪತ್ನಿ 28 ವರ್ಷದ ಸೀಮಾಭಾಯಿ ತನ್ನ ನಾಲಿಗೆಯನ್ನೇ ಕತ್ತರಿಸಿ ಶಿವನಿಗೆ ಅರ್ಪಿಸಿದ್ದಾರೆ. ಕೊರ್ಬಾ ಜಿಲ್ಲೆಯ ನುನೆರಾ ಗ್ರಾಮದಲ್ಲಿರುವ ಶಿವ ದೇವಾಲಯದಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ.   ಸೀಮಾಭಾಯಿ...